ಕನ್ನಡ ವಾರ್ತೆಗಳು

ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಅತ್ಲೆಟಿಕ್ ಚಾಂಪಿಯನ್‌ಶಿಪ್‌ -ಕ್ರೀಡಾಪಟುಗಳು ಸಿಂಥೆಟಿಕ್ ಟ್ರ್ಯಾಕ್‌ನ ಸದುಪಯೋಗವನ್ನು ಪಡೆದುಕೊಳ್ಳಬೇಕು: ಮೋಹನ್ ಆಳ್ವ

Pinterest LinkedIn Tumblr

Alvas_Sports_Meet_1

ಮೂಡಬಿದಿರೆ : ಇಷ್ಟು ದೂಡ್ಡ ಮಟ್ಟಿನ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಸಣ್ಣ ಕೆಲಸ ಅಲ್ಲ ಇದೊಂದು ಗುರುತಿಸಲಾರ್ಹವಾದ ಕ್ರೀಡಾಕೂಟ. ಸಚಿವ ಅಭಯ ಚಂದ್ರ ಜೈನ್ ರವರು ನಿಜಕ್ಕೂ ಅತ್ಯುತ್ತಮವಾದ ಕ್ರೀಡಾ ಸಚಿವರು ಅವರಿಗೆ ಉತ್ತಮವಾದ ಕ್ರೀಡಾ ಅಭಿರುಚಿಯಿದೆ. ಮೂಡಬಿದಿರೆಯಲ್ಲಿ ಈಗ ಸಿಂಥೆಟಿಕ್ ಟ್ರ್ಯಾಕ್ ಇದೆ ಪ್ರತಿಯೊಬ್ಬ ಕ್ರೀಡಾಪಟು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಡಾ. ಎಂ.ಮೋಹನ್ ಆಳ್ವ ಹೇಳಿದರು.

Alvas_Sports_Meet_2 Alvas_Sports_Meet_3 Alvas_Sports_Meet_4 Alvas_Sports_Meet_5 Alvas_Sports_Meet_6 Alvas_Sports_Meet_7 Alvas_Sports_Meet_8

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಕರ್ನಾಟಕ ಸರ್ಕಾರ ಹಾಗೂ ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಆಶ್ರಯದಲ್ಲಿ ನಡೆದ ೭೫ನೇ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಅತ್ಲೆಟಿಕ್ ಚಾಂಪಿಯನ್‌ಶಿಪ್‌ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರ ಮಾಡಿದ ಕೆಲಸವನ್ನು, ಕ್ರೀಡೆಗೆ ನೀಡಿದ ಪ್ರೋತ್ಸಾಹವನ್ನು ಉಳಿಸಿ, ಬೆಳೆಸಿ, ಗುರುತಿಸುವ ಕೆಲಸವನ್ನು ಕ್ರೀಡಾಪಟುಗಳು ಮಾಡಬೇಕು ಎಂದು ಮೋಹನ್ ಆಳ್ವರವರು ಹೇಳಿದರು.

Alvas_Sports_Meet_9 Alvas_Sports_Meet_10 Alvas_Sports_Meet_11 Alvas_Sports_Meet_12 Alvas_Sports_Meet_13 Alvas_Sports_Meet_14 Alvas_Sports_Meet_15

ರಾಜೀವ್ ಗಾಂಧಿ ಯೂನಿವರ್ಸಿಟಿಯ ವೈಸ್ ಚಾನ್ಸಿಲರ್ ಪ್ರೊ.ಕೆ.ಎಸ್ ರವೀಂದ್ರನಾಥ್ ಧ್ವಜಾರೋಹಣವನ್ನು ಮಾಡಿದರು. ಅತ್ಲೇಟಿ ಸೃಜನ ಕ್ರೀಡಾಪಟುಗಳಿಗೆ ಪ್ರಮಾಣವಚನವನ್ನು ನಡೆಸಿಕೊಟ್ಟರು. ಕ್ರೀಡಾಪಟುಗಳಾದ ಜೋಯ್ಲಿನ್ ಲೋಬೋ, ಬಸವರಾಜ ಹೊರಟ್ಟಿ, ಜಮಾಲುದ್ದೀನ್, ಕೆ.ಎಸ್ ಅಶೋಕ್, ಎಂ.ಆರ್ ಪೂವಮ್ಮ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಸಂದರ್ಭದಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಹಸ ಮಾಡಿದ ಯೂನಿವರ್ಸಿಟಿಗಳಿಗೆ ಹಾಗೂ ಕೋಚ್‌ಗಳಿಗೆ ಸನ್ಮಾನ ನಡೆಸಲಾಯಿತು.

Alvas_Sports_Meet_16 Alvas_Sports_Meet_17 Alvas_Sports_Meet_18 Alvas_Sports_Meet_19 Alvas_Sports_Meet_20 Alvas_Sports_Meet_21 Alvas_Sports_Meet_22 Alvas_Sports_Meet_23 Alvas_Sports_Meet_25

ಕಾರ್ಯಕ್ರಮದಲ್ಲಿ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡೆಯ ಮುಖ್ಯ ಕಾರ್‍ಯದರ್ಶಿ ಡಾ.ಎನ್ ನಾಗಾಂಬಿಕ ದೇವಿ,ಸಚಿವ ಆಭಯ ಚಂದ್ರ ಜೈನ್, ಮಾಜಿ ಶಾಸಕರು ಅಮರನಾಥ ಶೆಟ್ಟಿ,ಮಂಗಳೂರು ಯೂನಿವರ್ಸಿಟಿಯ ವೈಸ್ ಚಾನ್ಸಿಲರ್ ಪ್ರೊ.ಬೈರಪ್ಪ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Alvas_Sports_Meet_26 Alvas_Sports_Meet_27 Alvas_Sports_Meet_28 Alvas_Sports_Meet_29 Alvas_Sports_Meet_30 Alvas_Sports_Meet_31 Alvas_Sports_Meet_32 Alvas_Sports_Meet_33 Alvas_Sports_Meet_34 Alvas_Sports_Meet_35

ರಾಜೀವ್ ಗಾಂಧಿ ಯೂನಿವರ್ಸಿಟಿಯ ಕುಲಪತಿಗಳಾದ ಪ್ರೇಮ್ ಕುಮಾರ್ ಸ್ವಾಗತಿಸಿದರು, ಉಪನ್ಯಾಸಕಿ ದೀಪಾ ಕೊಠಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment