ಕನ್ನಡ ವಾರ್ತೆಗಳು

ಬಳ್ಕೂರು: ನಾಯಿಕಾಟಕ್ಕೆ ಬಲಿಯಾಯ್ತಾ ಜಿಂಕೆ ಮರಿ..?

Pinterest LinkedIn Tumblr

ಕುಂದಾಪುರ: ಜಿಂಕೆ ಮರಿಯೊಂದು ದಾರಿ ತಪ್ಪಿ ಊರಿಗೆ ಬಂದಾಗ ಬೀದಿನಾಯಿಗಳ ದಾಳಿಗೆ ಓಡಿ ಸುಸ್ತಾಗಿ ಹೃದಯಾಘಾತದಿಂದ ಜಿಂಕೆ ಮರಿಯೊಂದು ಬಲಿಯಾದ ಘಟನೆ ಗುರುವಾರ ಸಂಜೆ ಬಳ್ಕೂರು ಜಪ್ತಿ ಸಂಪರ್ಕ ರಸ್ತೆ ಸಮೀಪ ನಡೆದಿದೆ.

Deer_Dead_Balkur (10) Deer_Dead_Balkur (2) Deer_Dead_Balkur (8) Deer_Dead_Balkur (6) Deer_Dead_Balkur (3) Deer_Dead_Balkur (7) Deer_Dead_Balkur Deer_Dead_Balkur (1) Deer_Dead_Balkur (5) Deer_Dead_Balkur (9) Deer_Dead_Balkur (4)

ಗುರುವಾರ ಸಂಜೆ ಸುಮಾರು ಎರಡು ಗಂಟೆಯ ಸುಮಾರಿಗೆ ಬಳ್ಕೂರಿನಿಂದ ಜಪ್ತಿ ಸಂಪರ್ಕ ರಸ್ತೆ ಸಮೀಪ ಸುಬ್ಬ ಆಚಾರಿ ಎಂಬುವರ ಮನೆ ಸಮೀಪದ ಗದ್ದೆಯೊಂದರಲ್ಲಿ ಸುಮಾರು ನಾಲ್ಕೈದು ಬೀದಿ ನಾಯಿಗಳು ಜಿಂಕೆ ಮರಿಯೊಂದನ್ನು ಅಟ್ಟಿಸಿಕೊಂಡು ಓಡಾಡಿಸಿವೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ವೆಂಕಟೇಶ್ ಮೂಡ್ಕೇರಿಯವರ ಪುತ್ರ ಶ್ರವಣ ಎಂಬ ಪುಟ್ಟ ಬಾಲಕ ಬೊಬ್ಬೆ ಹೊಡೆದಿದ್ದು, ತಂದೆಯನ್ನು ಕರೆದಿದ್ದಾನೆ. ಮನೆಯವರು ಬಂದ ಕಾರಣ ನಾಯಿಗಳು ಜಿಂಕೆ ಮರಿಯನ್ನು ಬಿಟ್ಟು ಓಡಿವೆಯಾದರೂ ಓಡಿ ಓಡಿ ಸುಸ್ತಾಗಿ ಹೃದಯಾಘಾತದಿಂದ ಜಿಂಕೆ ಮರಿ ಸತ್ತಿದೆ.

ಸುಮಾರು ನಾಲ್ಕು ತಿಂಗಳ ಪ್ರಾಯವಿದ್ದಿರಬಹುದಾದ ಜಿಂಕೆ ಮರಿ ಮುದ್ದಾಗಿದ್ದು ಸಂಜೆ ಸುಮಾರು ಆರು ಗಂಟೆಯವರೆಗೂ ನಾಯಿಗಳು ಕಿತ್ತು ತಿನ್ನದಂತೆ ಕಾದು ಕುಳಿತು ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ನಂತರ ಮರಣೋತ್ತರ ಶವ ಪರೀಕ್ಷೆಗಾಗಿ ಕುಂದಾಪುರಕ್ಕೆ ಸಾಗಿಸಿ ನಂತರ ದಫನ ಮಾಡಿದ್ದಾರೆ.

ಈ ಭಾಗದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಸಂಬಂದಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Write A Comment