ಕನ್ನಡ ವಾರ್ತೆಗಳು

ಗಂಗೊಳ್ಳಿ ಮೀನುಗಾರರ ಮುಷ್ಕರ, ತಿನ್ನಲು ತಾಜಾ ಮೀನಿಗೂ ಬರ..!; ಲಂಗರು ಹಾಕಿದೆ ನೂರಾರು ಬೋಟುಗಳು

Pinterest LinkedIn Tumblr

ಕುಂದಾಪುರ: ಸದಾ ಮೀನುಮಾರಾಟಗಾರರು ಹಾಗೂ ಗ್ರಾಹಕರಿಂದ ಗಿಜುಗುಡುತ್ತಿದ್ದ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರು ಪ್ರದೇಶವೀಗ ಜನರಿಲ್ಲದೇ ಬಣಗುಟ್ಟುತ್ತಿದೆ. ತಾಲೂಕಿನ ಜನರಿಗೆ ಇನ್ನಲು ತಾಜಾ ಮೀನು ಪೂರೈಕಯೂ ಸರಿಯಾಗ್ತಿಲ್ಲ. ಯಾಕೇ ಅಂತೀರಾ….ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ವಿನಾಯಿತಿಯನ್ನು ನೇರ ಮಾಲೀಕರ ಖಾತೆಗೆ ವರ್ಗಾವಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮೀನುಗಾರರು ಮಲ್ಪೆ ಹಾಗೂ ಮಂಗಳೂರಿನಲ್ಲಿ ಮುಷ್ಕರ ನಡೆಸುತ್ತಿದ್ದು ಗಂಗೊಳ್ಳಿಯಲ್ಲೂ ಈ ಮುಷ್ಕರಕ್ಕೆ ಬೆಂಬಲ ಸೂಚಸಿದ್ದೇ ಈ ಎಫೆಕ್ಟ್‌ಗೆ ಕಾರಣ.

Picture 023 Gangoli_Boat_Strike (17) Gangoli_Boat_Strike (16)  Picture 034 Picture 013 Picture 017 Picture 019 Picture 029 Picture 007 Picture 012 Picture 011 Picture 009 Picture 006 Picture 008 Picture 004Picture 028Gangoli_Boat_Strike (1) Gangoli_Boat_Strike

ಹೌದು…ಸದಾ ಜನ ನಿಬೀಡವಾಗಿದ್ದ ಗಂಗೊಳ್ಳಿ ಬಂದರು ಹಾಗೂ ಮೀನು ಮಾರುಕಟ್ಟೆ ಪ್ರದೇಶ ಈಗ ಖಾಲಿ ಹೊಡೆಯುತ್ತಿದೆ. ಮೀನುಗಾರರು ಬಲೆ ರಿಪೇರಿ, ಬೋಟುಗಳ ದುರಸ್ಥಿ ಕಾರ್ಯದಲ್ಲಿ ಮಗ್ನರಾಗಿದ್ದರೇ, ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿರುವ ನದಿ ತಟದಲ್ಲಿ ನೂರಾರು ಬೋಟುಗಳು ಲಂಗರು ಹೂಡಿದೆ. ಪರ್ಶಿನ್ ಬೋಟುಗಳು, ಟ್ರಾಲ್ ಬೋಟುಗಳು ಹಾಗೂ ನಾಡಾ ದೋಣಿಗಳು ಲಂಗರು ಹೂಡಿದೆ.

ಸಮಸ್ಯೆ ಬಗ್ಗೆ ಈಗಾಗಲೇ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಗಮನವನ್ನು ಮೀನುಗಾರರು ಅವರು ಏ.೭ರೊಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವರಿಕೆ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು ಎ.೮ ರವರೆಗೂ ಬೋಟುಗಳು ಸಮುದ್ರಕ್ಕೆ ಇಳಿಯುವುದು ಕಷ್ಟವಾಗಿದೆ.

ತಿನ್ನೋಕೆ ಮೀನಿಲ್ಲ: ಗಂಗೊಳ್ಳಿಯಲ್ಲಿ ಬೋಟುಗಳು ಸಮುರಕ್ಕಿಳಿಯುತ್ತಿಲ್ಲ. ಮೊನ್ನೆಯಿಂದ ಕುಂದಾಪುರದ ಮೀನು ಪ್ರಿಯರಿಗೆ ತಾಜಾ ಮೀನು ಮಲ್ಪೆಯಿಂದಲೇ ಬರಬೇಕು…ಯಾಕೇಂದ್ರೇ ಮಲ್ಪೆಯಲ್ಲಿ ಆಳಸಮುದ್ರಕ್ಕೆ ತೆರಳಿದ ಬೋಟುಗಳು ಬಂದ್ರೇ ಅಲ್ಲಿನ ಮೀನುಗಳು ತಾಲೂಕಿಗೂ ಪೂರೈಕೆಯಾಗುತ್ತೆ. ಆದ್ರೇ ನಿರೀಕ್ಷೆ ಮಟ್ಟಕ್ಕೆ ಸಿಗೋದಿಲ್ಲ ಅಲ್ಲದೇ ಬೆಲೆಯೂ ತುಟ್ಟಿಯಾದ ಕಾರಣ ಗ್ರಾಹಕನ ಜೇಬಿಗೂ ಕತ್ತರಿ ಬೀಳ್ತಿದೆ.

ಯಾಕಾಗಿ ಮುಷ್ಕರ: ಸರಕಾರದ ಈ ಹೊಸ ಪದ್ಧತಿ 2000ರಲ್ಲಿ ಜಾರಿಯಾಗಿದ್ದಾಗ ಮೀನುಗಾರರು ಸಾಕಷ್ಟು ಸಂಕಷ್ಟಕ್ಕೀಡಾಗುವಂತೆ ಮಾಡಿತ್ತು. ಅಂದು ಕೇಂದ್ರ ಸರಕಾರ ಘೋಷಿಸಿದ್ದ 1 ರೂ. ಸಬ್ಸಿಡಿ ಇನ್ನೂ ಸಿಕ್ಕಿಲ್ಲ. ಇದೀಗ ಸ್ಥಳೀಯ ಶಾಸಕರ ಮನವಿಯನ್ನು ಪರಿಗಣಿಸದೆ ಮತ್ತೆ ಆ ಪದ್ಧತಿಯನ್ನು ಮಾ.31ಕ್ಕೆ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಈ ಬಗ್ಗೆ ಏ.2 ರಂದು ಜಿಲ್ಲೆಯ ಎಲ್ಲಾ ಮೀನುಗಾರರ ಸಂಘಗಳ ಸಭೆ ಕರೆದು ಸರಕಾರದ ಧೋರಣೆಯನ್ನು ಖಂಡಿಸಿ ಏ.೩ರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಮೀನುಗಾರರು ಬಂದಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Write A Comment