ಕನ್ನಡ ವಾರ್ತೆಗಳು

ಕಾರ್ಕಳ ಗೊಮ್ಮಟ್ಟನಿಗೆ ಮಹಾಮಸ್ತಕಾಭಿಷೇಕ ಆರಂಭ |

Pinterest LinkedIn Tumblr

Karkala_maha_mastka_1

ಕಾರ್ಕಳ, ಜ.22: ಕಾರ್ಕಳದ ಗೊಮ್ಮಟ ಬೆಟ್ಟದ ತಪ್ಪಲಲ್ಲಿರುವ ಪಟ್ಣಶೆಟ್ಟಿ ಮೈದಾನದಲ್ಲಿ ನಿರ್ಮಿಸಿರುವ ಬೈರವರಸು ಸಭಾ ಮಂಟಪದ ವೀರಪಾಂಡ್ಯ ವೇದಿಕೆಯಲ್ಲಿ ಬುಧವಾರ ಸಂಜೆ ಕಾರ್ಕಳ ಗೊಮ್ಮಟ್ಟನಿಗೆ ಪ್ರತಿ 12 ವರ್ಷಗಳಿ ಗೊಮ್ಮೆ ನಡೆಯುವ ಮಹಾ ಮಸ್ತಕಾ ಭಿಷೇಕ ಸಮಾರಂಭಕ್ಕೆ ರಾಜ್ಯ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

Karkala_maha_mastka_2Karkala_maha_mastka_3

ಬಳಿಕ ಮಾತನಾಡಿದ ಅವರು, ಬಾಹುಬಲಿ ಅಂದು ಸಾರಿದ ಸ್ವಾಭಿಮಾನ, ಅಹಿಂಸೆ, ತ್ಯಾಗದ ಸಂದೇಶ ಇಂದಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎಂದು ಹೇಳಿದರು.ಮಹಾಮಸ್ತಕಾಭಿಷೇಕ ಎಂಬುದು ಆಕಾಶದೆತ್ತರಕ್ಕೆ ನಿಂತ ಬಾಹುಬಲಿ ಬಿಂಬಕ್ಕೆ ಬೆಳಕನ್ನು ಚೆಲ್ಲುವ ಅವಕಾಶ. ಇದು ಸಮಾಜಕ್ಕೆ ಒಳಿತನ್ನು ಸಾಧಿಸುವ ಅವಕಾಶ ಎಂದು ಸೊರಕೆ ಅಭಿಪ್ರಾಯ ಪಟ್ಟರು.

Karkala_maha_mastka_4 Karkala_maha_mastka_6 Karkala_maha_mastka_5

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಗವಾನ್ ಶ್ರೀಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಸಮಿತಿ ಕಾರ್ಕಳ ಇದರ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಭಗವಾನ್ ಬಾಹುಬಲಿಯ ವ್ಯಕ್ತಿತ್ವ, ಆದರ್ಶ ಹಾಗೂ ಸಂದೇಶ ಸದಾಕಾಲಕ್ಕೂ ಅನು ಕರಣೀಯ ಎಂದರು.

Karkala_maha_mastka_7

ಬಾಹುಬಲಿಯ ಬೃಹತ್ ಮೂರ್ತಿಯ ಇನ್ನೂ ಬೃಹತ್ ವ್ಯಕ್ತಿತ್ವ ವನ್ನು ತೋರಿಸಿಕೊಟ್ಟವರು ಪಂಪ, ರತ್ನಾಕರ ವರ್ಣಿಯಂಥ ಸಾಹಿತಿಗಳು, ಕವಿಗಳು. ಈ ವ್ಯಕ್ತಿತ್ವ, ಅವರ ಆದರ್ಶ, ನೀಡಿದ ಸಂದೇಶ ನಮ್ಮ ಬದುಕಿಗೆ ಪ್ರೇರಣೆಯಾಗಿದೆ ಎಂದವರು ನುಡಿದರು.

ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮಹಾಮಸ್ತಕಾಭಿಷೇಕ ಸಂದ ರ್ಭದಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾ ಟಿಸಿದರೆ, ಸಂಸದೆ ಶೋಭಾ ಕರಂದ್ಲಾಜೆ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

Karkala_maha_mastka_8

ಮಹಾಮಸ್ತಕಾಭಿಷೇಕ ಸಂದರ್ಭ ದಲ್ಲಿ ಹೊರತರಲಾಗಿರುವ ‘ವೀತರಾಗ’ ಸ್ಮರಣ ಸಂಚಿಕೆಯನ್ನು ಶಾಸಕ ವಿ.ಸುನೀಲ್‌ಕುಮಾರ್ ಬಿಡುಗಡೆಗೊಳಿಸಿದರು. ಕಾರ್ಕಳ ಜೈನ ಮಠದ ಶ್ರೀಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಕೊಲ್ಲಾಪುರ ಜೈನ ಮಠದ ಶ್ರೀಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದರು.

ಕಾರ್ಕಳ ಪುರಸಭೆಯ ಅಧ್ಯಕ್ಷೆ ರಹ್ಮತ್ ಎನ್.ಶೇಖ್, ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ವಿಜಯಕುಮಾರ್, ಉಪಾ ಧ್ಯಕ್ಷರಾದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಡಾ. ಶ್ರೀಧರ ಕಂಬಳಿ, ಪುಷ್ಪರಾಜ ಜೈನ್, ವೈ.ಸೂರಜ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Karkala_maha_mastka_9

Karkala_maha_mastka_10d

ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಎಂ.ಕೆ.ವಿಜಯಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ವಂದಿ ಸಿದರು. ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Write A Comment