ರಾಷ್ಟ್ರೀಯ

ಲೀವ್ ಇನ್ ಟುಗೆದರ್ ಸಂಗಾತಿಗೆ ವಿಷ ಕುಡಿಸಿದ ಯುವಕ

Pinterest LinkedIn Tumblr

1613maxresdefault

27 ವರ್ಷದ ಯುವತಿಯೊಂದಿಗೆ ಲೀವ್ ಇನ್ ಟುಗೆದರ್ ಸಂಬಂಧದಲ್ಲಿ ಜೀವನ ನಡೆಸುತ್ತಿದ್ದ ಯುವಕನೋರ್ವ ಆಕೆಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ತನ್ನ ಮಗಳು ರೀನಾಳನ್ನು ಆಕೆಯ ಜೀವನ ಜತೆಗಾರನು ಕಳೆದ ನಾಲ್ಕು ವರ್ಷಗಳಿಂದ ತನ್ನ ಮನೆಯಲ್ಲಿ ಕೂಡಿ ಹಾಕಿ ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಆಕೆಯನ್ನು ರಕ್ಷಿಸುವಂತೆ ಯುವತಿಯ ತಾಯಿ ನಾಲ್ಕು ದಿನಗಳ ಹಿಂದಷ್ಟೇ ಮಹಿಳೆಯ ತಾಯಿಯು ಪೊಲೀಸರಿಗೆ ದೂರು ನೀಡಿದ್ದಳು.

ಅಲ್ಲದೇ ಇದೀಗ ರೀನಾಗೆ ಆಕೆಯ ಜೀವನ ಜತೆಗಾರ ನರೇಂದ್ರನು ವಿಷಯುಕ್ತ ದ್ರಾವಣವನ್ನು ಬಲವಂತವಾಗಿ ಕುಡಿಸಿದ್ದು ಇದರಿಂದ ಆಕೆ ರಕ್ತವನ್ನು ಕಾರಿ ತೀವ್ರವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ತಾಯಿ ಆರೋಪಿಸಿದ್ದಾಳೆ.

ವಿಷ ಪ್ರಾಶನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೀನಾ ಸೋಮವಾರ ನಸುಕಿನ 4 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದು ಈ ಹಿನ್ನೆಲೆಯಲ್ಲಿ ಆರೋಪಿ  ನರೇಂದ್ರನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆ.302 ರ ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment