ಕನ್ನಡ ವಾರ್ತೆಗಳು

ತುಂಬೆಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ-2015ಕ್ಕೆ ಅದ್ದೂರಿ ಚಾಲನೆ

Pinterest LinkedIn Tumblr

Abbakka_utsava_tumbe

ಬಂಟ್ವಾಳ (ತುಂಬೆ- ರಾಣಿ ಅಬ್ಬಕ್ಕ ವೇದಿಕೆ), ಜ.25: ರಾಣಿ ಅಬ್ಬಕ್ಕ ಕೇವಲ ಕರಾವಳಿಗೆ ಮಾತ್ರ ಸೀಮಿತಳಲ್ಲ. ಇಡೀ ಭಾರತಕ್ಕೆ ಆಕೆಯ ಶಕ್ತಿಯನ್ನು ತೋರಿಸಿಕೊಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಯಗಳಲ್ಲಿ ಸಂಶೋಧನಾ ಪೀಠ ಸ್ಥಾಪಿಸುವ ಮೂಲಕ ರಾಣಿ ಅಬ್ಬಕ್ಕನ ನಿತ್ಯ ಸ್ಮರಣೆ ಯಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿ ತಿಯ ನೇತೃತ್ವದಲ್ಲಿ ತುಂಬೆ ಬಿ.ಎ. ಪದವಿ ಪೂರ್ವ ಕಾಲೇಜಿನ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಶನಿವಾರ ಸಂಜೆ ಆರಂಭಗೊಂಡ 2 ದಿನ ಗಳ ವೀರರಾಣಿ ಅಬ್ಬಕ್ಕ ಉತ್ಸವ- 2015ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಬ್ಬಕ್ಕನ ಕುರಿತಾಗಿ ದೇಶವಿದೇಶ ಗಳಲ್ಲಿರುವ ಲೇಖನಗಳು ಕನ್ನಡಕ್ಕೆ ತರ್ಜುಮೆಯಾಗಬೇಕಿದೆ ಎಂದ ಅವರು, ಅಬ್ಬಕ್ಕನ ಕುರಿತಾದ ಅಧ್ಯಯನಕ್ಕೆ ಇದು ಪ್ರೇರಣೆಯಾಗಲಿ ಎಂದರು.

ಕರಾವಳಿ ಗಂಡು ಮೆಟ್ಟಿದ ನಾಡಲ್ಲ. ಈ ಮಾತಿಗೆ ನನ್ನ ತಕರಾರಿದೆ ಎಂದ ಅವರು, ಭೂಮಿಯೂ ಒಂದು ಹೆಣ್ಣು, ಸ್ವಾತಂತ್ರ್ಯದ ಮೊದಲ ಪಾಠ ಹೇಳಿದ ಅಬ್ಬಕ್ಕಳಂತಹ ಹೋರಾಟ ಗಾರ್ತಿಯರು ಇಲ್ಲಿ ಮೆರೆದಿದ್ದಾರೆ. ತನ್ನ ಸಾಮರ್ಥ್ಯವನ್ನು ತನ್ನ ವಿರಾಟ್ ಸ್ವರೂಪವನ್ನು ಆಗಾಗ್ಗೆ ಹೆಣ್ಣು ತೋರಿ ಸಿಕೊಂಡು ಬಂದಿದ್ದಾಳೆ. ಹಾಗಾಗಿ ಕರಾವಳಿ ‘ಹೆಣ್ಣಿನ ನಾಡು’ ಎಂದು ಪ್ರತಿ ಪಾದಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ರಾಣಿ ಅಬ್ಬಕ್ಕಳ ಸ್ವಾಭಿ ಮಾನ ಸ್ಫೂರ್ತಿಯ ಸಂಕೇತ. ರಾಣಿ ಅಬ್ಬಕ್ಕಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಶಾಶ್ವತ ಯೋಜನೆ ಕರಾವಳಿ ಜಿಲ್ಲೆಯಲ್ಲಿ ಆಗಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ಸಚಿವ ಯು.ಟಿ.ಖಾದರ್ ಅಬ್ಬಕ್ಕ ಧ್ವಜಾರೋಹಣ ನೆರವೇರಿಸಿ ಮಾತ ನಾಡಿ, ಅಬ್ಬಕ್ಕ ಉತ್ಸವಕ್ಕೆ ಸರಕಾರ ನಿರಂತರ ಪ್ರೇರಣೆ ನೀಡುತ್ತಿರುವುದು, ಕರಾವಳಿ ಹಾಗೂ ಅಬ್ಬಕ್ಕನ ಮೇಲಿನ ಅಭಿಮಾನದಿಂದ ಎಂದರು.

ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಸಂಧ್ಯಾ ರೆಡ್ಡಿ ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಚಾಲನೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ತುಕಾರಾಮ ಪೂಜಾರಿ, ಜಿಪಂ ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಎನ್.ಎಸ್.ಕರೀಂ, ತುಂಬೆ ಗ್ರಾಪಂ ಅಧ್ಯಕ್ಷ ಒಳವೂರು ಮುಹಮ್ಮದ್, ಸೇವಾಂಜಲಿ ಟ್ರಸ್ಟ್ ಮುಖ್ಯಸ್ಥ ಕೆ.ಕೆ. ಪೂಂಜಾ,, ಮಹಿಳಾ-ಮಕ್ಕಳ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಗರ್ಟ್ರೂಡ್ ವೇಗಸ್, ಕ್ರೀಡಾ ಇಲಾಖಾ ಉಪ ನಿರ್ದೇಶಕ ಪಾಂಡುರಂಗ ಗೌಡ, ವಾರ್ತಾಧಿಕಾರಿ ಖಾದರ್ ಶಾ, ಕೆಎಸ್‌ಆರ್‌ಪಿ ಕಮಾಂಡೆಂಟ್ ಸಿ.ರಂಗಸ್ವಾಮಿ, ಕನ್ನಡ-ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ತಹಶೀ ಲ್ದಾರ್ ಮುಹಮ್ಮದ್ ಇಸ್ಹಾಕ್, ಹೈದರ್ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸಂಚಾಲಕ ಅಬ್ದುಲ್ ಅಝೀಝ್ ಹಕ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಜತೆ ಕೋಶಾಧಿಕಾರಿ ನಮಿತಾ ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು.

Write A Comment