ಕನ್ನಡ ವಾರ್ತೆಗಳು

ವೆನ್‌ಲಾಕ್ ಆಸ್ಪತ್ರೆಯಲ್ಲಿದ್ದ ಅನಾಥ ಶವಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ

Pinterest LinkedIn Tumblr

Deadbody_funral_1

ಮಂಗಳೂರು,ಮೇ.02: ಮಂಗಳೂರಿನ ಸರಕಾರಿ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಾರಸುದಾರರಿಲ್ಲದ ಮೃತದೇಹಗಳಿಗೆ ಮತ್ತು ಇತೆರೆಡೆಗಳಲ್ಲಿ ಮೃತ ಹೊಂದಿದ ಅನಾಥ ಶವಗಳಿಗೆ ಶನಿವಾರ ನಂದಿಗುಡ್ಡೆ ಸ್ಮಶಾನದಲ್ಲಿ `ಪ್ರಜಾಧರ್ಮ’ ಕಾರ್ಯಕ್ರಮದಡಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸುವ ಮೂಲಕ ದ. ಕ. ಜಿಲ್ಲಾ ಮಾನವ ಹಕ್ಕುಗಳ ಭಾರತೀಯ ಒಕ್ಕೂಟ ಘಟಕ ಮಾನವೀಯತೆ ಮೆರೆದಿದೆ.

ಹಿಂದೂ ಧರ್ಮಕ್ಕೆ ಸೇರಿದ ಎಂಟು ಅನಾಥ ಮೃತದೇಹಕ್ಕೆ ನಂದಿಗುಡ್ಡೆ ಸ್ಮಶಾನದಲ್ಲಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಒಂದು ಮೃತದೇಹಕ್ಕೆ ಇಂದು `ಪ್ರಜಾಧರ್ಮ’ ಕಾರ್ಯಕ್ರಮದಡಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ಮಾಡಲಾಯಿತು.

ಅರವತ್ತು ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಾರಸುದಾರರಿಲ್ಲದ ಅನಾಥ ಶವಗಳಿಗೆ ಗೌರವದಿಂದ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.

Deadbody_funral_2 Deadbody_funral_3

ಇದೇ ಸಂದರ್ಭದಲ್ಲಿ ಅನಾಥ ಶವಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ವಾರೀಸುದಾರರಿಲ್ಲವೆಂದು ಆಸ್ಪತ್ರೆಗಳಿಗೆ ನೀಡಬಾರದು ಎಂದು ಒಕ್ಕೂಟ ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರಿಗೆ ತಿಳಿಹೇಳುವ ಪ್ರಯತ್ನ ಮಾಡಿತ್ತು.

ಒಕ್ಕೂಟದ ಮುಂದಾಳುಗಳಾದ ಹನೀಫ್ ಸಾಹೇಬ್ ಪಾಜೆಪಳ್ಳ, ವಿಜಯ ಪ್ರಸಾದ್ ಆಳ್ವ, ಗಂಗಾಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1 Comment

  1. Saksi maharaj. Condemn Rahul cheaply it’s bad development in political issues…… Is Rahul behaves just like that to them? It’s very ugly nature they’re not fitting for civilian………!!!!!!!!!!

Write A Comment