ಕನ್ನಡ ವಾರ್ತೆಗಳು

ಆರ್ಡರ್ ಮಾಡಿದ್ದು ಫವರ್ ಬ್ಯಾಂಕ್; ಆದ್ರೇ ಪೊಟ್ಟಣದಲ್ಲಿ ಬಂದಿದ್ದು ಕಲ್ಲು..!

Pinterest LinkedIn Tumblr

ಉಡುಪಿ: ಆನ್‌ಲೈನ್‌ ಶಾಪಿಂಗ್ ಮಾಡೋ ಮೊದಲು ಕೊಂಚ ಯೋಚಿಸುವುದು ಉತ್ತಮ ಎನ್ನುವುದು ಉಡುಪಿ ಜನರ ಪಾಲಿಗೆ ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕ್ಯಾಮೆರಾ ಬದಲಿಗೆ ಕಲ್ಲು ಪಾರ್ಸೆಲ್ ಬಂದ ಘಟನೆ ಉಡುಪಿ ಸಮೀಪದ ಮಲ್ಪೆಯಲ್ಲಿ ನಡೆದಿದ್ದು, ಇದೇ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಸಂಸ್ಥೆಯ ಮೂಲಕ ಮೊಬೈಲ್ ಚಾರ್ಜ್ ಮಾಡುವ ಪವರ್‌ಬ್ಯಾಂಕ್‌(ಚಾರ್ಜರ್‌) ಆರ್ಡರ್‌ ಮಾಡಿದ್ದ ವ್ಯಕ್ತಿಯೋರ್ವರಿಗೆ ಕಲ್ಲು ಪಾರ್ಸೆಲ್‌ ಬಂದ ಘಟನೆ ಮಣಿಪಾಲದಲ್ಲಿ ನಡೆದಿದೆ.

Flipkart_Problem_Manipal Flipkart_Problem_Manipal,

Flipkart_Problem_Manipal.

ಮಣಿಪಾಲದ ರಾಜೇಶ್‌ ನಾಯಕ್‌ ಅವರು ಮಾ.25ರಂದು  ಮೂಲಕ ನೊವೇಸಿಸ್‌ ಕಂಪೆನಿಯ 1,499ರೂ. ಮೊತ್ತದ ಪವರ್‌ಬ್ಯಾಂಕ್‌ ಆರ್ಡರ್‌ ಮಾಡಿದ್ದರು. ಎ.2ರಂದು ಅವರ ಮನೆ ಬಾಗಿಲಿಗೆ ಬಂದ ಡೆಲಿವರಿ ಬಾಯ್‌ ಪೊಟ್ಟಣವೊಂದನ್ನು ನೀಡಿದ. ಪೊಟ್ಟಣ ಪಡೆದು ಹಣ ನೀಡಿದ ರಾಜೇಶ್‌ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪವರ್‌ಬ್ಯಾಂಕ್‌ನ ಬದಲು ಮಾರ್ಬಲ್‌ ಕಲ್ಲಿನ ತುಂಡುಗಳಿದ್ದವು.

ಕೂಡಲೇ ಪಕ್ಕದಲ್ಲಿದ್ದ ಡೆಲಿವರಿ ಬಾಯ್‌ಗೆ ವಿಷಯ ತಿಳಿಸಿದರು. ಆತ ಕಂಪೆನಿಗೆ ಮಾಹಿತಿ ನೀಡಿದನಲ್ಲದೆ ಹಣವನ್ನೂ ಹಿಂದಿರುಗಿಸಿದ. ಈ ಬಗ್ಗೆ ರಾಜೇಶ್‌ ನಾಯಕ್‌ ಅವರು ಫ್ಲಿಪ್‌ಕಾರ್ಟ್‌ ಸಂಸ್ಥೆಯ ಸ್ಥಳೀಯ ಕಚೇರಿಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಇನ್ನಾದ್ರೂ ಜನರು ಆನ್-ಲೈನ್ ಶಾಪಿಂಗ್ ಬಗ್ಗೆ ಕೊಂಚ ಎಚ್ಚರಿಕೆಯಿಂದಿರೋದು ಉತ್ತಮ…ಇಲ್ಲದಿದ್ರೇ ನಾಮ ಗ್ಯಾರೆಂಟಿ..!

 

Write A Comment