ಮಂಗಳೂರು,ಫೆ.14 : ಭಾರತದ ಬಹು ದೊಡ್ಡ ಸಂಸ್ಥೆಯಾದ ರಿಲಾಯನ್ಸ್ ಕಂಪೆನಿಯು ಜಿಲ್ಲೆಗೆ ಸದ್ಯದಲ್ಲೇ ಕೇಬಲ್ ಪೂರೈಸಲು ರೂಪುರೇಷೆ ಹಾಕಿಕೊಂಡಿದ್ದು ಸ್ಥಳೀಯ ಕೇಬಲ್ ಆಪರೇಟರ್ ಗಳಲ್ಲಿ ನಡುಕ ಹುಟ್ಟಿಸಿದೆ ಎನ್ನಲಾಗುತ್ತಿದೆ. ಹಲವು ಯಶಸ್ವೀ ಯೋಜನೆಗಳನ್ನು ಪೂರೈಸಿರುವ ರಿಲಾಯನ್ಸ್ ಸಂಸ್ಥೆಯು ಕೇಬಲ್ ದಂಧೆಗೆ ಕೈ ಹಾಕಿದ್ದು, ಈಗಾಗಲೇ ಕೇಬಲ್ ವಯರ್‌ಗಳು ಜಿಲ್ಲೆಯಲ್ಲಿ ಹಾದುಹೋಗಿದೆ. ಸಾಧ್ಯವಾದರೆ ಮಾರ್ಚ್ 31ರಂದು ಕೇಬಲ್ ಆಪರೇಟಿಂಗ್ ಉದ್ಘಾಟಿಸಲು ಯೋಚಿಸಿದೆ ಎನ್ನಲಾಗಿದೆ. ರಿಲಾಯನ್ಸ್ ಸಂಸ್ಥೆಯು ತನ್ನ ಗ್ರಾಹಕರಿಗೆ ಹೈಕ್ವಾಲಿಟಿ ಪಿಕ್ಚರ್ ಫೆಸಿಲಿಟಿ, ಇಂಟರ್‍ನೆಟ್ ಸೌಲಭ್ಯದ ಜೊತೆಗೆ ಇನ್ನೂ ಹಲವು ಉನ್ನತ ಮಟ್ಟದ ಪ್ರಯೋಜನಗಳನ್ನು ತಲುಪಿಸಲು ಯೋಚಿಸಿದೆ. ಇದರಿಂದ ಸದ್ಯ ಸ್ಥಳೀಯ ಕೇಬಲ್ ಆಪರೇಟರ್ ಗಳಲ್ಲಿ ನಡುಕ ಹುಟ್ಟಿದೆ ಎನ್ನಲಾಗುತ್ತಿದೆ.
ಜಿಲ್ಲೆಗೆ ಈಗಾಗಲೇ ಕೇರಳದ ಯಶಸ್ವೀ ಕೇಬಲ್ ಆಪರೇಟಿಂಗ್ ಸಂಸ್ಥೆ ಏಶಿಯಾನೆಟ್ ಮನೆಮನೆಗೆ ಕೇಬಲ್ ತಲುಪಿಸಲು ಪ್ರಾರಂಭಿಸಿದ್ದು ಹತ್ತಿರತ್ತಿರ ಎರಡು ಸಾವಿರ ಮನೆಗಳಿಗೆ ಕೇಬಲ್ ಪೂರೈಸುತ್ತಿದೆ. ಇದರೊಂದಿಗೆ ಏಶಿಯಾನೆಟ್ ಮಾಮೂಲಿ ಕೇಬಲ್ ದರದೊಂದಿಗೆ 15 ಹೆಚ್‍ಡಿ ಚಾನೆಲ್ ಗಳನ್ನು ನೀಡುತ್ತಿದ್ದು ಸ್ಥಳೀಯ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದರಲ್ಲಿದೆ. ಡಿಟಿಹೆಚ್ ಸೇವೆಯಲ್ಲೂ 15 ಹೆಚ್‍ಡಿ ಚಾನೆಲ್‍ಗೆ 600ರೂಪಾಯಿಗಳಷ್ಟನ್ನು ಪಾವತಿಸಬೇಕಿರುವಾಗ ಏಶಿಯಾನೆಟ್ ಮಾಮೂಲಿ ದರದಲ್ಲಿ ಉನ್ನತ ಸೌಲಭ್ಯ ಕಲ್ಪಿಸುತ್ತಿದ್ದು ಸಹಜವಾಗಿ ಜನತೆ ಏಶಿ ಯಾನೆಟ್ ನೆಟ್‍ವರ್ಕ್‍ಗೆ ಮರುಳಾಗಿದ್ದಾರೆ. ಈ ಸಂದರ್ಭ ಏಶಿಯಾನೆಟ್ ಸಂಸ್ಥೆಯು ಸ್ಥಳೀಯ ಖಾಸಗೀ ಚಾನೆಲ್‍ಗಳೊಂದಿಗೆ ಹೊಂದಾಣಿಕೆ ಯಲ್ಲಿ ವಿಫಲವಾಗಿರುವುದರಿಂದ ಸ್ಥಳೀಯ ಚಾನೆಲ್‍ಗಳು ಏಶಿಯಾನೆಟ್ ನೆಟ್‍ವರ್ಕ್‍ನಲ್ಲಿ ಲಭಿಸುತ್ತಿಲ್ಲ.
ಸ್ಥಳೀಯ ಕೇಬಲ್ ಆಪರೇಟರ್‌ಗಳು ಇದನ್ನೇ ಮುಂದಿಟ್ಟು ಕೇಬಲ್ ಕನೆಕ್ಷನ್ ಕೊಡುತ್ತಿದ್ದಾರೆ. ಅಲ್ಲದೆ ಈಗಾಗಲೇ ಏಶಿಯಾನೆಟ್ ಕೇಬಲ್ ಆಪರೇಟರ್ ಗಳಿಗೆ ಲೋಕಲ್ ಚಾನೆಲ್ ಹಾಕಬೇಕೆಂದು ಗ್ರಾಹಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಕೆಲವು ಉತ್ತಮ ಸೌಲಭ್ಯದೊಂದಿಗೆ ಏಶಿಯಾನೆಟ್ ಮಾತ್ರ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದೀಗ ಹೆಚ್‍ಡಿ ಚಾನೆಲ್‍ಗಳನ್ನು ಗ್ರಾಹಕರಿಗೆ ಕೊಡುವಲ್ಲಿ ಸಂಪೂರ್ಣ ವಿಫಲ ವಾಗಿರುವ ಸ್ಥಳೀಯ ಆಪರೇಟರ್‍ಗಳಿಗೆ ಏಶಿಯಾನೆಟ್ ಒಂದು ತಲೆ ನೋವಾ ಗಿರುವಾಗಲೇ, ರಿಲಾಯನ್ಸ್‍ನ ಪಾದಾ ರ್ಪಣೆ ಭೀತಿ ಹುಟ್ಟಿಸಿದೆ ಎನ್ನಲಾಗುತ್ತಿದೆ.