ಕನ್ನಡ ವಾರ್ತೆಗಳು

ಎ.25: ಸುಂದರರಾಮ್ ಶೆಟ್ಟಿ ಶತಮಾನೋತ್ಸವ ಸಮಾರಂಭ

Pinterest LinkedIn Tumblr

Vinya_hegde_prssmeet_1

ಮಂಗಳೂರು, ಎ.22: ವಿಜಯ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಕಾರಣಕರ್ತರಾದ ಮುಲ್ಕಿ ಸುಂದರರಾಮ್ ಶೆಟ್ಟಿಯವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಅವರ ಹುಟ್ಟೂರಾದ ಮುಲ್ಕಿಯಲ್ಲಿ ನಡೆಸಲುದ್ದೇಶಿಲಾಗಿದೆ. ಈ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಎಪ್ರಿಲ್ 25ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಆಧುನಿಕ ವಿಜಯ ಬ್ಯಾಂಕಿನ ಶಿಲ್ಪಿಯೆಂದು ಖ್ಯಾತರಾಗಿದ್ದ ಮುಲ್ಕಿ ಸುಂದರರಾಮ್ ಶೆಟ್ಟಿ 1962ರಲ್ಲಿ ವಿಜಯ ಬ್ಯಾಂಕಿನ ಗೌರವ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 1967ರೊಳಗೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂಲದ, 42 ಶಾಖೆಗಳೊಂದಿಗೆ 44.35 ಕೋಟಿ ರೂ. ವ್ಯವಹಾರ ಹೊಂದಿದ್ದ 9 ಬ್ಯಾಂಕುಗಳು ವಿಜಯ ಬ್ಯಾಂಕಿನೊಂದಿಗೆ ವಿಲೀನಗೊಂಡವು. 1969ರಲ್ಲಿ ಬ್ಯಾಂಕಿನ ಪೂರ್ಣಕಾಲಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮುಲ್ಕಿ ಸುಂದರರಾಮ್ ಶೆಟ್ಟಿ ಬ್ಯಾಂಕಿನ ಆಡಳಿತ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಿದರು. ಕೇವಲ 176 ಸಿಬ್ಬಂದಿಯೊಂದಿಗೆ 21 ಶಾಖೆಗಳನ್ನು ಹೊಂದಿದ್ದ ವಿಜಯಬ್ಯಾಂಕ್ ಸುಂದರರಾಮ್ ಶೆಟ್ಟಿಯವರ ಅಧಿಕಾರ ಪೂರ್ಣಗೊಂಡ 1979ರಲ್ಲಿ 9,080 ಸಿಬ್ಬಂದಿ ಮತ್ತು 571 ಶಾಖೆಗಳೊಂದಿಗೆ ಎತ್ತರಕ್ಕೆ ಬೆಳೆಯಿತು. 1975ರ ಎಪ್ರಿಲ್ 30ರಂದು ಜನಿಸಿದ್ದ ಮುಲ್ಕಿ ಸುಂದರರಾಮ ಶೆಟ್ಟಿಯವರು ತಮ್ಮ 66ರ ಹರೆಯದಲ್ಲಿ ವಿಧಿವಶರಾದರು. ಅವರು ವಿಜಯ ಬ್ಯಾಂಕಿನ ಮೂಲಕ ಸಮಸ್ತ ಕರಾವಳಿಯ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ಕರಾವಳಿ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಿದೆ. ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ವಿವಿಧ ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳುವ ಚಿಂತನೆ ಇದೆ. ಪ್ರಸಕ್ತ ಎಪ್ರಿಲ್ 25ರಂದು ಮುಲ್ಕಿಯಲ್ಲಿ ನಡೆಯುವ ಸಮಾರಂಭವನ್ನು ಧರ್ಮಸ್ಥಳದ ಧರ್ಮದರ್ಶಿ ‘ಪದ್ಮವಿಭೂಷಣ’ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ.

Vinya_hegde_prssmeet_3 Vinya_hegde_prssmeet_2

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮುಲ್ಕಿ ಸೀಮೆಯ ಅರಸು ಮನೆತನದ ದುಗ್ಗಣ್ಣ ಕೊಂಡೆ, ಡಾ.ಮೋಹನ್ ಆಳ್ವ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಡಾ.ವಿನಯ ಹೆಗ್ಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ಪದಾಧಿಕಾರಿ ಗಳಾದ ವಿ.ಸುಬ್ಬಯ್ಯ ಹೆಗ್ಡೆ, ಎಂ.ಶ್ರೀಧರ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಸುಕುಮಾರ ಶೆಟ್ಟಿ, ಪ್ರಭಾಕರ ಶೆಟ್ಟಿ, ಪ್ರಭಾಕ ಶೆಟ್ಟಿ, ರತ್ನಾಕರ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಸದಾನಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Write A Comment