ವೇಣೂರು,ಎಪ್ರಿಲ್.30 : ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಕಂಡುಬಂದ ಶ್ರೀಸೂರ್ಯನಾರಾಯಣ ದೇಗುಲದ ಜೀರ್ಣೋದ್ಧಾರಕ್ಕೆ ಇದೀಗ ಚಾಲನೆ ದೊರೆತಿದೆ.ಪ್ರಾಥಮಿಕ ಹಂತವಾಗಿ ಕ್ಷೇತ್ರವ್ಯಾಪ್ತಿಯಲ್ಲಿ ನಾಗದೇವತೆಗೆ ಗುಡಿಯೊಂದನ್ನು ನಿರ್ಮಿಸುವುದು, ತದನಂತರದ ಹಂತದಲ್ಲಿ ಕ್ಷೇತ್ರನಿರ್ಮಾಣ ಕಾರ್ಯ ಕೈಗೊಳ್ಳುವ ತೀರ್ಮಾನ ಜೀರ್ಣೋದ್ಧಾರ ಸಮಿತಿ ಕೈಗೊಂಡಿದೆ.
ಮೇ.1 ರಂದು ಶ್ರೀನಾಗವನದಲ್ಲಿ ಸಾನ್ನಿಧ್ಯ ಸಂಕುಚಿತ, ಹಾಗೂ ಮೇ.9 ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿವೆ. ಶ್ರೀಕ್ಷೇತ್ರಕ್ಕೆ ವಾಸ್ತುಶಿಲ್ಪಿ ಮುನಿಯಂಗಳ ಪ್ರಸಾದ್ ಆಗಮಿಸಿ ನಾಗನ ಕಟ್ಟೆ ನಿರ್ಮಾಣದ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ದೇಗುಲ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಯನ್.ಸೀತಾರಾಮ ರೈ, ಮಾರ್ಗದರ್ಶಕರಾದ ಬಾಲ್ಯ ಶಂಕರ್ ಭಟ್, ಕಾರ್ಯದರ್ಶಿಗಳಾದ ಹರಿಪ್ರಸಾದ್ ಬಜೆ, ಧರಣೇಂದ್ರ ಕುಮಾರ್, ಉದಯಕುಮಾರ್ ಬಾಲವನ, ಗಣರಾಜ್ ಎ ಭಟ್, ಕಿರಣ್ ಭಟ್, ಗೋಪಾಲಕೃಷ್ಣ ಭಟ್ ಮಲೆಯಾಳ, ಹರೀಶ್ ಕೆ.ಆದೂರು, ಸೇರಿದಂತೆ ಇತರರು ಉಪಸ್ಥಿತರಿದ್ದರು.