ಕನ್ನಡ ವಾರ್ತೆಗಳು

ಉಡುಪಿ: ಜಿಲ್ಲೆಯ ಹಲವೆಡೆ ಮಳೆ ಸಿಂಚನ ; ಜನರಿಗೆ ಆಶ್ಚರ್ಯ.!

Pinterest LinkedIn Tumblr

rain

ಕುಂದಾಪುರ/ಉಡುಪಿ: ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ಹಲವೆಡೆ ಅಕಾಲಿಕವಾಗಿ ಕೊಂಚ ವರ್ಷಧಾರೆಯಾಗಿದ್ದು ಜನರಲ್ಲಿ ಅಚ್ಚರಿಯನ್ನುಂಟು ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಉಡುಪಿ ತಾಲೂಕಿನ ಮೂಲ್ಕಿ, ಹೆಜಮಾಡಿ ಪರಿಸರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊಂಚ ಮಳೆಯಾಗಿದ್ದು ಮೋಡ ಮುಸುಕಿದ ವಾತಾವರಣವಿತ್ತು. ಇನ್ನು ಕುಂದಾಪುರ ತಾಲೂಕಿನ ಬೈಂದೂರಿನಲಿ ಗಾಳಿ ಸಹಿತ ಕೆಲ ಹೊತ್ತು ಮಳೆ ಸುರಿದಿದ್ದು, ತಾಲೂಕಿನ ತಲ್ಲೂರು, ಕುಂದಾಪುರ ಪರಿಸರ, ಕೋಟೇಶ್ವರ, ಕೋಟ ಸೇರಿದಂತೆ ಮಲೆನಾಡು ಭಾಗದಲ್ಲಿ ಗಾಳಿ ಸಹಿತ ಹನಿ ಮಳೆ ಬಿದ್ದಿದೆ.

ಮಾರ್ಚ್ ತಿಂಗಳ ಮೊದಲ ದಿನವಾದ ಇಂದು (ಭಾನುವಾರ) ಹಲವೆಡೇ ಗಾಳಿ ಸಹಿತ ಮಳೆ ಬಿದ್ದಿರುವುದು ಸ್ಥಳೀಯ ನಾಗರಿಕರನ್ನು ಅಚ್ಚರಿಗೊಳಪಡಿಸಿದೆ. ಬೆಳಿಗ್ಗೆನಿಂದಲೂ ತಾಲೂಕಿನ ಕೆಲವೆಡೆ ಬಿಸಿಲು ಮೋಡಗಳ ಜುಗಲ್-ಬಂದಿ ನಡೆದಿತ್ತು.

ಕಳೆದ ವರ್ಷ ಜನವರಿ 1 ರಂದು ಮಳೆಯಾಗಿರುವ ಬಗ್ಗೆಯೂ ಜನರು ಈ ಸಂದರ್ಭ ಸ್ಮರಿಸಿಕೊಂಡಿದ್ದಾರೆ.

Write A Comment