ಕನ್ನಡ ವಾರ್ತೆಗಳು

ಹಿಂದೂ ಎಂದಿಗೂ ಕೋಮುವಾದಿಯಾಗಲು ಸಾಧ್ಯವಿಲ್ಲ : ಕಲ್ಲಡ್ಕ ಪ್ರಭಾಕರ ಭಟ್

Pinterest LinkedIn Tumblr

SONY DSC

ಮಂಗಳೂರು,ಫೆ.14 : ಇಂದು ಹಿಂದುಗಳೇ ಹಿಂದುಗಳಿಗೆ ಮೋಸ, ಅನ್ಯಾಯ ಮಾಡುವ, ಹಿಂದೂ ಎಂದರೆ ಕೋಮುವಾದಿ ಎಂಬ ಭಾವನೆ ಮೂಡಿಸುವ ಕಾರ್ಯ ನಡೆಸುತ್ತಿದ್ದು ಹಿಂದೂ ಎಂದಿಗೂ ಕೋಮುವಾದಿಯಾಗಲು ಸಾಧ್ಯವಿಲ್ಲವೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ.ಪ್ರಭಾಕರ್ ಭಟ್ ಹೇಳಿದರು.

ಅವರು ಶುಕ್ರವಾರ ಕುಲಶೇಖರ ಡೈರಿ ಬಳಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನಂದಿನಿ ಶಾಖೆಯು ಆಯೋಜಿಸಿದ್ದ ವಿಶ್ವ ಹಿಂದೂ ಪರಿಷತ್‍ನ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂ ಸಮಾಜವನ್ನು ದೂಷಣೆ ಮಾಡುವ ಜನರು ಹೊರಗಿವರಿಗಿಂತ ನಮ್ಮ ಸಮಾಜದವರೇ ಹೆಚ್ಚಾಗಿದ್ದಾರೆ. ಕೆಲ ಸಮಯಗಳ ಹಿಂದೆ ರಾಷ್ಟ್ರ ಪಶಸ್ತಿ ಪುರಸ್ಕøತರೋರ್ವರು ನಾವು ಮೂರ್ತಿ ಪೂಜೆ ಮಾಡುತ್ತೇವೆ. ಆ ಮೂರ್ತಿಗಳಿಗೆ ಮೂತ್ರ ಮಾಡಿ ಎಂದು ಹೇಳುತ್ತಿದ್ದರು. ಏನಾಗಿದೆ ಅಂತ ಗೋತ್ತಿಲ್ಲ, ದೇವರೇ ಅವರ ತಲೆಗೆ ಮೂತ್ರ ಮಾಡಿದರೋ ಏನೂ… ಕಡೆಗೆ ಅವರ ಮೂತ್ರವೇ ನಿಂತು ಮರಣಿಸಿದರು. ಅವರ ತೀರುವ ಮುನ್ನ ತಾನು ಸತ್ತರೆ ವೈದಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕೆಂದು ಹೇಳಿದ್ದರು. ಅಂದರೆ ಒಳಗಡೆ ತಾನೂ ಹಿಂದೂವೆಂಬ ಭಾವನೆ ಹೊರಗಡೆ ಬೇರೆ ಬೇರೆ ಕಾರಣಗಳಿಗೆ ಹಿಂದೂ ಧರ್ಮವನ್ನು ದೂಷಣೆ ಮಾಡುವ ಪ್ರಯತ್ನವಾಗಿದೆ. ಇದೀಗ ಹಿಂದೂಗಳೇ ಅಧಿಕಾರಕ್ಕೆ ಬಂದಿದ್ದರೂ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

