ಕನ್ನಡ ವಾರ್ತೆಗಳು

ವಾರಾಹಿ ನೀರಿಗಾಗಿ 16 ದಿನಗಳಿಂದ ನಡೆಯುತ್ತಿದ್ದ ಸತ್ಯಾಗ್ರಹ ಹಿಂದಕ್ಕೆ; ನಾಲ್ವರು ಸಚಿವರಿಂದ ಅಭಯ

Pinterest LinkedIn Tumblr

ಏಪ್ರಿಲ್ ಮೊದಲ ವಾರ ವಾರಾಹಿ ನೀರು- ನೀರಾವರಿ ಸಚಿವ ಎಂ ಬಿ ಪಾಟೀಲ್

ಕುಂದಾಪುರ: ವಾರಾಹಿ ಯೋಜನಾ ಪ್ರದೇಶದ 3000 ಹೆಕ್ಟೆರ್ ಕೃಷಿ ಭೂಮಿಗೆ ಏಪ್ರಿಲ್ ಮೊದಲ ವಾರದೊಳಗೆ ನೀರು ಹರಿಸುವುದಾಗಿ ರಾಜ್ಯ ನೀರಾವರಿ ಸಚಿವ ಎಂ ಬಿ ಪಾಟೀಲ ಅವರು ಹೇಳಿದರು.

ಶುಕ್ರವಾರ ವಾರಾಹಿ ನೀರಾವರಿ ಶೀಘ್ರ ಅನುಷ್ಠಾನ ಕುರಿತು ಹೊಸಂಗಡಿ ಕೆಪಿಸಿಯ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯನ್ನುದೇಶಿಸಿ ಅವರು ಮಾತನಾಡುತ್ತಿದ್ದರು.

ಮೂರು ಸಾವಿರ ಹೆಕ್ಟೆರ್ ವ್ಯಾಪ್ತಿಯ ಕೃಷಿ ಭೂಮಿಗೆ ನೀರುಣಿಸಲು ಏಪ್ರಿಲ್ ಮೊದಲ ವಾರದೊಳಗೆ ಸೌಲಭ್ಯ ಕಲ್ಪಿಸಲಾಗುವುದು ಎಂದ ಸಚಿವರು, 2015-16 ಏಪ್ರಿಲ್ ವೇಳೆಗೆ ಎಡದಂಡೆಯ 0-30 ಕಿ.ಮೀ ದೂರ ಪ್ರದೇಶವನ್ನೊಳಗೊಂಡ 5,600 ಹೆಕ್ಟರ್ ಪ್ರದೇಶಕ್ಕೆ ನೀರುಣಿಸಲು ಇಲಾಖೆ ಬದ್ಧ ಎಂದರು. ತಾವು ಅಧಿಕಾರ ವಹಿಸಿದ ಒಂದೂವರೆ ವರ್ಷದೊಳಗಾಗಿ ಯೋಜನೆಗೆ ಸಂಬಂಧಿಸಿದ ಶೇಕಡ 50 ಕಾಮಗಾರಿ ಪ್ರಗತಿ ದಾಖಲಾಗಿದ್ದು, 119 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಕಾಯಕಲ್ಪ ನೀಡಲು ಇಲಾಖೆ ಬದ್ದವಾಗಿದೆ ಎಂದರು.

Ministers_Visit_Varahi Ministers_Visit_Varahi (1) Ministers_Visit_Varahi (2) Ministers_Visit_Varahi (3) Ministers_Visit_Varahi (4) Ministers_Visit_Varahi (5) Ministers_Visit_Varahi (6) Ministers_Visit_Varahi (7) Ministers_Visit_Varahi (8) Ministers_Visit_Varahi (9) Ministers_Visit_Varahi (10) Ministers_Visit_Varahi (11) Ministers_Visit_Varahi (12) Ministers_Visit_Varahi (13) Ministers_Visit_Varahi (14) Ministers_Visit_Varahi (15) Ministers_Visit_Varahi (16) Ministers_Visit_Varahi (17) Ministers_Visit_Varahi (18) Ministers_Visit_Varahi (19) Ministers_Visit_Varahi (20) Ministers_Visit_Varahi (21) Ministers_Visit_Varahi (22) Ministers_Visit_Varahi (23) Ministers_Visit_Varahi (24)

