ಕನ್ನಡ ವಾರ್ತೆಗಳು

ಪಲ್ಸ್ ಪೋಲಿಯೊ ಲಸಿಕೆ : ದ.ಕ  ಶೇ. 88.64 / ಉಡುಪಿ ಶೇ.95 ಸಾಧನೆ

Pinterest LinkedIn Tumblr

Pals_polio_Pics_1

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ನಡೆದ ಮೊದಲ ಹಂತದ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಶೇ. 88.64 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡಲಾಗಿದೆ.

ಜಿಲ್ಲೆಯ 5 ವರ್ಷದೊಳಗಿನ ಒಟ್ಟು 168479 ಮಕ್ಕಳಲ್ಲಿ 149332 ಮಂದಿಗೆ ಪೋಲಿಯೋ ಹನಿ ನೀಡಲಾಗಿದೆ. ಮಂಗಳೂರು ತಾಲೂಕಿನಲ್ಲಿ ಶೇ.81.6 ( 76563 ಮಂದಿಯಲ್ಲಿ 62531), ಪುತ್ತೂರು ತಾಲೂಕಿನಲ್ಲಿ ಶೇ.97.39(23640ರಲ್ಲಿ 23023), ಬೆಳ್ತಂಗಡಿ ತಾಲೂಕಿನಲ್ಲಿ ಶೇ.94.75(23148 ಮಕ್ಕಳಲ್ಲಿ 21933) , ಬಂಟ್ವಾಳ ತಾಲೂಕಿನಲ್ಲಿ ಶೇ.91.94 ( 33341ರಲ್ಲಿ 30653), ಸುಳ್ಯ ತಾಲೂಕಿನಲ್ಲಿ ಶೇ.94.95 (11787 ಮಂದಿಯಲ್ಲಿ 11192) ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

Pals_polio_Pics_2 Pals_polio_Pics_3 Pals_polio_Pics_4

ಪಲ್ಸ್ ಪೋಲಿಯೊ ಲಸಿಕೆ: ಉಡುಪಿ ಶೇ.95, ದ.ಕ. 89 ಶೇ. ಸಾಧನೆ

ಉಡುಪಿ : ಉಡುಪಿ ಜಿಲ್ಲೆಯ ಐದು ವರ್ಷದೊಳಗಿನ 88,248 ಮಕ್ಕಳಲ್ಲಿ 84,186 ಮಕ್ಕಳಿಗೆ ರವಿವಾರ ಪೋಲಿಯೊ ಲಸಿಕೆ ಹಾಕುವ ಮೂಲಕ ಶೇ.95ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಉಡುಪಿ ತಾಲೂಕಿನ 41,319 ಮಕ್ಕಳಲ್ಲಿ 38,455 ಮಕ್ಕಳು(ಶೇ.93), ಕುಂದಾಪುರ ತಾಲೂಕಿನ 31,348 ಮಕ್ಕಳಲ್ಲಿ 30,690 ಮಕ್ಕಳು(ಶೇ.98), ಕಾರ್ಕಳ ತಾಲೂಕಿನ 15,581 ಮಕ್ಕಳಲ್ಲಿ 15,041 ಮಕ್ಕಳು(ಶೇ.97) ಪೋಲಿಯೊ ಲಸಿಕೆ ಹಾಕಿಸಿಕೊಂಡರು ಎಂದವರು ತಿಳಿಸಿದರು.

ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.

Pals_polio_Pics_5 Pals_polio_Pics_6 Pals_polio_Pics_7

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪಿ.ಯುವರಾಜ್, ಜಿಪಂ ಸಿಇಒ ಎಂ.ಕನಗವಲ್ಲಿ, ಪೌರಾಯುಕ್ತ ಶ್ರೀಕಾಂತ್ ರಾವ್, ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುರೇಂದ್ರ ಚಿಂಬಾಲ್ಕರ್, ಪೋಲಿಯೊ ನೋಡಲ್ ಅಧಿಕಾರಿ ಡಾ.ಆಶಾ ಅಬೀಕರ್, ರೋಟರಿಯ ದಿನೇಶ್ ಹೆಗಡೆ ಆತ್ರಾಡಿ, ಇನ್ನರ್‌ವೀಲ್ ಅಧ್ಯಕ್ಷೆ ಜಯಲಕ್ಷ್ಮಿ ಉಪಾಧ್ಯಾಯ, ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ತಾಲೂಕು ಆರೋಗ್ಯಾಧಿಕಾರಿ ನಾಗರತ್ನ ಉಪಸ್ಥಿತರಿದ್ದರು.

