ಕನ್ನಡ ವಾರ್ತೆಗಳು

ಯೆನೆಪೊಯ ವಿವಿಯ 4ನೆ ಘಟಿಕೋತ್ಸವ : 318 ಮಂದಿಗೆ ಪದವಿ ಪ್ರದಾನ ನಾಲ್ವರಿಗೆ ಚಿನ್ನದ ಪದಕ

Pinterest LinkedIn Tumblr

Yenopoya_Gati_kotsava

ಮಂಗಳೂರು, ಜ.25: ರಾಜಕೀಯ ದಲ್ಲಿ ಯುವಜನತೆಯ ಸಕ್ರಿಯ ಪಾಲ್ಗೊ ಳ್ಳುವಿಕೆಯಿಂದ ಭಾರತದ ಪ್ರಜಾ ಪ್ರಭುತ್ವ ಸದೃಢವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎಸ್.ವೈ.ಖುರೇಶಿ ಹೇಳಿದ್ದಾರೆ.ಅವರು ಯೆನೆಪೊಯ ವಿಶ್ವವಿದ್ಯಾಲಯದ ಆವರಣದ ಯೆನ್‌ಡ್ಯುರೆನ್ಸ್ ಸಭಾಂಗಣದಲ್ಲಿ ಜರಗಿದ ವಿವಿಯ 4ನೆ ಘಟಿಕೋತ್ಸವದ ಮುಖ್ಯ ಭಾಷಣ ಮಾಡಿದರು.

ಪ್ರಸಕ್ತ ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಯುವಜನತೆಯ ಸಂಖ್ಯೆ 500 ಮಿಲಿಯನ್‌ಗೂ ಅಧಿಕ. ಆದರೆ ಕಳೆದ ಚುನಾವಣೆಯ ವೇಳೆ ಈ ಪೈಕಿ 18ರಿಂದ 20 ವರ್ಷದೊಳಗಿನವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದ್ದು ಶೇ.12ರಷ್ಟು ಮಾತ್ರ. ಬಳಿಕ ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಚುನಾವಣಾ ಆಯೋಗ ಯುವ ಮತದಾರರ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ ಎಂದವರು ವಿವರಿಸಿದರು.

ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.48ರಷ್ಟು ಯುವ ಜನತೆ ಪ್ರಜಾಪ್ರಭುತ್ವದ ಬಗ್ಗೆ ದೃಢ ನಂಬಿಕೆ ಹೊಂದಿದ್ದಾರೆ. ಅದೇ ರೀತಿ ಶೇ.66 ಯುವಜನರು ತಾವು ಮತ ಚಲಾಯಿಸುವ ಮೂಲಕ ಬದಲಾ ವಣೆ ಉಂಟುಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025ರ ವೇಳೆ ಇನ್ನಷ್ಟು ದೊಡ್ಡ ಸಂಖ್ಯೆ ಯಲ್ಲಿ ಯುವಜನತೆ ದೇಶವನ್ನು ಪ್ರತಿನಿಧಿ ಸಲಿದ್ದಾರೆ. ಆಗ ದೇಶದ ನಾಗರಿಕರ ಸರಾಸರಿ ವಯೋಮಾನ 29ಕ್ಕೆ ಇಳಿ ಯಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸಶಕ್ತ ಗೊಳಿಸಲು ರಾಜಕೀಯದಲ್ಲಿ ಯುವ ಜನರಿಗೆ ಹೊಣೆಗಾರಿಕೆ ಮತ್ತು ಅವರ ಪಾತ್ರವನ್ನು ಗುರುತಿಸಬೇಕಾಗಿದೆ ಎಂದು ಎಸ್.ವೈ.ಖುರೇಶಿ ನುಡಿದರು.

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಕ್ರಿಯವಾಗಬೇಕು. ಈ ನಿಟ್ಟಿನಲ್ಲಿಯೂ ಕೇಂದ್ರ ಚುನಾ ವಣಾ ಆಯೋಗ ಮಹಿಳಾ ಮತದಾರರ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ. ಕಳೆದ 2000ನೆ ಇಸವಿಯಲ್ಲಿ ಸಂವಿಧಾ ನದ 110ನೆ ತಿದ್ದುಪಡಿಯಂತೆ ಸ್ಥಳೀ ಯಾಡಳಿತ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ.33ರಿಂದ ಶೇ.50ಕ್ಕೆ ಏರಿಕೆ ಮಾಡಲಾಗಿದೆ ಎಂದವರು ತಿಳಿಸಿದರು.

