ಕನ್ನಡ ವಾರ್ತೆಗಳು

ಪ್ರೇಮಕ್ಕೆ ಮನೆಯಲ್ಲಿ ವಿರೋಧ: ವಿಷ ಸೇವಿಸಿದ್ದ ಯುವ ಪ್ರೇಮಿಗಳು ಆಸ್ಪತ್ರೆಯಲ್ಲಿ ಸಾವು

Pinterest LinkedIn Tumblr

band-1661

ಉಡುಪಿ: ತಮ್ಮ ಪ್ರೀತಿಗೆ ಮನೆಯಲ್ಲಿ ಅಡ್ಡಿಪಡಿಸುತ್ತಿದ್ದು, ವಿವಾಹಕ್ಕೆ ಒಪ್ಪದ ಕಾರಣದಿಂದ ಪ್ರೇಮಿಗಳ ದಿನವಾದ ಫೆ.೧೪ ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಿಬ್ಬರು ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಮಣಿಪಾಲ ಆಸತ್ರೆಯಲ್ಲಿ ಭಾನುವಾರ ಮ್ರತಪಟ್ಟಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರೇಮಿಗಳನ್ನು ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಯಾರ್ಡ ನಿವಾಸಿಗಳಾದ ರಾಜು (27) ಹಾಗೂ ಶಿಲ್ಪಾ (23) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಒಂದೇ ಊರಿನವರು ಎನ್ನಲಾದ ಇವರು ಕೆಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ, ಆದರೇ ಇವರ ಪ್ರೀತಿಗೆ ಇಬ್ಬರ ಮನೆಯಿಂದಲೂ ವ್ಯಾಪಕ ವಿರೋಧವಿದ್ದ ಕಾರಣ ಇಬ್ಬರು ಶನಿವಾರ ಮುಂಜಾನೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನೆಲಾಗಿದೆ. ತಕ್ಷಣ ಇಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮ್ರತಪಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮ್ರತದೇಹವನ್ನು ಬಳ್ಳಾರಿಯ ಅವರ ಹುಟ್ಟೂರಿಗೆ ರವಾನಿಸಿರುವ ಬಗ್ಗೆ ಮಾಹಿತಿಯಿದೆ.

Write A Comment