ಕನ್ನಡ ವಾರ್ತೆಗಳು

ಆಹಾರದ ಕೊರತೆಯಿಂದ 2 ಹುಲಿ ಮರಿ ಸಾವು

Pinterest LinkedIn Tumblr

small_tiger_photo

ಹುಣಸೂರು,ಜ.16: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಮೇಟಿಕುಪ್ಪೆ ವಲಯದ ದಟ್ಟವಾಳು ಅರಣ್ಯ ಪ್ರದೇಶದೊಳಗೆ ತಾಯಿಯಿಂದ ಬೇರ್ಪಟ್ಟ 6 ರಿಂದ 8 ತಿಂಗಳ ಒಂದು ಗಂಡು, ಮತ್ತೊಂದು ಹೆಣ್ಣು ಹುಲಿ ಮರಿಗಳು ಆಹಾರದ ಕೊರೆತೆಯಿಂದ ಮೃತಪಟ್ಟಿವೆ. ಮತ್ತೊಂದು ಗಂಡು ಹುಲಿ ಮರಿಯ ಸ್ಥಿತಿಯೂ ಚಿಂತಾಜನಕವಾಗಿದ್ದು, ಮೈಸೂರಿನ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬದುಕುಳಿದಿರುವ ಗಂಡು ಹುಲಿ ಮರಿಯನ್ನು ಪಶು ವೈದ್ಯರು ಮೈಸೂರು ಮೃಗಾಲಯದಲ್ಲಿ ಚಿಕಿತ್ಸೆ ನೀಡಿ, ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ತಾಯಿ ಬೇರ್ಪಟ್ಟಿರುವ ಬಗ್ಗೆ ಹೆಜ್ಜೆಗಳ ಗುರುತಿನ ಬಗ್ಗೆಯೂ ತನಿಖೆ ನಡೆದಿದೆ. ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಈ ಮೂರು ಹುಲಿಮರಿಗಳು ಬಿದ್ದಿರುವುದು ಕಾಣಿಸಿತು. ಹತ್ತಿರ ಹೋಗಿ ಪರಿಶೀಲಿಸಿದಾಗ ಎರಡು ಹುಲಿ ಮರಿಗಳು ಮೃತಪಟ್ಟಿದ್ದವು. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಆರ್. ಗೋಕುಲ್ ಮತ್ತು ಎಸಿಎಫ್ ನಿಂಗರಾಜು, ಹುಲಿ ಯೋಜನೆ ಪ್ರಾಧಿಕಾರ ಸಮಿತಿ ಸದಸ್ಯ ಬಂಡೀಪುರ ರಘುರಾಮು, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಯಿಯಿಂದ ಬೇರ್ಪಟ್ಟಿದ್ದರಿಂದ ಹುಲಿ ಮರಿಗಳಿಗೆ ಹಾಲು ಮತ್ತು ಆಹಾರದ ಕೊರತೆಯಿಂದ ಮೃತಪಟ್ಟಿವೆ ಮತ್ತೊಂದನ್ನು ಬದುಕಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಆರ್. ಗೋಕುಲ್ ತಿಳಿಸಿದ್ದಾರೆ.

Write A Comment