ಕನ್ನಡ ವಾರ್ತೆಗಳು

ಮನೆ ನಿವೇಶನ ರಹಿತರಿಂದ ಕೋಣಿ ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ; ಎ.28 ವಿಧಾನಸೌಧ ಚಲೋ

Pinterest LinkedIn Tumblr

ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಹಾಗೂ ಕೋಣಿ, ಕಂದಾವರ ಗ್ರಾಮಗಳ ಮನೆ ನಿವೇಶನ ರಹಿತರಿಂದ ಸ್ವೀಕರಿಸಿದ ಅರ್ಜಿಗಳನ್ನು ಮಂಜೂರು ಮಾ‌ಉವ ಕುರಿತು ನಿವೇಶನ ರಹಿತರ ಅಂತಿಮ ಪಟ್ಟಿ ಕೊಡಿಸಿ, ಸರಕಾರಿ ಸ್ಥಳವನ್ನು ನಿವೇಶನ ರಹಿತರಿಗೆ ಗುರುತಿಸಿದ ಬಗ್ಗೆ ಆಗ್ರಹಿಸಿ ಕೋಣಿ ಗ್ರಾ.ಪಂಗೆ ಗುರುವಾರ ಬೆಳಿಗ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

Koni_Site_Protest Koni_Site_Protest (3) Koni_Site_Protest (4) Koni_Site_Protest (1) Koni_Site_Protest (5) Koni_Site_Protest (2) Koni_Site_Protest (6) Koni_Site_Protest (7) Koni_Site_Protest (8)

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ಕೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಿ, ಕಂದಾವರ ಗ್ರಾಮಗಳ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒಂದು ವರ್ಷದ ಹಿಂದೆಯೇ ಮೊದಲ ಹಂತದಲ್ಲಿ ೩೨೯ ಹಾಗೂ ಎರಡನೇ ಹಂತದಲ್ಲಿ 43 ಅರ್ಜಿಗಳನ್ನು ನೀಡಲಾಗಿತ್ತು. ಆದ್ಯತೆಯ ಮೇರೆಗೆ ನಿರ್ಗತಿಕರಿಗೆ ನಿವೇಶನವನ್ನು ಮಂಜೂರು ಮಾಡುವಂತೆ ಕೋರಲಾಗಿತ್ತು. ಆದರೆ 372 ಅರ್ಜಿಗಳ ಪೈಕಿ 134 ಅರ್ಜಿಗಳನ್ನಷ್ಟೇ ಸ್ವೀಕರಿಸಿರುವ ಕೋಣಿ ಗ್ರಾ.ಪಂ ಉಳಿದ ಅರ್ಜಿಗಳನ್ನು ತಿರಸ್ಕರಿಸಿರುವುದಕ್ಕೆ ಕಾರಣವನ್ನು ನೀಡಿಲ್ಲ. ತಾಲೂಕು ಕಾರ್ಯನಿರ್ವಹಣಾಧಿಕಾರಿಯ ಆದೇಶವಿದ್ದರೂ ಸಹಿತ ಕೋಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಲು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯ ಹಲವಡೆ ಇರುವ ಬಹುತೇಕ ಸರಕಾರಿ ಜಾಗಗಳನ್ನು ಕಂದಾಯ ಇಲಾಖೆ ಗುರುತಿಸಿದ್ದು, ಕುಂದಾಪುರ ತಾಲೂಕಿನಲ್ಲಿಯೂ ತಹಶಿಲ್ದಾರರು ಕಂದಾಯ ಇಲಾಖೆ ಮೂಲಕ ೩೮೫ ಎಕ್ರೆ ಸ್ಥಳವನ್ನು ಈಗಾಗಲೇ ಗುರುತಿಸಿದ್ದಾರೆ. ಈ ಸರಕಾರಿ ಜಾಗವನ್ನು ತೆರವು ಮಾಡಿ ನಿವೇಶನ ರಹಿತರಿಗೆ ನೀಡಿ ಎಂಬ ಹೋರಾಟ ನಮ್ಮದು. ಈ ಹೋರಾಟವು ಇಡೀ ೪೦ ಗ್ರಾಮಗಳಲ್ಲಿ ನಿರಂತರ ನಡೆಯಲಿದೆ. ಅಲಲ್ದೇ ತಾಲೂಕು ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದಲ್ಲಿ ನಡೆಯಲಿದ್ದು ಎ.28 ರಂದು ರೈತರು, ಕೃ‌ಇಕೂಲಿಕಾರರು ಸೇರಿದಂತೆ 1 ಲಕ್ಷಕ್ಕೂ ಅಧಿಕ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ಭೂಮಿಯ ಹಕ್ಕಿನ ಬಗ್ಗೆ ಪ್ರಶ್ನೆ ಎತ್ತಲಿದ್ದೇವೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯು. ದಾಸ್ ಭಂಡಾರಿ, ಮಹಾಬಲ ವಡೇರಹೋಬಳಿ, ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಗಣಪತಿ ಪುರುಶೋತ್ತಮ ಶೇಟ್, ಕೆ. ರಮೇಶ್, ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೋಣಿ ಗ್ರಾ.ಪಂ.ನ ವಿರುದ್ದ ಘೋಷಣೆಯನ್ನು ಕೂಗಲಾಯಿತು.

ಕುಂದಾಪುರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮನವಿ ಸ್ವೀಕರಿಸುವ ತನಕ ಪ್ರತಿಭಟನೆಯನ್ನು ಮುಂದುವರಿಸುವುದಾಗಿಯೂ ಪ್ರತಿಭಟನಾಕಾರರು ಆಗ್ರಹಿಸಿದರು.

Write A Comment