ಕನ್ನಡ ವಾರ್ತೆಗಳು

ಬೆಂಗಳೂರು : ಅನೆಕಲ್ಲಿನಲ್ಲಿ ರೈಲು ಅಪಘಾತ – 8 ಸಾವು .

Pinterest LinkedIn Tumblr

train_fall_down_1a

ಬೆಂಗಳೂರು, ಫೆ. 13 : ಶುಕ್ರವಾರ ಮುಂಜಾನೆ ಆನೇಕಲ್ ಬಳಿ ಬೆಂಗಳೂರು-ಎರ್ನಾಕುಲಂ ರೈಲಿನ 8 ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.  ಸಮಯ 10.44 : ರೈಲು ದುರಂತದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.  ಘಟನಾ ಸ್ಥಳಕ್ಕೆತೆರಳಿದ ನನ್ನ ಸಹೋದ್ಯೋಗಿ ಸದಾನಂದ ಗೌಡರು  ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

ಹಳಿಯಲ್ಲಿನ ತಾಂತ್ರಿಕ ದೋಷದಿಂದಾಗಿ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದೆ. ರೈಲಿನ ಬೋಗಿಯಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಆನೇಕಲ್ ಮತ್ತು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಅಪಘಾತದಲ್ಲಿ  8 ಪ್ರಯಾಣಿಕರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಿಂದಾಗಿ ಬೈಯಪ್ಪನಹಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.

ಆನೇಕಲ್ ರೈಲು ನಿಲ್ದಾಣದಿಂದ 3 ಕಿ.ಮೀ. ದೂರದ ಬಿದರಗೆರೆ ಬಳಿ ಈ ಅಪಾಘಾತ ಸಂಭವಿಸಿದೆ. 2 ಬೋಗಿಗಳು ಅಪಘಾತದಲ್ಲಿ ಸಂಪೂರ್ಣವಾಗಿ ಜಖಂಗೊಂಡಿದೆ. ಇಬ್ಬರು ವಿದೇಶಿ ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

 train_fall_down_3 train_fall_down_2 train_fall_down_4

ಸಮಯ 10.41 : ಬೆಂಗಳೂರು-ಎರ್ನಾಕುಲಂ ರೈಲು ಅಪಘಾತದ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಶುಕ್ರವಾರದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾಪಿಸಿದ್ದು, ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದಲೂ ಪರಿಹಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಮಯ 10.34 : ಅಪಘಾತ ಸ್ಥಳಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯಕ್ಕೆ ಮೊದಲು ಆದ್ಯತೆ ನೀಡಲಾಗುತ್ತಿದೆ ನಂತರ ಘಟನೆಗೆ ಕಾರಣವೇನು? ಎಂಬ ಬಗ್ಗೆ ಪರಿಶೀಲನೆ ಡೆಸಲಾಗುತ್ತದೆ ಎಂದು ಸಚಿವರು

ಸಮಯ 10.20 : ಬೆಂಗಳೂರು-ಎರ್ನಾಕುಲಂ ರೈಲು ( 12677) ದುರಂತದ ಬಗ್ಗೆ ಮಾಹಿತಿ ನೀಡಲು ಬೆಂಗಳೂರು ರೈಲು ನಿಲ್ದಾಣದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು 080 – 22371166, 22156553, 22156554.

ಸಮಯ 10.10 : ಗಾಯಗೊಂಡವರು ಮತ್ತು ಮೃತಪಟ್ಟವರು ಕೇರಳದವರಿರಬಹುದು ಎಂದು ಶಂಕಿಸಲಾಗಿದೆ.

ಸಮಯ 10 ಗಂಟೆ : ರೈಲು ಅಪಘಾತದಿಂದ ಬೆಂಗಳೂರಿಗೆ ಬರಬೇಕಿದ್ದ ರೈಲುಗಳ ಸಂಚರದಲ್ಲಿ ವ್ಯತ್ಯಯ ಉಂಟಾಗಿದೆ.
ಸಮಯ 9.53 : ರೈಲು ಅಪಘಾತದಲ್ಲಿ ಗಾಯಗೊಂಡವರ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆಗಳು 9731666751, 080-22371166
ಹಳಿ ತಪ್ಪಿದ ಬೆಂಗಳೂರು-ಎರ್ನಾಕುಲಂ ರೈಲು : 8 ಸಾವು
ಸಮಯ 9.44 : ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಸ್ಥಳಕ್ಕೆ ತೆರಳುತ್ತಿದ್ದಾರೆ. ಜಖಂಗೊಂಡಿರುವ ಬೋಗಿಗಳನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಲಾಗುತ್ತಿದ್ದು, ನಂತರ ಒಳಗೆ ಸಿಲುಕಿರುವವರನ್ನು ರಕ್ಷಿಸಲಾಗುತ್ತದೆ.
ಸಮಯ 9.40 : ರೈಲು ಅಪಘಾತದಲ್ಲಿ ಮಗು ಸೇರಿ 8 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸಮಯ 9.35 : ಆರೋಗ್ಯ ಸಚಿವ ಯು.ಟಿ.ಖಾದರ್ ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮೂವರು ಪ್ರಯಾಣಿಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಸ್ಥಳಕ್ಕೆ 20ಕ್ಕೂ ಹೆಚ್ಚು ಅಂಬ್ಯುಲೆನ್ಸ್‌ ಅನ್ನು ಕಳುಹಿಸಲಾಗಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಮಯ 9.30 : ರೈಲು ಅಪಘಾತದಲ್ಲಿ ಗಾಯಗೊಂಡವರ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿಯನ್ನು ಆರಂಭಿಸಿದ್ದಾರೆ, ದೂರವಾಣಿ ಸಂಖ್ಯೆ 08022942666

ಬೆಂಗಳೂರು-ಹೊಸೂರು ಮಾರ್ಗದಲ್ಲಿ ಶುಕ್ರವಾರ ಮುಂಜಾನೆ 7.30ರ ಸುಮಾರಿಗೆ ಬೆಂಗಳೂರು-ಎರ್ನಾಕುಲಂ ರೈಲು ಹಳಿ ತಪ್ಪಿದೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಜೊತೆ ತೆರಳುವಂತೆ ಬೆಂಗಳೂರು ಗ್ರಾಮಾಂತರ ಡಿಎಚ್‌ಓಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಬೋಗಿಯಲ್ಲಿ ಹಲವು ಪ್ರಯಾಣಿಕರು ಸಿಲುಕಿದ್ದಾರೆ.

Write A Comment