ಸುಮಾರು 25 ವರ್ಷಗಳ ಕಾಲ ಯೋಜನೆಯ ರೂಪರೇಷೆಗಳನ್ನು ನಿರ್ಧರಿಸಲು ವ್ಯಯವಾಗಿದೆ. 2006 ರ ನಂತರವಷ್ಟೆ ಯೋಜನೆಗೆ ಸ್ವಷ್ಟ ರೂಪ ದೊರೆಕಿದೆ. ಯೋಜನೆ ವಿಳಂಭವಾಗಲು ಕಾರಣಗಳೇನು, ಎಂದು ಯಾರನ್ನು ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಬದಲಿಗೆ ಕಾಳುವೆಗಳಲ್ಲಿ ನೀರು ಹರಿಸಲು ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಮಾಡಲಾಗುವುದು. ಈ ಸಮಿತಿ ಪ್ರತಿ ತಿಂಗಳ ಪ್ರಗತಿ ಪರಿಶೀಲನೆ ನಡೆಸಲಿದೆ. ಇಲ್ಲಿ ನಡೆದಿರುವ ತಾಂತ್ರಿಕ ತಪ್ಪುಗಳನ್ನು ಅಧ್ಯಯನ ನಡೆಸಲು ತಾಂತ್ರಿಕ ತಜ್ಞರ ಸಮಿತಿಯನ್ನು ನೇಮಕ ಮಾಡಲಾಗುವುದು. ವರಾಹಿ ಯೋಜನೆಗೆ ಸಂಬಂಧಿಸಿದ ಎಲ್ಲಾ, ಅವ್ಯವಹಾರಗಳ ಕುರಿತ ತನಿಖೆ ಮಾಡಲು ಸರ್ಕಾರ ಸಿದ್ದವಿದ್ದು, ಶೀಘ್ರದಲ್ಲಿಯೇ ತನಿಖೆಯ ವ್ಯಾಪ್ತಿ ಹಾಗೂ ರಚನೆಯನ್ನು ನಿರ್ಧರಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.

ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ, ಕಂದಾಯ, ಅರಣ್ಯ, ನೀರಾವರಿ ಇಲಾಖೆಗಳು ಸಮನ್ವಯ ಸಾಧಿಸಿ ಕಾಮಗಾರಿ ಪ್ರಗತಿ ದಾಖಲಿಸಲಾಗುವುದು. ಕಾನೂನು ಹಾಗೂ ನಿಯಮದ ವ್ಯಾಪ್ತಿಯ ಒಳಗೆ ಭೂಸ್ವಾಧೀನ ಮಾಡಿPಕೊಂಡಿರು ಭೂ ಮಾಲಿಕರಿಗೆ ಪರಿಹಾರ ವಿತರಣೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆಯಿಂದ ಸರ್ವೇಯರ್‍ಸ್ ಹಾಗೂ ಭೂಸ್ವಾಧೀನ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಕಂದಾಯ ಮತ್ತು ನೀರಾವರಿ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿಯನ್ನು ಸುತ್ತಮುತ್ತಲ ರೈತರಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯ ಸಚಿವ ರಮಾನಾಥ ರೈ ಅವರು, ಅರಣ್ಯ ಸಂಬಂಧಿ ಪ್ರಶ್ನೆಗಳ ಪರಿಹಾರಕ್ಕೆ ಈಗಾಗಲೇ ಕ್ರಮಕೈಗೊಳ್ಳಲಾಗಿದ್ದು, ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಮಸ್ಯೆ ಪರಿಹರಿಸಲು, ಕಾಮಗಾರಿಗೆ ವೇಗ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಗೆ ಮನವರಿಕೆ ಮಾಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು, ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಯೋಜನೆ ವ್ಯಾಪ್ತಿ ಏನು ಎನ್ನುವ ಕುರಿತು ಸ್ವಷ್ಟತೆ ಇಲ್ಲ. ಅವರಿಂದ ಜನಪ್ರತಿನಿಧಿಗಳನ್ನು ಹಾಗೂ ಸ್ಥಳೀಯರನ್ನು ಹಾದಿ ತಪ್ಪಿಸುವ ಕೆಲಸಗಳು ಆಗುತ್ತಿದೆ. ೩೫ ವರ್ಷಗಳ ವಿಳಂಭಕ್ಕೆ ಯಾರೋ ಒಂದಿಬ್ಬರನ್ನು ಬೊಟ್ಟು ಮಾಡಿ ತೋರಿಸಲಾಗುವುದಿಲ್ಲ. ಇಲ್ಲಿ ನಡೆಯುತ್ತಿರುವ ದ್ವಿಮುಖ ಧೋರಣೆಯ ಬಗ್ಗೆ ಸ್ಥಳೀಯರಲ್ಲಿ ಗೊಂದಲವಿದೆ. ಗುತ್ತಿಗೆ ವಹಿಸಿಕೊಂಡವರಿಗೆ, ವರಾಹಿ ನೀರಿಗೆ ಸಂಬಂಧಿಸಿರುವ, ಉಪ ಯೋಜನೆಗಳನ್ನು ಗುತ್ತಿಗೆ ನೀಡಿರುವುದು, ಇಲಾಖಾ ಬದ್ದತೆಯನ್ನು ಪ್ರಶ್ನಿಸುವಂತಾಗಿದೆ. ರೈತ ಸಂಘ ಜನರ ಭಾವನೆಗಳಿಗೆ ಸ್ಪಂದಿಸಿ ಹೋರಾಟಕ್ಕೆ ಮುಂದಾಗಿದೆಯೇ ಹೊರತು, ಯಾವ ವ್ಯಕ್ತಿಯ, ಯಾವ ಜಾತಿಯ ವಿರುದ್ದ ಹೋರಾಟವಲ್ಲ ಎಂದು ಸ್ವಷ್ಟ ಪಡಿಸಿದ ಅವರು ನ್ಯಾಯ ಮರಿಚಿಕೆಯಾಗಬಾರದು ಎನ್ನುವ ನೆಲೆಯಲ್ಲಿ ಶಾಂತಿಯುತ ಹೋರಾಟಕ್ಕೆ ರೈತರು ಮುಂದಾಗಿದ್ದಾರೆ ಎಂದು ಹೇಳಿದರು.

