ರಾಷ್ಟ್ರೀಯ

ಡಾ. ಪ್ರಭಾ ಅತ್ರೆಗೆ ಪಂ. ಭೀಮಸೇನ್‌ ಜೋಶಿ ಪ್ರಶಸ್ತಿ

Pinterest LinkedIn Tumblr

prabaweb

ನಾಸಿಕ್‌: ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ.ಪ್ರಭಾ ಅತ್ರೆ (82) ಅವರಿಗೆ  2014ನೇ ಸಾಲಿನ ಪಂ. ಭೀಮಸೇನ್‌ ಜೋಶಿ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ.

ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ. ಜಸ್‌ರಾಜ್‌ ಅವರು ಭಾನುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಮಹಾರಾಷ್ಟ್ರ ಸರ್ಕಾರ ನೀಡುವ ಈ ಪ್ರಶಸ್ತಿ ರೂ 5 ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

‘ಮಹಾರಾಷ್ಟ್ರ ಸರ್ಕಾರ ಈ ಪ್ರಶಸ್ತಿಯ ಮೂಲಕ ನನ್ನನ್ನು ಮಾತ್ರವಲ್ಲ ಇಡೀ ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನು ಗೌರವಿಸಿದೆ’ ಎಂದು ಡಾ. ಅತ್ರೆ ಸಂತಸ ವ್ಯಕ್ತಪಡಿಸಿದ್ದಾರೆ.

Write A Comment