kalladaka_prbhak_bht_3a kalladaka_prbhak_bht_2a

ಇಂದು ಅಮೃತ ಕೊಡುವ ಹಸುವನ್ನು ಕೊಲ್ಲುತ್ತಿದ್ದಾರೆ. ಶೃಂಗೇರಿಯ ಸಮೀಪ ಎ‌ಎನ್‍ಎಫ್ ಯೋಧ ನಕ್ಸಲನೆಂಬ ಶಂಕೆಯಿಂದ ದನಗಳ್ಳನನ್ನು ಕೊದ್ದಿದ್ದನು. ಅಷ್ಟಕ್ಕೆ ಆತನ ಭಾವ, ಖಾದರ್ ಇನ್ನಿತರರು ಸೇರಿ ಆತ್ತರು. ಅಷ್ಟರಲ್ಲಿ ಗೋಕರ್ಣದ ಮನುಷ್ಯನೊಬ್ಬ ಮರಣಿಸಿದಾತನಿಗೆ 50 ಲಕ್ಷ ಹಣ ಕೊಡಬೇಕಾಗಿ ಕೇಳಿದ್ದರು. ಹಾಗಾದರೆ ಅಲ್ಪಸಂಖ್ಯಾತನಾದರೆ ಎನೂ ಬೇಕಾದರೂ ಮಾಡಬಹುದಾ, ದನಗಳನ್ನು ಕೊಲ್ಲಬಹುದಾ ಎಂದು ಪ್ರಶ್ನಿಸಿದರು. ದನವನ್ನು ಕದ್ದರೂ ನಮಗೆ ಬೇಜಾರಾಗಲ್ಲ, ಹಾಗಾಗಿ ಇಂದು ಯುವತಿಯರನ್ನು ಕದ್ದು ಕೊಂಡೊಯ್ದರೂ ಬೇಜಾರಾಗುತ್ತಿಲ್ಲ. ಲವ್ ಜಿಹಾದ್ ಹೆಸರಲ್ಲಿ ಸಾವಿರಾರು ಯುವತಿಯರನ್ನು ಮೋಸ ಮಾಡಿ ಕರೆದೊಯ್ದಿದ್ದು ಅವರ ಬದುಕು ನರಕವಾಗಿದೆ ಎಂದರು.

ಮರುಮತಾಂತರ ಬಗ್ಗೆ ಅಧಿವೇಶನದಲ್ಲಿ ತುಂಬಾ ಮಾತನಾಡುತ್ತಿದ್ದಾರೆ. ಆದರೆ ಹಿಂದೂವನ್ನು ಮುಸ್ಲಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವಾಗ ನೀವೆಲ್ಲ ಎಲ್ಲಿದ್ದಿರಿ… ಮತಾಂತರಗೊಂಡವನು ತನ್ನ ಧರ್ಮ ವಾಪಸ್ಸು ಬರುವೆನೆಂದಾಗ ದೊಡ್ಡ ವಿಷಯವಾಗುತ್ತಿದೆ. ನಾವು ಇನ್ನೊಂದು ಧರ್ಮವನ್ನು ನಾಶ ಮಾಡಿ ಬದುಕಲು ಯೋಚಿಸುವುದಿಲ್ಲ. ಆದರೆ ನಮ್ಮ ಧರ್ಮದಲ್ಲಿರುವರನ್ನು ಬೇರೆ ಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡಬಾರದೆಂದು ಹೇಳಿದರು.

kalladaka_prbhak_bht_4a

ಹಿಂದೂ ಧರ್ಮವನ್ನು ವಿರೋಧಿಸುವವರಿಗೆ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಹಿಂದೂತ್ವದ ಆಧಾರದಲ್ಲಿ ದೇಶವನ್ನು ಮತ್ತೇ ಕಟ್ಟ ಬೇಕಾಗಿದೆ. ಹಿಂದೂ ಸಮಾಜವನ್ನು ಒಟ್ಟು ಮಾಡು ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ಸಾಕ್ಸೋವದಕ ಸೂರಜ್ ಕುಡುಪು ಹಾಗೂ ಯಕ್ಷಗಾನ ಕಲಾವಿದ ವೆಂಕಟೇಶ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುಜನ್‍ದಾಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡರಾದ ಮನೋಹರ್ ಸುವರ್ಣ ಅತ್ತಾವರ, ಶರಣ್ ಪಂಪ್‍ವೆಲ್, ದಿನೇಶ್ ಪೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Write A Comment