ನವದೆಹಲಿ,ಮಾರ್ಚ್.16: ಸಬ್ಸಿಡಿಗಳನ್ನು ಒಳಗೊಂಡಂತೆ ಸರ್ಕಾರದ ಯಾವುದೇ ಯೋಜನೆಗಳಿಗೆ ಆಧಾರ್ ಚೀಟಿ ಕಡ್ಡಾಯವಲ್ಲ ಎಂಬ ತನ್ನ ಹಿಂದಿನ ನಿಲುವನ್ನು ಸೋಮವಾರ ಸುಪ್ರೀಮ್ ಕೋರ್ಟ್ ಮತ್ತೆ ಎತ್ತಿ ಹಿಡಿದಿದೆ.
2103 ರಲ್ಲಿ ತಾವು ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಮ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಸರ್ಕಾರದ ಯೋಜನೆಗಳ ಸಾಮಾಜಿಕ ಉಪಯೋಗ ಪಡೆಯಲು ಆಧಾರ್ ಚೀಟಿಯನ್ನು ಕಡ್ಡಾಯಗೊಳಿಸಬೇಕೆಂಬ ಸರ್ಕಾರದ ಮನವಿಯನ್ನು ಅಕ್ಟೋಬರ್ 2103 ರಲ್ಲಿ ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿತ್ತು.
ಕನ್ನಡ ವಾರ್ತೆಗಳು