ಮಂಗಳೂರು, ಎ. 28: ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೋರ್ವನಿಂದ 50,55,912 ರೂ. ವೌಲ್ಯದ ಬಿಸ್ಕಟ್‌ಗಳನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಹೈದರಾಬಾದ್ ಮೂಲದ ಮುಹಮ್ಮದ್ ಲುಕ್ಮಾನ್ (29) ಎಂದು ಗುರುತಿಸಲಾಗಿದೆ.
ಆತ ದುಬೈಯಿಂದ ಜೆಟ್‌ಆ್ಯರ್‌ವೇಸ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಆತ ಚಿನ್ನದ ಬಿಸ್ಕತ್‌ಗಳನ್ನು ತಾನು ಕುಳಿತಿದ್ದ ಸೀಟ್‌ನ ಪಕ್ಕದಲ್ಲಿ ಅಡಗಿಸಿಟ್ಟಿರುವುದನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೊಳ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಡಗಿಸಿಟ್ಟಿದ 1,865 ಗ್ರಾಂಗಳ 16ಚಿನ್ನದ ಬಿಸ್ಕತ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.