ಕನ್ನಡ ವಾರ್ತೆಗಳು

ಎಂ.ಎ ಪರೀಕ್ಷೆ ಬರೆದ ಆರೋಗ್ಯ ಸಚಿವ ಯು. ಟಿ. ಖಾದರ್ .

Pinterest LinkedIn Tumblr

Khadar_MA_Exam

ಮಂಗಳೂರು,ಮೇ.19 : ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆಸ್ಪಿನ್ ಟೌನ್ ಕಾಲೇಜಿನಲ್ಲಿ ಆರೋಗ್ಯ ಸಚಿವ ಯು. ಟಿ. ಖಾದರ್ ಮಂಗಳವಾರ ಸಾರ್ವಜನಿಕ ಆಡಳಿತ ವಿಷಯದ ಕುರಿತ ಎಂಎ ಪರೀಕ್ಷೆ ಬರೆದರು. ಮೇ 27ರ ತನಕ ಈ ಪರೀಕ್ಷೆ ನಡೆಯಲಿದೆ.

ಬಿಎ. ಎಲ್‍ಎಲ್‍ಬಿ ಪದವೀಧರರಾಗಿರುವ ಸಚಿವ ಯು.ಟಿ ಖಾದರ್‌ ನ್ಯಾಯವಾದಿಯೂ ಆಗಿದ್ದು, ಸಾರ್ವಜನಿಕ ಆಡಳಿತದ ಆಳ ಅಗಲ ಅರಿಯಲು ಎಂ ಎ ವ್ಯಾಸಾಂಗ ಮಾಡುತ್ತಿದ್ದಾರೆ. ಆಡಳಿತದ ಪ್ರಾಯೋಗಿಕ ಜ್ಞಾನದ ಜತೆಗೆ ಥಿಯರಿಯನ್ನು ಅಧ್ಯಯನ ಮಾಡಬೇಕು. ಇದರಿಂದ ಆಡಳಿತದ ಸಮರ್ಥ ನಿರ್ವಹಣೆ ಸಾಧ್ಯ ಎಂಬ ಉದ್ದೇಶದಿಂದ ಯು.ಟಿ. ಖಾದರ್‌ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2014-15ರಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದಿದ್ದರು.

Write A Comment