ಕುಂದಾಪುರ: ಈ ಹಿಂದೆ ಭಾರತವು ಜಗತ್ತನ್ನು ನೋಡುತ್ತಲಿತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ಅಮೇರಿಕಾ, ಆಸ್ಟ್ರೇಲಿಯ ಮುಂತಾದ ರಾಷ್ಟ್ರಗಳಲ್ಲಿ ನರೇಂದ್ರ ಮೋದಿಯವರ ದೂರದೃಷ್ಟಿತ್ವದ ಐತಿಹಾಸಿಕ ಭಾಷಣಗಳು, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅವರ ದಿಟ್ಟ ನಿಲುವು ಮತ್ತು ಹೆಜ್ಜೆಗಳಿಂದಾಗಿ ಇವತ್ತು ಇಡೀ ಜಗತ್ತು ಭಾರತವನ್ನು ನೋಡಲಾರಂಭಿಸಿದೆ ಎಂದು ವಿಧಾನ ಪರಿಷತ್ನ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೋಟೇಶ್ವರದಲ್ಲಿ ನಡೆದ ಸಕ್ರಿಯ ಸದಸ್ಯರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಹಾಗಾಗಿ ಭಾರತವನ್ನು ಮತ್ತು ಭಾರತೀಯರನ್ನು ಬೇರೆ ರಾಷ್ಟ್ರಗಳು ತಲೆ ಎತ್ತಿ ನೋಡುವಂತೆ ಮಾಡಿದ ನರೇಂದ್ರ ಮೋದಿಯವರ ನಾಯಕತ್ವದ ಬಿಜೆಪಿ ಪಕ್ಷದಲ್ಲಿ 10 ಕೋಟಿಗೂ ಅಧಿಕ ಸದಸ್ಯರನ್ನು ಪಕ್ಷದಲ್ಲಿ ನೊಂದಾವಣೆ ಮಾಡಿ ಅತ್ಯಂತ ಅಧಿಕ ಸದಸ್ಯರನ್ನು ಹೊಂದಿದ ಜಗತ್ತಿನ ಎಕೈಕ ದೊಡ್ಡ ರಾಜಕೀಯ ಪಕ್ಷ ಬಿಜೆಪಿ ಎಂದು ದಾಖಲಾಗಬೇಕು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ ನರೇಂದ್ರ ಮೋದಿಯವರು ಈ ದೇಶದ ಆಶಾಕಿರಣ, ಅವರ ಕನಸುಗಳನ್ನು ನನಸಾಗಿಸಲು ಯೋಜನೆಗಳನ್ನು ಸಾಕಾರಗೊಳಿಸಲು ಬಿಜೆಪಿಯು ಸಂಘಟನಾತ್ಮಕವಾಗಿ ಇನ್ನಷ್ಟು ಸದೃಡಗೊಳ್ಳಬೇಕು ಆದ್ದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ೬೦ ಸಾವಿರ ಮಂದಿ ಪಕ್ಷದ ಸದಸ್ಯರಾಗಿ ನೊಂದಣಿಯಾಗಬೇಕು. ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ ಸ್ವಾಗತಿಸಿದರು. ಸದಸ್ಯತಾ ಅಭಿಯಾನದ ಪ್ರಮುಖ್ iಟ್ಟಾರು ರತ್ನಾಕರ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಬೆಳ್ವೆ ವಸಂತ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ರವೀಂದ್ರ ದೊಡ್ಮನೆ ವಂದನಾರ್ಪನೆ ಮಾಡಿ, ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.