ಕನ್ನಡ ವಾರ್ತೆಗಳು

ಸಂಕಮಾರ್ ಅವಳಿ ಸಹೋದರಿಯರ ಸಾಧನೆ

Pinterest LinkedIn Tumblr

Twins_topper_mulky

ಮೂಲ್ಕಿ,ಮೇ.18 : ಹಳೆಯಂಗಡಿ ಬಳಿಯ ಜಾನಪದ ವಿದ್ವಾಂಸ ಹಾಗೂ ಮಂಗಳೂರಿನ ಸೈಂಟ್.ಅಲೋಶಿಯಸ್ ಕಾಲೇಜಿನ ಡಾ.ಗಣೇಶ್ ಅಮಿನ್ ಸಂಕಮಾರ್ ಮತ್ತು ಉಪನ್ಯಾಸಕಿ ಜಯಂತಿ ಸಂಕಮಾರ್ ರವರ ಅವಳಿ ಪುತ್ರಿಯರಾದ ಅನು ಸಂಕಮಾರ್ ಮತ್ತು ಭವ ಸಂಕಮಾರ್‌ರವರು ಸೋಮವಾರ ಪ್ರಕಟಗೊಂಡ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಸಾಧನೆ ಮಾಡಿದ್ದಾರೆ.

ಭವ ಸಂಕಮಾರ್‌ರವರು 580 ಅಂಕಗಳನ್ನು ಪಡೆದು ಶೇ. 96.04 ಸಾಧನೆ ಮಾಡಿದ್ದರೆ, ಅನು ಸಂಕಮಾರ್ 570 ಅಂಕಗಳನ್ನು ಪಡೆದು ಶೇ. 96 ಸಾಧನೆ ಮಾಡಿದ್ದಾರೆ, ಇವರಿಬ್ಬರು ಸುರತ್ಕಲ್‌ನ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ವರದಿ ಕೃಪೆ : ನರೇಂದ್ರ ಕೆರೆಕಾಡ್

Write A Comment