ಕನ್ನಡ ವಾರ್ತೆಗಳು

18 ನೇ ವಾರಕ್ಕೆ ಪಾದರ್ಪಣೆ ಗೈದ ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

Pinterest LinkedIn Tumblr

Swch_barth_abhiyan_1

ಮಂಗಳೂರು,ಜೂನ್.01 : ರಾಮಕೃಷ್ಣ ಮಿಷನ್‌ ಹಮ್ಮಿಕೊಂಡಿರುವ 40 ವಾರಗಳ ಸ್ವಚ್ಛ ಮಂಗಳೂರು ಅಭಿಯಾನದ 18ನೇ ವಾರದ ಸ್ವಚ್ಚತಾ ಕಾರ್ಯವನ್ನು ನಗರದ ಪಿವಿ‌ಎಸ್ ವೃತ್ತ ಹಾಗೂ ಮಹಾತ್ಮಗಾಂಧಿರಸ್ತೆಯಲ್ಲಿ ಕೈಗೊಳ್ಳಲಾಯಿತು. ಮಠದಮುಖ್ಯಸ್ಥರಾದಸ್ವಾಮಿಜಿತಕಾಮಾನಂದಜಿಯವರ‌ಉಪಸ್ಥಿತಿಯಲ್ಲಿ ವಿಜಯವಾಣಿ ಸ್ಥಾನಿಕ ಸಂಪಾದಕರಾದ ಶ್ರೀ ಸುರೇಂದ್ರ ವಾಗ್ಳೆ‌ಅಭಿಯಾನಕ್ಕೆಚಾಲನೆ ನೀಡಿದರು.

ಸ್ವಯಂ ಸೇವಕರ ನಾಲ್ಕು ತಂಡಗಳನ್ನು ರಚಿಸಿಪಿವಿ‌ಎಸ್ ವೃತ್ತ, ಮಹಾತ್ಮಗಾಂಧಿರಸ್ತೆ, ಜೈಲ್‌ರಸ್ತೆ ಹಾಗೂ ಮಾನಸ್‌ಟವರ್ಸ್‌ಎದುರುಗಡೆ ಸ್ವಚ್ಛತಾ ಕಾರ್ಯ ವನ್ನು  ಕೈಗೊಳ್ಳಲಾಯಿತು. 100 ಅಡಿ ಬೃಹತ್‌ ತೆರೆದ ಹೊಂಡ ಇದೀಗ ಫುಟ್‌ಪಾಥ್-ಮಂಗಳೂರಿನ ಪ್ರತಿಷ್ಟಿತ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಾನಸ್‌ ಟವರ್ಸ್‌ಎದುರುಗಡೆಯಿರುವ ತೆರೆದ ಹೊಂಡ ಹಲವಾರು ವರುಷಗಳಿಂದ ದಾರಿ ಹೋಕರಿಗೆ‌ ಅಪಾಯಕಾರಿಯಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಈ ವಿಷಯದ ಮೇಲೆ ಮಾಧ್ಯಮಗಳು ವಿಶೇಷ ವರದಿಯನ್ನು ಪ್ರಕಟಿಸಿ ಪಾಲಿಕೆಯ ಗಮನ ಸೆಳೆಯುತ್ತಿದ್ದವು.

Swch_barth_abhiyan_2 Swch_barth_abhiyan_3 Swch_barth_abhiyan_4 Swch_barth_abhiyan_5 Swch_barth_abhiyan_6 Swch_barth_abhiyan_7 Swch_barth_abhiyan_8 Swch_barth_abhiyan_9 Swch_barth_abhiyan_10

ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ಶ್ರೀ ರಾಘವೇಂದ್ರ‌ ಅಮೀನ್ ನೇತೃತ್ವದಲ್ಲಿ‌ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಬೃಹತ್‌ ಕಾರ್ಯಕ್ಕೆ ಕಳೆದ ಹದಿನೈದು ದಿನಗಳಿಂದ ತಯಾರಿ ನಡೆಸಿ  ಅದನ್ನು ಕಾರ್ಯಗತಗೊಳಿಸಿದರು.  ನೂತನ ಮಾರ್ಗಸೂಚಿ ಫಲಕ ಅಳವಡಿಕೆ- ನಗರದಲ್ಲಿ ಕೆಲವು ಮಾರ್ಗದರ್ಶಿ ಫಲಕಗಳು ನವೀಕರಿಸಲು ಬಾರದ ಸ್ಥಿತಿಯಲ್ಲಿವೆ. ಅಂತಹವುಗಳ ಸ್ಥಳದಲ್ಲಿ ನೂತನ ಬೋರ್ಡಗಳನ್ನು ಅಳವಡಿಸಲು ಯೋಜಿಸಲಾಗಿದೆ. ಆ ಯೋಜನೆಯ ಪ್ರಥಮವಾಗಿ‌  ಮಹಾತ್ಮಗಾಂಧಿ ರಸ್ತೆಯ 9 ನೇ ಅಡ್ಡರಸ್ತೆಯಲ್ಲಿ ಅಳವಡಿಸಲಾಗಿದೆ.

ಮಾರ್ಗಸೂಚಿ ಫಲಕದ ನವೀಕರಣ-ಸ್ವಚ್ಛ ಫಲಕಗಳು ನಗರದ ಸೌಂದರ್ಯವನ್ನು ವೃದ್ಧಿಸಿ ಬಹು ಜನೋಪಕಾರಿಯಾಗುತ್ತವೆ. ಅಂತೆಯೇ‌ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಮೂರು ಫಲಕಗಳನ್ನು ನವೀಕರಿಸಲಾಗಿದೆ. ಹಿಂದೆ ಯಂ ಜಿ ರಸ್ತೆ‌ ಎಂದು ಬರೆಯಲಾಗಿದ್ದ ಫಲಕ‌ ಮಹಾತ್ಮಗಾಂಧಿ ರಸ್ತೆ ಎಂಬ ಪೂರ್ಣ ಹೆಸರಿನಿಂದ ಬರೆಸಲಾಗಿದೆ. ಅಲ್ಲದೆ‌ಅದರಡಿ‌ ಆಂಗ್ಲ ಭಾಷೆಯಲ್ಲಿಯೂ ನಮೂದಿಸಲಾಗಿದೆ.

Swch_barth_abhiyan_11 Swch_barth_abhiyan_12 Swch_barth_abhiyan_13 Swch_barth_abhiyan_14 Swch_barth_abhiyan_15 Swch_barth_abhiyan_16 Swch_barth_abhiyan_17 Swch_barth_abhiyan_18 Swch_barth_abhiyan_19 Swch_barth_abhiyan_20 Swch_barth_abhiyan_21 Swch_barth_abhiyan_22 Swch_barth_abhiyan_23 Swch_barth_abhiyan_24 Swch_barth_abhiyan_25 Swch_barth_abhiyan_26 Swch_barth_abhiyan_27 Swch_barth_abhiyan_28 Swch_barth_abhiyan_29 Swch_barth_abhiyan_30 Swch_barth_abhiyan_31 Swch_barth_abhiyan_32 Swch_barth_abhiyan_33 Swch_barth_abhiyan_34 Swch_barth_abhiyan_35 Swch_barth_abhiyan_36 Swch_barth_abhiyan_37

