ಕನ್ನಡ ವಾರ್ತೆಗಳು

ಉದ್ಯಾವರ: ಮದುವೆ ಮನೆಯಲ್ಲಿ ಕಳ್ಳತನಕ್ಕೆ ಯತ್ನ; ತಮಿಳುನಾಡು ಮೂಲದ ಮಹಿಳೆ ಪೊಲೀಸರ ವಶಕ್ಕೆ

Pinterest LinkedIn Tumblr

Udupi_Lady-Thief

ಉಡುಪಿ: ಮದುವೆ ಮನೆಗೆ ಬಂದು ಅಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಮಹಿಳೆಯನ್ನು ಸಾರ್ವಜನಿಕರು ಹಿಡಿದು ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿಯ ಉದ್ಯಾವರದಲ್ಲಿ ಭಾನುವಾರ ನಡೆದಿದೆ.

ಮೂಲತಃ ತಮಿಳುನಾಡು ಮೂಲದವಳಾದ ಈಕೆಯನ್ನು ರೋಜಾ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಉದ್ಯಾವರದ ಮದುವೆ ಹಾಲೊಂದರಲ್ಲಿ ನಡೆಯುತ್ತಿದ್ದ ಮದುವೆಗೆ ಆಮಂತ್ರಣವಿಲ್ಲದೆ ಬುರ್ಖಾ ಧರಿಸಿ ಬಂದಿದ್ದ ಈ ಮಹಿಳೆ ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿ ಮದುವೆಯಲ್ಲಿದ್ದ ಇತರರು ಈಕೆಯನ್ನು ವಿಚಾರಿಸಿದ್ದು, ಈ ವೇಳೆ ದಂಗಾದ ಆಕೆ ಅಲ್ಲಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾಳೆನ್ನಲಾಗಿದೆ.

ಕೂಡಲೇ ಮದುವೆ ಹಾಲಿನ ಹೊರಭಾಗದಲ್ಲಿ ಸಾರ್ವಜನಿಕರ ಸಹಾಯದಿಂದ ಈಕೆಯನ್ನು ಹಿಡಿದು ವಿಚಾರಣೆ ನಡೆಸಿದಾಗ ತಾನೂ ಕದಿಯಲು ಬಂದಿಲ್ಲ, ಊಟಕ್ಕೆ ಬಂದಿದ್ದೇನೆಂದು ನುಣುಚಿಕೊಳ್ಳಲು ಯತ್ನಿಸಿದ್ದಾಳೆ.

ಸ್ಥಳೀಯರು ಪೊಲೀಸರಿಗೆ ಈಕೆಯನ್ನು ಒಪ್ಪಿಸಿದ್ದು, ಕಾಪು ಪೊಲೀಸರು ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Write A Comment