ಇತ್ತೀಚೆಗೆ ಕಡ್ಡಾಯ ಮತದಾನದ ಪ್ರಸ್ತಾಪ ದೇಶದ ಮುಂದಿದೆ. ಆದರೆ ಸಂವಿಧಾನ ಆಶಯದ ಪ್ರಕಾರ ಇದು ಕಷ್ಟ ಸಾಧ್ಯ ಎಂದು ಖುರೇಶಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಘಟಿಕೋತ್ಸವದ ಪದವಿ ಪ್ರದಾನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಪದವಿ ಪ್ರಮಾಣ ಪತ್ರ ವಿತರಿಸಿದರು.

ಸಮಾರಂಭದಲ್ಲಿ ಮಂಗಳೂರು ವಿವಿಯ ಮಾಜಿ ಕುಲಪತಿ ಎಂ. ಐ.ಸವದತ್ತಿ, ಕರ್ನಾಟಕ ಮುಕ್ತ ವಿವಿಯ ಮಾಜಿ ಕುಲಪತಿ ಬಿ.ಎ. ವಿವೇಕ್ ರೈ, ಬೆಂಗಳೂರು ವಿವಿಯ ಮಾಜಿ ಕುಲಪತಿ ಸಿದ್ದಪ್ಪ, ಯೆನೆ ಪೊಯ ವಿವಿಯ ಉಪಕುಲಪತಿ ಡಾ.ಪಿ.ಚಂದ್ರಮೋಹನ್, ಯೆನೆ ಪೊಯ ಫೌಂಡೇಶನ್‌ನ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ದಂತ ವೈದ್ಯಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಎಚ್.ಶ್ರೀಪತಿ ರಾವ್, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಗುಲಾಮ್ ಜೀಲಾನಿ ಖಾದ್ರಿ, ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಆಶಾ ಶೆಟ್ಟಿ, ಹೆಲ್ತ್ ಸೈನ್ಸ್ ವಿಭಾಗದ ಮುಖ್ಯಸ್ಥ ಪದ್ಮಕುಮಾರ್, ಡಾ.ಅಖ್ತರ್ ಹುಸೈನ್, ಡಾ.ಶ್ಯಾಮ್ ಭಟ್, ಡಾ.ವೀಣಾವಾಸ್ವಾನಿ, ಕುಲ ಸಚಿವ ಡಾ.ಸಿ.ವಿ.ರಘುವೀರ್, ಪರೀಕ್ಷಾಂಗ ನಿಯಂತ್ರಕ ಕೆ.ಪಿ. ಜಯರಾಜನ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಮುಖ್ಯ ಅತಿಥಿ ಎಸ್.ವೈ. ಖುರೇಶಿಯವರನ್ನು ಯೆನೆಪೊಯ ವಿವಿಯ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಸ್ಮರಣಿಕೆ ನೀಡಿ ಗೌರವಿಸಿದರು.

1 ಪೋಸ್ಟ್ ಡಾಕ್ಟರಲ್ ಫೆಲೋಶಿಪ್, 18 ಪಿಎಚ್‌ಡಿ, 53 ಎಂ.ಡಿ/ಎಂ.ಎಸ್, 42 ಎಂಡಿಎಸ್, 7 ಎಂಪಿಟಿ, 22 ವೈದ್ಯಕೀಯ ಡಿಪ್ಲೊಮಾ, 3 ಎಂಎಚ್‌ಎ, 9ಎಂಎಸ್‌ಸಿ ನರ್ಸಿಂಗ್, 61 ಬಿಡಿಎಸ್, 12 ಪಿ.ಬಿ.ನರ್ಸಿಂಗ್, 79 ಬಿ.ಎಸ್ಸಿ ನರ್ಸಿಂಗ್ ಹಾಗೂ 11 ಬಿಪಿಟಿ ಸೇರಿದಂತೆ ಒಟ್ಟು 318 ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು.

ಬಿಡಿಎಸ್ ವಿಭಾಗದಲ್ಲಿ ಡಾ.ಸಮೀರಾ ಬೇಗಂ, ಪಿ.ಬಿ.ನರ್ಸಿಂಗ್ ವಿಭಾಗದಲ್ಲಿ ಮೆರಿನ್ ಸೆಬಾಸ್ಟಿನ್, ಬೇಸಿಕ್ ನರ್ಸಿಂಗ್ ವಿಭಾಗದಲ್ಲಿ ಸಹನಾ ಪಿ. ಹಾಗೂ ಬಿಪಿಟಿ ವಿಭಾಗದಲ್ಲಿ ಸಬ್ನಾ ಮಜೀದ್‌ರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

Write A Comment