ಕನ್ನಡ ವಾರ್ತೆಗಳು

ಉಡುಪಿ ಪೇಜಾವರ ಮಠಕ್ಕೆ ಹೈದ್ರಾಬಾದ್‌ ಸಂಸ್ಥೆಯಿಂದ 600 ಕೋಟಿ ರೂ. ದೇಣಿಗೆ

Pinterest LinkedIn Tumblr

ಬೆಂಗಳೂರು: ಉಡುಪಿಯ ಪೇಜಾವರ ಅದೋಕ್ಷಜ ಮಠದಿಂದ ನಡೆಸುತ್ತಿ ರುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹೈದರಾಬಾದ್‌ನ ಶ್ರೀ ಸತಿ ಗೋಪಾಲಕೃಷ್ಣ ರೆಡ್ಡಿ ಫೌಂಡೇಷನ್‌ 600 ಕೋಟಿ ರೂ. ದೇಣಿಗೆ ನೀಡುವ ಭರವಸೆ ನೀಡಿದೆ.

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿಯ ಪೇಜಾವರ ಅದೋಕ್ಷಜ ಮಠದ ವಿವಿಧ ಸೇವಾ ಕಾರ್ಯಗಳಿಗಾಗಿ ಹೈದರಾಬಾದ್‌ ಜ್ಯೂಬಿಲಿ ಹಿಲ್ಸ್‌ನ ಶ್ರೀ ಸತಿ ಗೋಪಾಲಕೃಷ್ಣ ರೆಡ್ಡಿ ಫೌಂಡೇ ಷನ್‌ ಟ್ರಸ್ಟ್‌ 600 ಕೋಟಿ ರೂ. ದೇಣಿಗೆ ನೀಡುವ ಭರವಸೆ ನೀಡಿದೆ ಎಂದು ಹೇಳಿದರು.

ಉದ್ಯಮಿ ನೀಡುವ ದೇಣಿಗೆಯಲ್ಲಿ ಮಾರತ್‌ಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀಕೃಷ್ಣ ಸೇವಾಶ್ರಮದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ 250 ಕೋಟಿ ರೂ. ಬಳಸಿಕೊಳ್ಳ ಲಾಗುವುದು. ಈ ಆಸ್ಪತ್ರೆಗೆ ಸರ್ಕಾರ ಈಗಾಗಲೇ 2 ಎಕರೆ ಜಮೀನು ನೀಡಿದೆ ಎಂದರು. ಇನ್ನುಳಿದಂತೆ ಉಡುಪಿಯ ಪೇಜಾವರ ಮಠದ ಕಾಲೇಜಿಗೆ 75 ಕೋಟಿ ರೂ. ಬಳಸ ಲಾಗುವುದು.

ಮಠದಿಂದ ಹುಬ್ಬಳ್ಳಿಯಲ್ಲಿ ನಡೆಸಲಾಗುತ್ತಿರುವ ವಸತಿ ಕಾಲೇಜಿಗೆ 75 ಕೋಟಿ ರೂ., ಮಠದಿಂದ ಬೆಂಗಳೂರಿನ ವಿದ್ಯಾಪೀಠ ಸಂಸ್ಕೃತ ವೇದಪಾಠ ಶಾಲೆ ಮತ್ತು ಕಾಲೇಜುಗಳ ಅಭಿವೃದ್ಧಿಗೆ 100 ಕೋಟಿ ರೂ., ಮಠದಿಂದ ಉಡುಪಿ ಮತ್ತು ಬೆಂಗಳೂರಿನಲ್ಲಿ ನಿರ್ವಹಿಸ ಲಾಗುತ್ತಿರುವ ಗೋಶಾಲೆಗಳಿಗೆ 100 ಕೋಟಿ ರೂ. ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದರು.

ಮಠದ ವತಿಯಿಂದ ಉಡುಪಿ, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ರೆಸಿಡೆನ್ಷಿಯಲ್‌ ಕಾಲೇಜು ಆರಂಭಿಸಲು ತೀರ್ಮಾನಿಸಲಾಗಿದೆ. ಮಧ್ವಾಚಾರ್ಯ ಜಯಂತಿ ಅಂಗವಾಗಿ ಉಡುಪಿಯಲ್ಲಿ ರೆಸಿಡೆನ್ಷಿಯಲ್‌ ಕಾಲೇಜು ಪ್ರಾರಂಭಿಸಲಾಗುವುದು. ಈಲ್ಲಿ ದಕ್ಷಿಣ ಭಾರತದ ಎಲ್ಲಾ ಜನಾಂಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಉಚಿತ ಊಟ, ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಹೈದರಾಬಾದ್‌-ಕರ್ನಾಟಕ ಭಾಗದಲ್ಲೂ ಒಂದು ರೆಸಿಡೆನ್ಷಿಯಲ್‌ ಕಾಲೇಜು ಪ್ರಾರಂಭಿಸುವ ಉದ್ದೇಶವಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೊದಲ ಹಂತವಾಗಿ ಉಡುಪಿ, ಹುಬ್ಬಳ್ಳಿ, ಮೈಸೂರಿನಲ್ಲಿ ಪ್ರಾಥಮಿಕ ಶಾಲೆಯಿಂದ ಕಾಲೇಜು ಶಿಕ್ಷಣದವರೆಗೂ ತರಗತಿಗಳನ್ನು ನಡೆಸಲಾಗುವುದು ಎಂದರು.

ಶ್ರೀ ಸತಿ ಗೋಪಾಲಕೃಷ್ಣ ರೆಡ್ಡಿ ಫೌಂಡೇಷನ್‌ ಟ್ರಸ್ಟ್‌ ಸಂಸ್ಥಾಪಕ ಎಂ.ಗೋಪಾಲಕೃಷ್ಣ ರೆಡ್ಡಿ ಮಾತನಾಡಿ, ಲೋಕ ಕಲ್ಯಾಣ ಮತ್ತು ಸಮಾಜದ ಒಳಿತಿಗಾಗಿ ಟ್ರಸ್ಟ್‌ ಪೇಜಾವರ ಮಠಕ್ಕೆ ಈ ಕೊಡುಗೆ ನೀಡುತ್ತಿದ್ದೇವೆ ಎಂದರು.

 

 

Write A Comment