ಕನ್ನಡ ವಾರ್ತೆಗಳು

ಕಲ್ಕಟ್ಟ ಎಸ್ಸೆಸ್ಸೆಫ್ ವತಿಯಿಂದ ಉಚಿತ ಪುಸ್ತಕ ವಿತರಣೆ

Pinterest LinkedIn Tumblr

SSF_pushtaka_Vitaran

ಉಳ್ಳಾಲ,ಜೂ.01 : ಶಿಕ್ಷಣ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುವ ಸಾಧನ.ಬಡ ವಿದ್ಯಾರ್ಥಿಗಳ ಶಿಕ್ಷಣ ಬೆಳವಣಿಗೆಗೆ ತನ್ನಿಂದಾದ ಸಹಾಯ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಉತ್ತಮ ಕಾರ್ಯವಾಗಿದೆ. ಇಸ್ಲಾಂ ಧರ್ಮ ಅನುಕರಣೆ ಮಾಡಿದ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಉತ್ತಮ ಮಟ್ಟದಲ್ಲಿ ಸಹಕಾರ ನೀಡಬೇಕೆಂದು ಕೆ.ಎಚ್.ಇಬ್ರಾಹಿಂ ಮದನಿ ಕರೆ ನೀಡಿದರು.  ಅವರು ಕಲ್ಕಟದ ಮದ್ರಸ ಹಾಲ್‌ನಲ್ಲಿ ಎಸ್ಸೆಸ್ಸೆಫ್ ಮತ್ತು ಟಿ‌ಐವೈ‌ಎ ಕಲ್ಕಟ್ಟ ಇದರ ಆಶ್ರಯದಲ್ಲಿ ಭಾನುವಾರ ನಡೆದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಕಟ್ಟ ಮಸೀದಿಯ ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ವಹಿಸಿದ್ದರು. ಬಳಿಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ  ಮುಸ್ತಫ ಕಮಾಲ್, ಸಿನಾನ್ ಹನೀಫಿ, ಕಲ್ಕಟ್ಟ ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಕಂಡಿಕ, ಮೊದಿನ್ ಕುಂಞಿ ಕಲ್ಕಟ್ಟ, ಎಸ್‌ವೈ‌ಎಸ್ ಅಧ್ಯಕ್ಷ ಮೋನು ಕಲ್ಕಟ್ಟ,ಅಬ್ಬಾಸ್ ಮದನಿ, ಮುಹಮ್ಮದ್ ಮದನಿ, ಹಸೈನಾರ್ ತಟ್ಲ, ಅಬ್ದುಲ್ ರಹ್ಮಾನ್ ರಿಝ್ವಿ, ಎಸ್ಸೆಸ್ಸೆಫ್ ಅಧ್ಯಕ್ಷ ಕೆ.ಐ. ಅಬ್ದುಲ್ ರಝಾಕ್, ನಿಸಾರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು ಹಬೀಬ್ ಅಹ್ಸನಿ ಅತಿಥಿಗಳನ್ನು ಸ್ವಾಗತಿಸಿದರು. ಕೆ.ಎಂ. ಮುಹಮ್ಮದ್ ಶರೀಫ್ ಧನ್ಯವಾದ ಸಮರ್ಪಿಸಿದರು.

_ಎಂ .ಆರೀಫ್ ಕಲ್ಕಟ್ಟ

Write A Comment