ಕನ್ನಡ ವಾರ್ತೆಗಳು

ಸುಬ್ರಹ್ಮಣ್ಯದಲ್ಲಿ ಭೀಕರ ಬೆಂಕಿ ಅವಘಡ – ಮನೆಗೆ ಬೆಂಕಿ ತಗುಲಿ ಯುವತಿ ಸಜೀವ ದಹನ

Pinterest LinkedIn Tumblr

Fire_Girl_died

ಸುಬ್ರಹ್ಮಣ್ಯ, ಫೆ.18: ಬೆಂಕಿ ಅವಘಡಕ್ಕೀಡಾದ ಮನೆಯೊಂದರ ಒಳಗೆ ಸಿಲುಕಿ ಯುವತಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ಗುತ್ತಿಗಾರು ಸಮೀಪದ ನಾಲ್ಕೂರು ಗ್ರಾಮದ ಉತ್ರಂಬೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಉತ್ರಂಬೆ ನಿವಾಸಿ ನಾರಾಯಣ ಮತ್ತು ಸರೋಜಾ ದಂಪತಿಯ ಪುತ್ರಿ ಅಕ್ಷಿತಾ(18) ಮೃತಪಟ್ಟವರಾಗಿದ್ದಾರೆ. ಅಕ್ಷಿತಾ ಒಬ್ಬರೇ ಮನೆಯೊಳಗಿದ್ದ ವೇಳೆ ಈ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಅಕ್ಷಿತಾರ ತಂದೆ ನಾರಾಯಣ ಸುಬ್ರಹ್ಮಣ್ಯ ದೇವಳದ ನೌಕರರಾಗಿದ್ದು, ಎಂದಿ ನಂತೆ ಮಂಗಳವಾರ ಬೆಳಗ್ಗೆಯೇ ಕೆಲಸಕ್ಕೆ ತೆರಳಿದ್ದರು. ತಾಯಿ ಸರೋಜಾ ಸಂಬಂಧಿಕರ ಮನೆಗೆ ತಮ್ಮ ಕುಟುಂಬದ ದೈವಸ್ಥಾನದ ಕೆಲಸ ನಿಮಿತ್ತ ತೆರಳಿದ್ದರು. ಇದ ರಿಂದಾಗಿ ಮನೆಯಲ್ಲಿ ಅಕ್ಷಿತಾ ಒಬ್ಬರೇ ಇದ್ದು, ಇದೇ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಇವರ ಮನೆಯ ಅಕ್ಕಪಕ್ಕ ಯಾವುದೇ ಮನೆಗಳು ಇಲ್ಲದಿರುವುದರಿಂದ ಘಟನೆ ನಡೆದಾಗ ಯಾರಿಗೂ ತಿಳಿದುಬಂದಿಲ್ಲ. ಬಳಿಕ ಇಡೀ ಮನೆಯನ್ನೇ ಬೆಂಕಿ ಆವರಿ ಸಿದ್ದರಿಂದ ಸುತ್ತಮುತ್ತ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಮನೆಯ ಹೆಂಚುಗಳು ಒಡೆಯುತ್ತಿರುವ ಸದ್ದು ಕೇಳಿಸಿದ್ದರಿಂದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬಂದಾಗ ಮನೆಯ ಛಾವಣಿ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿ ನಂದಿಸಿದರು. ಆ ಬಳಿಕ ಹುಡುಕಾಟ ನಡೆಸಿದಾಗ ಅಕ್ಷಿತಾ ಮೃತದೇಹ ಸಂಪೂರ್ಣ ದಹನವಾದ ಸ್ಥಿತಿಯಲ್ಲಿ ಮನೆ ಯೊಳಗಡೆ ಉರಿದು ಬಿದ್ದ ಛಾವಣಿಯ ಅವಶೇಷಗಳ ಅಡಿಯಲ್ಲಿ ಕಂಡು ಬಂದಿದೆ.

ನಿದ್ರಿಸಿದ್ದ ವೇಳೆ ಅವಘಡ..?

ಮಧ್ಯಾಹ್ನ ಅಕ್ಷಿತಾ ತನ್ನ ಕೋಣೆಯಲ್ಲಿ ನಿದ್ರಿಸಿದ್ದ ವೇಳೆ ಈ ಅವಘಡ ಸಂಭ ವಿಸಿರಬಹುದು ಎಂದು ಹೇಳಲಾಗಿದೆ. ನಿದ್ರಿಸಿದ್ದ ವೇಳೆ ಇಡೀ ಮನೆಯನ್ನು ಬೆಂಕಿ ಆವರಿಸಿಕೊಂಡಿದ್ದು, ಬಳಿಕ ಎಚ್ಚರಗೊಂಡ ಅಕ್ಷಿತಾ ಮನೆಯೊಳಗಿಂದ ಪಾರಾಗಲು ಸಾಧ್ಯ ವಾಗದೇ ಮೃತಪಟ್ಟಿರಬಹುದು ಎಂಬ ಶಂಕೆ ಕೂಡಾ ವ್ಯಕ್ತವಾಗಿದೆ. ಆದರೆ ಬೆಂಕಿ ಅವಘಡಕ್ಕೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.ದುರ್ಘಟನೆಗೆ ಸಂಬಂಧಿಸಿ ಕೆಲವೊಂದು ಊಹಾಪೋಹಾಗಳು ಕೇಳಿಬರುತ್ತಿವೆ.

ಇದೇ ವೇಳೆ ಅಕ್ಷಿತಾರ ಶವ ಮಹಜರಿಗಾಗಿ ಬೆಂಗಳೂರಿನ ವಿಧಿವಿಜ್ಞಾನ ತಂಡದವರು ಬುಧವಾರ ಘಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ ಶೆಟ್ಟಿ, ಮೆಸ್ಕಾಂ ಸಹಾಯಕ ಅಭಿಯಂತರ ಬೋರಯ್ಯ ಭೇಟಿ ನೀಡಿದ್ದರು. ಸುಳ್ಯ ವೃತ್ತ ನಿರೀಕ್ಷಕ ಸತೀಶ್, ಸುಬ್ರಹ್ಮಣ್ಯ ಠಾಣಾಧಿಕಾರಿ ನಾಗೇಶ್ ಕದ್ರಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Write A Comment