ಕುಂದಾಪುರ: ಕೋಟ ಮತ್ತು ಬ್ರಹ್ಮಾವರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೈಕ್ ಕಳವು ಆರೋಪಿ ಮಂಗಳೂರು ವಾಮಂಜೂರಿನ ಯಶವಂತ ಯಾನೆ ಯಶು(19)ನನ್ನು ಸೆರೆ ಹಿಡಿದಿದ್ದಾರೆ.
ಕೋಟ ಗಿಳಿಯಾರು ಬಸ್ ತಂಗುದಾಣದ ಬಳಿ ಇರಿಸಿದ್ದ ಕಾರ್ಕಡದ ಉಮೇಶ್ ಪೂಜಾರಿ ಅವರ ಬೈಕ್ ಕಳವಾಗಿದ್ದು, ಕೋಟ ಪೊಲೀಸರಿಗೆ ದೂರು ನೀಡಲಾಗಿತ್ತು. ಇತ್ತೀಚೆಗೆ ಕದ್ರಿ ಪೊಲೀಸರು ನಂಬರ್ ಬದಲಿಸಿ ತಿರುಗಾಡುತ್ತಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲು ಮುಂದಾದಾಗ ಆರೋಪಿ ಬೈಕ್ ಬಿಟ್ಟು ಪರಾರಿಯಾಗಿದ್ದ. ಗುರುವಾರ ಬ್ರಹ್ಮಾವರ ಪೊಲೀಸ್ ವತ್ತನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಪಿಎಸ್‌ಐ ಕಮಲಾಕರ ನಾಯ್ಕ್ ಹಾಗೂ ಅಪರಾಧ ಪತ್ತೆ ದಳದ ಪೊಲೀಸರು ಯಶವಂತನನ್ನು ವಾಮಂಜೂರಿನ ಪಚ್ಚನಾಡಿಯಲ್ಲಿ ಬಂಧಿಸಿದರು.