ಕನ್ನಡ ವಾರ್ತೆಗಳು

ಹೋರಾಟದಿಂದ ಆರ್.ಟಿ.ಇ ಸೀಟು ದಕ್ಕಸಿಕೊಂಡ ಪೋಷಕರು

Pinterest LinkedIn Tumblr

Rto_letter_parents

ಉಡುಪಿ,ಜೂ.01: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್.ಟಿ.ಇ) ಕಾಯಿದೆ-2009 ರ ಅಡಿಯಲ್ಲಿ, ಉಚಿತ ದಾಖಲಾತಿಯನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಹಾಗೂ ಇತರ ವೆಚ್ಚವನ್ನು ಸಂದಾಯ ಮಾಡುವಂತೆ, ತಮ್ಮ ಮಕ್ಕಳ ಸೀಟುಗಳನ್ನು ಖಾತ್ರಿ ಪಡಿಸಿಕೊಳ್ಳುವಂತೆ, ತಪ್ಪಿದಲ್ಲಿ ಶಾಲೆಯನ್ನು ಬಿಟ್ಟು ಹೋಗುವಂತೆ ಎಚ್ಚರಿಕೆಯನ್ನು ನೀಡಿ, ಉಚಿತ ದಾಖಲಾತಿಯನ್ನು ನಿರಾಕರಿಸಿ, ವಿದ್ಯಾರ್ಥಿ ಪೋಷಕರಿಗೆ ನೋಟೀಸು ಜಾರಿಗೊಳಿಸಿರುವ ಖಾಸಾಗಿ ಶಾಲಾ ಆಡಳಿತ ಮಂಡಳಿಯ ದರ್ಪದ ನಡೆಯ ವಿರುದ್ಧ ಇಲಾಖಾಧಿಕಾರಿಗಳಿಗೆ ದೂರು ನೀಡಿ, ಆರ್.ಟಿ.ಇ ಸೀಟು ದಕ್ಕಸಿಕೊಳ್ಳುವಲ್ಲಿ ವಿದ್ಯಾರ್ಥಿ ಪೋಷಕರುಗಳು ಯಶಸ್ಸಾಗಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೆಳ್ಮಣ್ಣು ಶ್ರೀ ಲಕ್ಷ್ಮೀ ಜನಾರ್ಧನ ಶಾಲೆಯು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಎಂದು ಮಾನ್ಯತೆಯನ್ನು ಬದಲಾಯಿಸಿಕೊಂಡಿದ್ದು, ಆ ಶಾಲೆಯಲ್ಲಿ ಆರ್.ಟಿ.ಇ ಕಾಯಿದೆ-2009 ಅಡಿಯಲ್ಲಿ, ಉಚಿತ ದಾಖಲಾತಿಯನ್ನು ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ಬಗ್ಗೆ ಸರಕಾರ ಇಲಾಖಾಧಿಕಾರಿಗಳು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡದೇ ಇದ್ದ ಕಾರಣ ಮಕ್ಕಳಿಗೆ ತೊಂದರೆಯಾಗಿತ್ತು.

ಈ ಬಗ್ಗೆ ಮಂಗಳೂರು ಚೈಲ್ಡ್‌ಲೈನ್-1098, ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಮತ್ತು ವಿದ್ಯಾರ್ಥಿ ಪೋಷಕರುಗಳು ಸೇರಿ ಸರಕಾರ ಹಾಗೂ ಇಲಾಖಾಧಿಕಾರಿಗಳಿಗೆ ದೂರನ್ನು ಸಲ್ಲಿಸಿ, ಆರ್.ಟಿ.ಇ ಕಾಯಿದೆಯ ನಿಯಮದಂತೆ, ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವ ವರೇಗೆ, ಉಚಿತ ಸವಲತ್ತನ್ನು ನೀಡುವಂತೆ ಹಲವಾರು ಬಾರಿ ಸರಕಾರವನ್ನು ಒತ್ತಾಯಿಸಲಾಯಿತು. ಶಾಲೆಯ ಮಾನ್ಯತೆ ಬದಲಾವಣೆಯಿಂದ ಆರ್.ಟಿ.ಇ ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದಕ್ಕೆ ಸರಕಾರ ಹಾಗೂ ಇಲಾಖಾಧಿಕಾರಿಗಳು ಹೊಣೆಗಾರರಾಗಿದ್ದು, ಈ ಬಗ್ಗೆ ಸೂಕ್ತ ಕ್ರಮವನ್ನು ಜರುಗಿಸುವಂತೆ, ಕಳೆದ 6 ತಿಂಗಳಿನಿಂದ ಇಲಾಖಾಧಿಕಾರಿಗಳಿಗೆ ತಿಳಿಸಿ ಮನವರಿಕೆಯನ್ನು ಮಾಡಿಕೊಡಲಾಯಿತು. ಪೋಷಕರ ಮನವಿಗೆ ಸ್ಪಂದಿಸಿದ ಸರಕಾರ, ಆರ್.ಟಿ.ಇ ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಡೆಯಬಾರದು, ಶುಲ್ಕವನ್ನು ಸರಕಾರವೇ ಭರಿಸುತ್ತದೆ ಎಂದೂ, ಆರ್.ಟಿ.ಇ ಅಡಿಯಲ್ಲಿ ದಾಖಲಾದ ವಿದ್ಯಾಥಿಗಳಿಂದ ಯಾವುದೇ ಶುಲ್ಕವನ್ನು ವಸೂಲು ಮಾಡುವಂತಿಲ್ಲ. ಶಾಲಾಡಳಿತ ಶುಲ್ಕ ಪಾವತಿಸುವಂತೆ ಪೋಷಕರಿಗೆ ನೋಟಿಸು ನೀಡಿರುವುದು ಆರ್.ಟಿ.ಇ ಕಾಯಿದೆಯ ಉಲ್ಲಂಘನೆ ಎಂದೂ ಮಕ್ಕಳಿಂದ ಯಾವುದೇ ಶುಲ್ಕವನ್ನು ವಸೂಲು ಮಾಡಬಾರದು, ತಪ್ಪಿದ್ದಲ್ಲಿ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದೂ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂತಿಮ ನೋಟಿಸು ನೀಡಿ ಆದೇಶಿಸಿರುತ್ತಾರೆ.

ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿಯನ್ನು ನೀಡಿರುತ್ತಾರೆ. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಭೇಟಿ ನೀಡಿದ ವಿದ್ಯಾರ್ಥಿ ಪೋಷಕರು ಹಾಗೂ ಈ ಬಗ್ಗೆ ಶ್ರಮಿಸಿದ ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯೋಜನಾಧಿಕಾರಿಯಾದ ಕು|| ಜ್ಯೋತಿ ಭಂಡಾರಿ ಬೋಳ, ಕು|| ಪುಷ್ಪಲತಾ, ಕಾರ್ಕಳ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಕು|| ಸುಶ್ಮಿತಾ, ಚೈಲ್ಡ್‌ಲೈನ್-1098 ಮಂಗಳೂರುನ ಶ್ರೀ ನಾಗರಾಜ್ ಪಣಕಜೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು ಸರಕಾರದ ಆದೇಶ ಪ್ರತಿಯನ್ನು ಕೈಯಲ್ಲಿ ಎತ್ತಿಹಿಡಿದು ಸಂತಸ ವ್ಯಕ್ತಪಡಿಸಿರುತ್ತಾರೆ.

Write A Comment