ಕನ್ನಡ ವಾರ್ತೆಗಳು

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಇಬ್ಬರ ಬಂಧನ

Pinterest LinkedIn Tumblr

Sexual_harass_ment

ಮೂಲ್ಕಿ,ಫೆ.21 : ಕಿನ್ನಿಗೋಳಿ ಸಮೀಪದ ನಡುಗೋಡು ಶಾಲೆಯ ಬಳಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಸುರತ್ಕಲ್ ಸಮೀಪದ ಕೈಯೂರು ನಿವಾಸಿ ಮೋಹನ್ ಹಾಗೂ ವೆಂಕಟೇಶ್ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇಬ್ಬರ ಜೊತೆ ಇನ್ನೂ ಒಬ್ಬ ವ್ಯಕ್ತಿ ಶಾಮೀಲಾಗಿರುವ ಬಗ್ಗೆ ಸಂಶಯವಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಆರೋಪಿಗಳ ಬಗ್ಗೆ ಇನ್ನೂ ಹಲವು ಆರೋಪಗಳಿದ್ದು ಮೂಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರು ಮತ್ತು ನಮ್ಮನ್ನು ಪೊಲೀಸರಿಗೂ, ಊರಿನ ಜನರಿಗೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಅಹಂ ಹೊಂದಿದ್ದ ಇವರು ಇದೀಗ ಜೈಲು ಪಾಲಾಗಿದ್ದಾರೆ. ಇನ್ನು ಜೈಲಿನಿಂದ ಹೊರಬಂದು ಆರೋಪಿಗಳು ಮತ್ತೆ ಏನಾದರೂ ಬಾಲ ಬಿಚ್ಚಿದರೆ ಕೂಡಲೇ ಠಾಣೆಗೆ ತಿಳಿಸುವಂತೆ ಪೊಲೀಸರು ನಡುಗೋಡಿನ ಸ್ಥಳೀಯರಿಗೆ ತಿಳಿಸಿದ್ದಾರೆ.

Write A Comment