ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿಯಲಿರುವ ಭಾರತೀಯ ಬಾಬ್ಬಿ

Pinterest LinkedIn Tumblr

Bobby_Jindal

ವಾಷಿಂಗ್ಟನ್, ಮೇ19: ಶ್ವೇತಭವನದ ಮೇಲೆ ಕಣ್ಣಿಟ್ಟಿರುವ ಲೋಯಿಸಿಯಾನಾ ರಾಜ್ಯಪಾಲ ಭಾರತ ಮೂಲದ ಬಾಬ್ಖಿ ಜಿಂದಾಲ್, 2016ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಪರಿಸ್ಥಿತಿ ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸಿದ್ದಾರೆ.

ರಿಪಬ್ಲಿಕ್ ಪಾರ್ಟಿಯಿಂದ ಕಣಕ್ಕಿಳಿಯುವ ಸನ್ನಾಹದಲ್ಲಿರುವ ಜಿಂದಾಲ್, ಒಂದು ವೇಳೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಅಮೆರಿಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಭಾರತ ಮೂಲದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನನ್ನ ಈ ಯೋಜನೆ ಅತ್ಯಂತ ಗಂಭೀರ ವಿಷಯವಾಗಿದ್ದು, ಇದರ ಬಗ್ಗೆ ನಾನು ಸಾಕಷ್ಟು ವಿಚಾರ ನಡೆಸುತ್ತಿದ್ದೇ. ಬರುವ ಜೂನ್‌ನಲ್ಲಿ ನನ್ನ ರಾಜ್ಯಪಾಲ ಅವಧಿ ಮುಗಿಯಲಿದ್ದು, ಆ ಬಳಿಕವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು 43 ವರ್ಷದ ಬಾಬ್ಖಿ ಜಿಂದಾಲ್ ಹೇಳಿದ್ದಾರೆ.

Write A Comment