ಆಧುನಿಕ ಹುಲ್ಲುಹಾಸಿನ ಅಳವಡಿಕೆ – ಪಿವಿ‌ಎಸ್ ವೃತ್ತದಲಿರುವರಸ್ತೆ ವಿಭಾಜಕದಲ್ಲಿ ಹುಲ್ಲುಹಾಸು ನಿರ್ವಹಣೆ‌ಇಲ್ಲದೆ ಕಳೆಕಸದಿಂದ ತುಂಬಿತ್ತು. ಅದನ್ನು ಶುಚಿಗೊಳಿಸಿ ಆಧುನಿಕ ಮಾದರಿಯ ಹುಲ್ಲುಹಾಸು (ಸಿಂಥೆಟಿಕ್ ಗ್ರಾಸ್) ಅಳವಡಿಸಿ ಚೆಂದಗೊಳಿಸಲಾಗಿದೆ. ಪಿವಿ‌ಎಸ್  ವೃತ್ತದ ಸುತ್ತಮುತ್ತಲಿನ ತೋಡಿನಲ್ಲಿದ್ದ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಲಾಯಿತು.ಅಲ್ಲದೇ ಸಾರ್ವಜನಿಕರು ನಡೆದಾಡಲು ತೊಂದರೆಯಾಗುತ್ತಿದ್ದ ಕಾಲುದಾರಿಯಲ್ಲಿ ಬೀಸಾಡಿದ್ದ ಕಟ್ಟಡ ತ್ಯಾಜ್ಯವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಶುಚಿಗೊಳಿಸಲಾಗಿದೆ. ಜೈಲ್‌ ರಸ್ತೆಯತೋಡು ಸಂಪೂರ್ಣವಾಗಿ ಕಸ ತ್ಯಾಜ್ಯಗಳಿಂದ ತುಂಬಿ ದುರ್ವಾಸನೆ ಬೇರುತ್ತಿತ್ತು‌ ಅದನ್ನೂ ಸ್ವಚ್ಛಗೊಳಿಸಲಾಗಿದೆ.

ಪರ್ತಕರ್ತರ ಕೈಯಲ್ಲಿ ಪೊರಕೆ- ವಿಜಯವಾಣಿ ಪತ್ರಿಕೆಯ ಸುಮಾರು‌ ಇಪ್ಪತ್ತರಿಂದ‌ ಇಪ್ಪತ್ತೈದು ಜನ ಪತ್ರಕಾರರು ಸ್ವಯಂ ಪ್ರೇರಿತರಾಗಿ‌ ಅಭಿಯಾನದಲ್ಲಿ ಪಾಲ್ಗೊಂಡು‌  ಕೈಯಲ್ಲಿ ಪೆನ್ನಿನ ಬದಲು ಹಾರೆ ಪೊರಕೆ ಹಿಡಿದಿದ್ದು ವಿಶೇಷವಾಗಿತ್ತು. ಸ್ವತ: ಹಾರೆ – ಪಿಕಾಸಿ ಹಿಡಿದು ಗುಂಡಿತೋಡಿ ಮಾರ್ಗದರ್ಶಿ ಫಲಕ ನೆಟ್ಟರು, ರಸ್ತೆ ಗೂಡಿಸಿದರು, ತೋಡು ಶುಚಿಗೊಳಿದರು. ಮಾಧ್ಯಮಗಳು ಹುಳುಕು ಕೊಳಕು ತೋರಿಸುತ್ತವಷ್ಟೇ! ಎನ್ನುವಜನರ ಮಾತು ಸುಳ್ಳಾಗಿಸಿದರು.

ಅಭಿಯಾನದ ಪೋಷಕರಾದ‌ ಎಂಆರ್‌ಪಿಲ್‌ನಿಂದ ಬಿ‌ ಎಚ್ವಿ ಪ್ರಸಾದ ಹಾಗೂ ಶ್ರಿ ನರೇಶ್‌ಕಿಣಿಯವರ ನೇತೃತ್ವದಲ್ಲಿ‌  ಎಂಆರ್‌ಪಿಲ್‌ ಶ್ರಮದಾನ ಸ್ವಯಂ ಸೇವಕರು, ಯುವಾ ಬ್ರೀಗೇಡ್‌ನ  ಶ್ರೀ ಮಂಜಯ್ಯ ಹಾಗೂ ಅವರ ಬಳಗ, ಶ್ರೀ ಸುಜಿತ್ ಮುಂದಾಳತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಎನ್‌ಎಸ್‌ಎಸ್ ಸಂಯೋಜಕಿ ಪ್ರೊ. ವಿನಿತಾರೈ, ಆಶ್ರಮದ ಭಕ್ತರು, ಬಾಲಕಾಶ್ರಮದ ವಿದ್ಯಾರ್ಥಿಗಳು ಸ್ವಚ್ಛತಾಕೈಂಕರ್ಯದಲ್ಲಿ ಭಾಗವಹಿಸಿದ್ದರು.  ಎಂಆರ್‌ಪಿಲ್ ಈ ಅಭಿಯಾನಕ್ಕೆಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

Write A Comment