ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ತಾಲೂಕು ರಚನೆ ಘೋಷಣೆ ಮಾಡದೇ ಇರುವುದನ್ನು ಖಂಡಿಸಿ ಬ್ರಹ್ಮಾವರ ತಾಲೂಕು ರಚನಾ ಸಮಿತಿಯ ವತಿಯಿಂದ ಪಕ್ಷಾತೀತವಾಗಿ ಶನಿವಾರ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ತಾಲೂಕು ರಚನಾ ಸಮಿತಿ ಅಧ್ಯಕ್ಷ ಸತೀಶ ಪೂಜಾರಿ ಮಾತನಾಡಿ, ಅಭಿವೃದ್ಧಿಯ ದೃಷ್ಟಿಯಿಂದ ತಾಲೂಕು ರಚಿಸುವ ಬಗ್ಗೆ ಆಗ್ರಹ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ರಾಜಕೀಯ ದೃಷ್ಟಿಯಿಂದ ಪ್ರಸ್ತಾಪದಿಂದ ಹಿಂದೆ ಸರಿದಿದ್ದಾರೆ. ಈ ಬಾಗದ ಶಾಸಕರು, ಸಚಿವರು, ಈ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೋಳಿಸಿ ಸಿಎಂ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದರು.
ತಾಲೂಕು ರಚನಾ ಸಮಿತಿಯ ಸಂಚಾಲಕ ಅಲ್ತಾರು ನಿರಂಜನ ಹೆಗ್ಡೆ, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀರ್ ಕುಮಾರ್, ಪ್ರಮುಖರಾದ ಸದಾಶಿವ ಶೆಟ್ಟ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಜಯಂತಿ, ಅರುಣ, ಹರೀಶ್ ಪೂಜಾರಿ, ಸದಾಶಿವ ಪೂಜಾರಿ ಉಪಸ್ಥಿತರಿದ್ದರು.