ಕನ್ನಡ ವಾರ್ತೆಗಳು

ಮೇಘಾಳ ಮರಣ ಮ್ರದಂಗ ಬಾರಿಸಿತೇ ಪಿಯುಸಿಯ ಫಲಿತಾಂಶ..!?

Pinterest LinkedIn Tumblr

Megha_Suside_Kota

ಕುಂದಾಪುರ: ಪಿಯುಸಿ ಪರೀಕ್ಷೆ ಬರೆದಿದ್ದ ಯುವತಿಯೋರ್ವಳು ಪರೀಕ್ಷೆಯ ಫಲಿತಾಂಶಕ್ಕೆ ಬೆದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡರಾತ್ರಿ ಉಡುಪಿ ತಾಲೂಕಿನ ಕೋಟ ಸಮೀಪದ ವಡ್ಡರ್ಸೆ ಯಾಳಹಕ್ಲು ಎಂಬಲ್ಲಿ ನಡೆದಿದೆ. ಆದ್ರೆ ಸೋಮವಾರದ ಫಲಿತಾಂಶದಲ್ಲಿ ಆಕೆ ಉತ್ತೀರ್ಣಳಾಗಿದ್ದಳು.

ವಡ್ಡರ್ಸೆ ಯಾಳಹಕ್ಲು ನಿವಾಸಿ ಮೇಘಾ ಶೆಟ್ಟಿ (17) ಆತ್ಮಹತ್ಯೆಗೆ ಶರಣಾದವಳು.

ಘಟನೆ ವಿವರ: ಬ್ರಹ್ಮಾವರದ ಕ್ರಾಸ್-ಲ್ಯಾಂಡ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಈಕೆ ಪರೀಕ್ಷೆಯನ್ನು ಬರೆದಿದ್ದಳು. ಆದರೇ ಸೋಮವಾರದ ದ್ವಿತಿಯ ಪಿಯುಸಿ ಪರೀಕ್ಷೆಯ ಪಲಿತಾಂಶದಲ್ಲಿ ತಾನು ಅನುತ್ತೀರ್ಣಳಾಗುತ್ತೇನೆಂಬ ಭಯದಿಂದ ರಾತ್ರಿ ಸುಮಾರಿಗೆ ಮನೆಯ ಮಹಡಿ ಮೇಲಿನ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪಾಸಾದ ನತದ್ರಷ್ಟೆ: ಫಲಿತಾಂಶಕ್ಕೆ ಬೆದರಿ ದುಡುಕಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಕೊನೆಗೂ ಪಾಸಾಗಿ ಹೋಗಿದ್ದಾಳೆ. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಈಕೆ 358 ಅಂಕಗಳನ್ನು ಪಡೆದು ದ್ವಿತೀಯ ದರ್ಜೆಯಲ್ಲಿ ಉತ್ತಿರ್ಣಳಾಗಿದ್ದಾಳೆ. ಅಲ್ಲದೇ 2 ಅಂಕಗಳ ಅಂತರದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದನ್ನು ತಪ್ಪಿಸಿಕೊಂಡ ನತದ್ರಷ್ಟೆ ಈಕೆ. ಆದರೇ ಪಾಸಾದ ಆ ಫಲಿತಾಂಶವನ್ನು ನೋಡುವ ಭಾಗ್ಯ ಆಕೆಗೆ ಇರದೇ ಹೊಯಿತೇ..? ಕಾಲೇಜಿಗೆ ಹೊಗಬೇಕಾಗಿದ್ದ ಹುಡುಗಿ ಇದೀಗಾ ಸ್ಮಶಾನಕ್ಕೆ ಹೆಣವಾಗಿ ಹೋಗಿ ಊರಿಗೆ ಊರು ಸೂತಕದ ಛಾಯೆಯನ್ನ ಅನುಭವಿಸುವಂತಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಈಕೆಯ ಸಾವಿಗೆ ಕಣ್ಣೀರು ಮಿಡಿದಿದ್ದಾರೆ.

ತಂದೆ ತಾಯಿಯರನ್ನು ಕಳೆದುಕೊಂಡಿದ್ದ ಈಕೆ ಅಜ್ಜ-ಅಜ್ಜಿ ಹಾಗೂ ಚಿಕ್ಕಪ್ಪನ ಆಶ್ರಯದಲ್ಲಿ ವಾಸವಿದ್ದಳು.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment