ಕನ್ನಡ ವಾರ್ತೆಗಳು

ಕ್ರೆಡೈ ಪದಗ್ರಹಣ ಸಮಾರಂಭ : ನೂತನ ಅಧ್ಯಕ್ಷರಾಗಿ ಡಿ.ಬಿ.ಮೆಹ್ತಾ ನೇಮಕ

Pinterest LinkedIn Tumblr

Credai_New_chairman_1

ಮಂಗಳೂರು, ಎ.7: ಕ್ರೆಡೈ ಮಂಗಳೂರು ಇದರ 2015-17ನೆ ಸಾಲಿನ ನೂತನ ಅಧ್ಯಕ್ಷರಾಗಿ ಡಿ.ಬಿ.ಮೆಹ್ತಾ ನೇಮಕಗೊಂಡಿದ್ದಾರೆ. ನಗರದ ದೀಪಾ ಕಂಫರ್ಟ್ಸ್ ಹೊಟೇಲ್‌ನಲ್ಲಿ ಸೋಮವಾರ ನಡೆದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.ಕ್ರೆಡೈ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ನೂತನ ಅಧ್ಯಕ್ಷ ಡಿ.ಬಿ.ಮೆಹ್ತಾರಿಗೆ ಅಧಿಕಾರ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೊಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ವಹಿಸಿದ್ದರು.

Credai_New_chairman_2 Credai_New_chairman_3 Credai_New_chairman_4 Credai_New_chairman_5 Credai_New_chairman_6 Credai_New_chairman_7 Credai_New_chairman_8 Credai_New_chairman_9 Credai_New_chairman_10 Credai_New_chairman_11 Credai_New_chairman_12 Credai_New_chairman_13 Credai_New_chairman_14 Credai_New_chairman_15

ಕ್ರೆಡೈ ಉಪಾಧ್ಯಕ್ಷರಾಗಿ ಧೀರಜ್ ಅಮೀನ್, ಕಾರ್ಯದರ್ಶಿಯಾಗಿ ನವೀನ್, ಜೊತೆ ಕಾರ್ಯದರ್ಶಿಯಾಗಿ ವಿನೋದ್ ಪಿಂಟೊ ಹಾಗೂ ಕೋಶಾಧಿಕಾರಿಯಾಗಿ ಅರಿಲ್ ಪಿಂಟೊ ನೇಮಕಗೊಂಡರು.

Credai_New_chairman_16 Credai_New_chairman_17 Credai_New_chairman_18 Credai_New_chairman_19 Credai_New_chairman_20 Credai_New_chairman_21

ಡಿ.ಬಿ.ಮೆಹ್ತಾ ಐಆರ್‌ಎಸ್ (ಇಂಡಿಯನ್ ರೆವೆನ್ಯೂ ಸರ್ವಿಸ್) ಅಧಿಕಾರಿಯಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದು, ಲೆಕ್ಕ ಪರಿಶೋಧಕರೂ (ಚಾರ್ಟರ್ಡ್‌ ಅಕೌಂಟೆಂಟ್)ಆಗಿದ್ದಾರೆ.

Write A Comment