ಕನ್ನಡ ವಾರ್ತೆಗಳು

ಅನೈತಿಕ ಸಂಬಂಧದ ನೆಪವೊಡ್ಡಿ ಪತ್ನಿ ಮತ್ತು ಅತ್ತೆಯನ್ನೇ ಕೊಂದ ಕಿರಾತಕ..  

Pinterest LinkedIn Tumblr

ಉಡುಪಿ : ಅನೈತಿಕ ಸಂಬಂಧ ಕಲ್ಪಿಸಿ ಪತ್ನಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ವ್ಯಕ್ತಿಯೋರ್ವ ಕುದಿದ ಮತ್ತಿನಲ್ಲಿ ಹೆಂಡತಿಯೊಂದಿಗೆ ಜಗಳಕ್ಕಿಳಿದು ಹೆಂಡತಿ ಹಾಗೂ ಆಕೆಯ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉಡುಪಿಯ ಅಲೆವೂರು ಸಮೀಪದ ಚಿಟ್ಪಾಡಿ ಕಸ್ತುರ್ಬಾ ನಗರದಲ್ಲಿ  ಶುಕ್ರವಾರ ಬೆಳಗಿನ ಜಾವ ನಡೆದಿದೆ.

Udp_crime_april Udp_crime_april (2) Udp_crime_april (1) Udp_crime_april (3)

 ಅಸ್ಸಾಂ ಮೂಲದ  ಸಂಜಯ್ (30) ಎಂಬಾತನೇ ಈ ಕ್ರತ್ಯವೆಸಗಿದ್ದ ಆರೋಪಿಯಾಗಿದ್ದು. ತನ್ನ ಪತ್ನಿ ಅರ್ಚನಾ (23) ಹಾಗೂ ಆಕೆಯ ತಾಯಿ ನಿರ್ಮಲಾ (52) ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.

ಕೊಲೆಗೈದ ಆರೋಪಿ ಅಸ್ಸಾಂ ಮೂಲದವನಾಗಿದ್ದು, ಮಂಗಳೂರಿನಲ್ಲಿ ಯಾವುದೇ ಕಂಪೆನಿಯಲ್ಲಿ ಕಾರ್ಮಿಕನಾಗಿದ್ದ. ಸಂಜಯ್‌ ಕುಮಾರ್‌ ಚಿಟ್ಪಾಡಿಯ ಅರ್ಚನಾಳನ್ನು ಪ್ರೀತಿಸಿ ವಿವಾಹವಾಗಿದ್ದ . ವಿವಾಹದ ಬಳಿಕ ಪತ್ನಿಯ ನಡತೆ ಬಗ್ಗೆ ಸಂಶಯ ಹೊಂದಿದ್ದ ಆತ ನಿತ್ಯ ಇದೇ ವಿಚಾರದಲ್ಲಿ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ.

ಗುರುವಾರ ರಾತ್ರಿ ಸುಮಾರು 1.40 ರ ಹೊತ್ತಿಗೆ ಪಾನಮತ್ತನಾಗಿ ಬಂದ ಸಂಜಯ್‌ ಅರ್ಚನಾ ಜೊತೆ ಜಗಳಕ್ಕಿಳಿದಿದ್ದಾನೆ. ಈ ವೇಳೆ ಕುಪಿತನಾದ ಸಂಜಯ್‌ ಇಬ್ಬರ ಮೇಲೂ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಅರ್ಚನಾ ತಾಯಿ ನಿರ್ಮಲಾ ಸ್ಥಳದಲ್ಲೇ ಸಾವನ್ನಪ್ಪಿದ್ದು,ಅರ್ಚನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಪ್ರಕರಣ ದಾಖಲಿಸಿರುವ ಉಡುಪಿ ನಗರ ಠಾಣಾ ಪೊಲೀಸರು ಆರೋಪಿ ಸಂಜಯ್‌ನನ್ನು ಬಂಧಿಸಿದ್ದಾರೆ.

Write A Comment