ಕನ್ನಡ ವಾರ್ತೆಗಳು

ಎಲ್ಲೆಡೆ ಇಂದು ಶಾಲಾ ಪ್ರಾರಂಭೋತ್ಸವದ ಸಂಭ್ರಮ

Pinterest LinkedIn Tumblr

school_start_childrn_1

ಮಂಗಳೂರು,ಜೂನ್.01  : ಮಕ್ಕಳು ತಮ್ಮ ಗರಿಗರಿಯಾದ ಸಮವಸ್ತ್ರ, ಹೊಚ್ಚ ಹೊಸ ಪುಸ್ತಕ, ಚೀಲಗಳ ಜೊತೆಗೆ ಶಾಲೆಗೆ ಹೋಗಲು ಬೇಸರದಿಂದಲೇ ಅಣಿಯಾಗುತ್ತಿದ್ದರೆ, ಬೆಂಚು, ಡೆಸ್ಕುಗಳು ಧೂಳನ್ನು ಕೊಡವಿಕೊಂಡು ಮಕ್ಕಳನ್ನು ಪ್ರೀತಿಯಿಂದ ಕರೆಯುತ್ತಿವೆ. ಈ ಬಾರಿ ಶಿಕ್ಷಕರಿಗೆ ಚುನಾವಣಾ ಕಾರ್ಯದ ಜವಾಬ್ದಾರಿ ಒಂದೆಡೆ ಆದರೆ ಇದೀಗ ಶಾಲೆ ಆರಂಭದ ತಯಾರಿ. ಮೊನ್ನೆ ಮೊನ್ನೆಯವರೆಗೆ ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ಅಂಕಲ್‌‌‌‌‌‌‌ ಮನೆಗಳಿಗೆ, ಪಿಕ್‍ನಿಕ್ ಎಂದು ತಿರುಗಾಡುತ್ತಿದ್ದ ಮಕ್ಕಳು ಇದೀಗ ಶಾಲೆಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಎರಡು ತಿಂಗಳ ಬೇಸಿಗೆ ರಜೆ ಕಳೆದೇ ಹೋಯಿತು. ಶಾಲೆ ಆರಂಭವಾಯಿತು. ಸೋಮವಾರ ಎಲ್ಲಾ ಶಾಲೆಗಳಲ್ಲಿ ಪ್ರಾರಂಭೋತ್ಸವದ ಸಂಭ್ರಮ

school_start_childrn_2 school_start_childrn_3 school_start_childrn_4 school_start_childrn_5 school_start_childrn_6 school_start_childrn_7

ಜೊತೆಗೆ ಆರಂಭೋತ್ಸವ ದಿನದಂದು ಮಕ್ಕಳ ಜೊತೆಗೆ ಶಾಲೆಗಳಲ್ಲಿ ಶ್ರಮದಾನ ಮಾಡಲು ಸೂಚನೆಯಾಗಿದೆ. ಇದೆಲ್ಲವನ್ನೂ ನಿಭಾಯಿಸೋದು ಹೇಗೆ ಎಂಬ ಚಿಂತೆ ಶಿಕ್ಷಕರನ್ನು ಕಾಡುತ್ತಿದೆ. ಜೂ.1ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಶಾಲೆಗೆ ಆಗಮಿಸುವ ಮಕ್ಕಳನ್ನು ಪ್ರೀತಿ-ಆದರದಿಂದ ಸ್ವಾಗತಿಸುವ ಕಾರ್ಯಕ್ರಮವಿದೆ. ಇದಕ್ಕಾಗಿ ಶಾಲೆಗಳ ದ್ವಾರ-ಬಾಗಿಲುಗಳನ್ನು ತಳಿರು ತೋರಣ, ಬಣ್ಣದ ಕಾಗದಗಗಳಿಂದ ಸಿಂಗರಿಸಲಾಗುತ್ತದೆ.

ಇನ್ನು ಪ್ರಸಕ್ತ ಸಾಲಿನ 1ರಿಂದ 10ನೆ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು 16,72,513 ಪಠ್ಯಪುಸ್ತಕಗಳ ಬೇಡಿಕೆಯನ್ನಿಟ್ಟಿತ್ತು. ಈ ಪೈಕಿ 15,92,344 ಪಠ್ಯ ಪುಸ್ತಕಗಳನ್ನು ಸರ್ಕಾರ ಪೂರೈಕೆ ಮಾಡಿದೆ

Write A Comment