ಕನ್ನಡ ವಾರ್ತೆಗಳು

ಅನ್ನಭಾಗ್ಯ ಯೋಜನೆಗೆ ಬಿ.ರಮಾನಾಥ ರೈ ಚಾಲನೆ

Pinterest LinkedIn Tumblr

Zp_anna_bhaya_1

ಮಂಗಳೂರು,ಮೇ.01 : ಕರ್ನಾಟಕ ಹಸಿವು ಮುಕ್ತ ಕರ್ನಾಟಕವಾಗಬೇಕೆಂಬುದೇ ಅನ್ನಭಾಗ್ಯ ಯೋಜನೆ ಉದ್ದೇಶ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವುಗಳ ಅಶ್ರಯದಲ್ಲಿ ಉಚಿತ ಆಹಾರ ಧಾನ್ಯ ವಿತರಣಾ ಯೋಜನೆ ` ಅನ್ನಭಾಗ್ಯ’ಯೋಜನೆಯನ್ನು ಉದ್ಘಾಟಿಸಿದರು.

ಅರ್ಥಿಕವಾಗಿ ದುರ್ಬಲರಾದ ಬಡವರಿಗೆ ಉಚಿತ ಅಕ್ಕಿಯನ್ನು ನೀಡುವ ಮೂಲಕ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ಸರಕಾರ ಭರವಸೆಯ ನೀಡಿತ್ತು ಎಂದು ಈ ಸಂಧರ್ಭದದಲ್ಲಿ ಹೇಳಿದರು.

Zp_anna_bhaya_2 Zp_anna_bhaya_3 Zp_anna_bhaya_4 Zp_anna_bhaya_6 Zp_anna_bhaya_7 Zp_anna_bhaya_8 Zp_anna_bhaya_9 Zp_anna_bhaya_10 Zp_anna_bhaya_11

ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತನಾಡಿ, ಸರಕಾರ ತೆರಿಗೆಯ ಹಣ ಸಂಗ್ರಹಿಸುವ ಮೂಲಕ ಬಡವರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬಡವರು ಉಚಿತ ಅಕ್ಕಿ ವಿತರಣೆಯ ಯೋಜನೆಯನ್ನು ಸದುಪಯೋಗಮಾಡಿಕೊಳ್ಳಬೇಕು. ಅಧಿಕಾರಿಗಳು ಇದರ ಸಮರ್ಪಕ ಅನುಷ್ಠಾನಕ್ಕೆ ಗಮನವಹಿಸಬೇಕು ಎಂದು ಕರೆ ನೀಡಿದ ಅವರು, ಅನ್ನಭಾಗ್ಯವನ್ನು ದುರುಪಯೋಗ ನಡೆಸುವಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶಾಸಕ ಜೆ.ಆರ್. ಲೋಬೋ , ಮಾಜಿ ಮೇಯರ್ ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಇಲಾಖೆಯ ಶರಣಬಸಪ್ಪ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು. ಆಹಾರ ಇಲಾಖೆಯ ಅಧಿಕಾರಿ ವಾಸು ಶೆಟ್ಟಿ ವಂದಿಸಿದರು.

ಸಮಾರಂಭದಲ್ಲಿ 15  ಕುಟುಂಬಗಳಿಗೆ ಉಚಿತ ಅಹಾರಧಾನ್ಯಗಳನ್ನು ವಿತರಿಸಲಾಯಿತು

Write A Comment