ರಾಜ್ಯ ಸಭಾ ಸದಸ್ಯ ಆಸ್ಕರ್ ಫನಾಂಡಿಸ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಗೋಪಾಲ್ ಪೂಜಾರಿ, ಪ್ರಮೋದ್ ಮಧ್ವರಾಜ್, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಮೆಂಡನ್ ಸಭೆಯಲ್ಲಿ ಪಾಲ್ಗೊಂಡರು.

ಕುಂದಾಪುರ ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ, ತಾ.ಪಂ ಸದಸ್ಯ ಕೆದೂರು ಸದಾನಂದ ಶೆಟ್ಟಿ, ರೈತ ಸಂಘಟನೆಯ ಪ್ರಮುಖರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಉಮೇಶ್ ಶೆಟ್ಟಿ ಶಾನ್ಕಟ್ಟು, ವಿಕಾಸ್ ಹೆಗ್ಡೆ, ಭಾರತೀಯ ಕಿಸಾನ್ ಸಂಘದ ಸತ್ಯಾನಾರಾಯಣ ಉಡುಪ ಮುಂತಾದವರು ಸಭೆಯಲ್ಲಿ ಮಾತನಾಡಿದರು.

ಡಾ ಆರ್ ವಿಶಾಲ್, ಸಹಾಯಕ ಆಯುಕ್ತೆ ಚಾರುಲತಾ ಸೋಮಲ್, ಕರ್ನಾಟಕ ನೀರಾವರಿ ನಿಗಮದ ಆಡಳಿತ ನಿರ್ದೇಶಕ ರುದ್ರಯ್ಯ, ತಹಸೀಲ್ದಾರ್ ಗಾಯತ್ರಿ ನಾಯಕ್, ಸಿಸಿ‌ಎಫ್ ಬಿಸ್ವಜಿತ್ ಮಿಶ್ರಾ, ಡಿಸಿ‌ಎಫ್ ರವಿಶಂಕರ್, ವಾರಾಹಿ ಪ್ರಭಾರ ಮುಖ್ಯ ಇಂಜಿನಿಯರ್‌ಗಳು ನಟರಾಜ್ ಸಭೆಯಲ್ಲಿದ್ದರು.

ಸತ್ಯಾಗ್ರಾಹ ಹಿಂತೆಗೆತ:
ಸಭೆಯ ಬಳಿಕ ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರು, ಸಿದ್ದಾಪುರದಲ್ಲಿ ನಡೆಯುತ್ತಿದ್ದ ಸತ್ಯಾಗ್ರಾಹ ಸ್ಥಳಕ್ಕೆ ಬಂದು ರೈತ ಸಂಘಟನೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಭೆಯ ತೀರ್ಮಾನವನ್ನು ಪ್ರಕಟಿಸಿದ ಬಳಿಕ, ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರ ನೇತ್ರತ್ವದಲ್ಲಿ ಸಭೆ ನಡೆಸಿದ ರೈತ ಸಂಘಟನೆ, ಧರಣಿ ಸತ್ಯಾಗ್ರಾಹವನ್ನು ಹಿಂತೆಗೆದುಕೊಳ್ಳುವ ತೀರ್ಮಾನವನ್ನು ಕೈಗೊಂಡರು.

ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಶಾಸಕ ಕೆ.ಗೋಪಾಲ ಪೂಜಾರಿ, ಮಂಜುನಾಥ ಭಂಡಾರಿ, ಭಾರತೀಯ ಕಿಸಾನ್ ಸಂಘದ ಬಿ.ವಿ ಪೂಜಾರಿ ಮುಂತಾದವರಿದ್ದರು.

Write A Comment