ಶಿರ್ವ : ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಹಾಗೂ ರೋಟರಿ ಕ್ಲಬ್‌ನ ವತಿಯಿಂದ ಕೇಂದ್ರದಲ್ಲಿ ರವಿವಾರ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಶಿರ್ವ ಗ್ರಾಪಂ ಅಧ್ಯಕ್ಷ ಹಸನಬ್ಬ ಶೇಖ್ ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಐಡಾ ಗಿಬ್ಬ ಡಿಸೋಜ, ಗ್ರಾಪಂ ಉಪಾಧ್ಯಕ್ಷೆ ದೀಪಿಕಾ ಶಾಲೆಟ್, ಶಿರ್ವ ರೋಟರಿ ಅಧ್ಯಕ್ಷ ಡಾ.ಎನ್.ಎಸ್.ಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ರೋಟರಿ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಗ್ರಾಪಂ ಸದಸ್ಯ ಕೋಡು ಸದಾನಂದ ಶೆಟ್ಟಿ, ರಘುಪತಿ ಐತಾಳ, ಲಿಯೊ ನೊರೊನ್ಹ, ಪೌಲ್ ಅರಾನ್ಹ, ಸಂತ ಮೇರಿ ಕಾಲೇಜು ಉಪನ್ಯಾಸಕ ವಿಠ್ಠಲ ನಾಯಕ್, ಮೆಲ್ವಿನ್ ಡಿಸೋಜ, ವಿಷ್ಣುಮೂರ್ತಿ ಸರಳಾಯ ಮೊದಲಾದವರು ಉಪಸ್ಥಿತರಿದ್ದರು.

Pals_polio_Pics_8 Pals_polio_Pics_9

ಪಡುಬೆಳ್ಳೆ: ಪಾಂಬೂರು ಆರೋಗ್ಯ ಉಪಕೇಂದ್ರದಲ್ಲಿ ರವಿವಾರ ಜರಗಿದ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಉದ್ಯಮಿ ಗಿಲ್ಬರ್ಟ್ ನೊರೊನ್ಹ ಪಾಂಬೂರು ಮಗುವಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಆರ್., ಆಶಾ ಕಾರ್ಯಕರ್ತೆ ಶಕುಂತಳಾ ಆಚಾರ್ಯ, ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಆರ್.ಪೂಜಾರಿ, ವಿನೋದಾ ಆಚಾರ್ಯ ಉಪಸ್ಥಿತರಿದ್ದರು.

ಮಲ್ಪೆ: ರೋಟರಿ ಮಲ್ಪೆ-ಕೊಡವೂರು, ಮಲ್ಪೆ ಲಯನ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಮಲ್ಪೆಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರವಿವಾರ ನಡೆದ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ರೋಟರಿ ಅಧ್ಯಕ್ಷ ಸುಧಾಕರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಲಯ ಸಂಯೋಜನಾಧಿಕಾರಿ ಪೂರ್ಣಿಮಾ ಜನಾರ್ದನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಶ್ವನಾಥ್ ಹೆಬ್ಬಾರ್, ಕಾರ್ಯದರ್ಶಿ ಯಶೋದಾ ಕೇಶವ್, ವಿಜಯ ಬಂಗೇರ, ಮಲ್ಪೆ ಲಯನ್ಸ್‌ನ ಜಗದೀಶ್ ಬಂಗೇರ, ಡಾ.ವಿದ್ಯಾಧರ್, ಕರುಣಾಕರ್ ಬಂಗೇರ, ಮಹೇಶ್‌ಕುಮಾರ್, ಸುದರ್ಶನ್, ಡಾ.ಗೋದಾವರಿ ಭಟ್, ಬಿ.ಕೃಷ್ಣ, ರಮೇಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.

Write A Comment