ಕನ್ನಡ ವಾರ್ತೆಗಳು

ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಕೆಗೆ ಆದೇಶ : ಕೆ ಜೆ ಜಾರ್ಜ್

Pinterest LinkedIn Tumblr

mobail_jamer_photo_1

ಮಂಗಳೂರು,ಫೆ.13 : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಸರಕಾರದಿಂದ ಮಂಜೂರಾತಿ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸದಸ್ಯ ಐವನ್ ಡಿಸೋಜ ಕೇಳಿದ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಪ್ರತಿದಿನ ಕೈದಿಗಳ ಹೊಡೆದಾಟದ ಬಗ್ಗೆ ಕೇಸುಗಳು ದಾಖಲಾಗಿರುವ ಕುರಿತ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕಾರಾಗೃಹದಲ್ಲಿ ಪ್ರತಿದಿನ ಕೈದಿಗಳ ಹೊಡೆದಾಟ ನಡೆಯುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. ಎರಡು ವರ್ಷಗಳಿಂದ ಅಕ್ರಮ ಚಟುವಟಿಕೆಗಳಾದ ಮೊಬೈಲ್ ಬಳಕೆ ಹಾಗೂ ಮಾದಕ ದ್ರವ್ಯದ ತಲಾ ಎರಡು ಪ್ರಕರಣಗಳು ಸೇರಿದಂತೆ ಹೊಡೆದಾಟದ ಆರು ಪ್ರಕರಣ ದಾಖಾಲಾಗಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಕೈದಿಗಳ ಹೊಡೆದಾಟ ನಿಯಂತ್ರಿಸಲು ಕಾರಾಗೃಹದ ಅಧಿಕಾರಿ/ ಸಿಬ್ಬಂದಿಗಳು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಕೈದಿಗಳಲ್ಲಿ ಹೊಡೆದಾಟಕ್ಕೆ ಹಳೆಯ ವೈಷಮ್ಯ ಮತ್ತು ಕ್ಷುಲ್ಲಕ ವಿಚಾರಗಳು ಕಾರಣ. ಮಂಗಳೂರಿನಲ್ಲಿ 200 ಮಂದಿ ಕೈದಿಗಳಿಗೆ ಮಾತ್ರ ಸ್ಥಳಾವಕಾಶವಿದ್ದು, ಹೆಚ್ಚುವರಿ 183 ಮಂದಿ ಇದ್ದಾರೆ ಎಂದು ಸಚಿವರು ಉತ್ತರಿಸಿದರು.

Write A Comment