ಕನ್ನಡ ವಾರ್ತೆಗಳು

ವೆನ್‌ಲಾಕ್‌ ಆಸ್ಪತ್ರೆಯ ಸಿಟಿ ಸ್ಕ್ಯಾನ್ ರೂಮ್ ನಲ್ಲಿ ಬೆಂಕಿ ಅವಘಡ

Pinterest LinkedIn Tumblr

wenlock_fire_1

ಮಂಗಳೂರು,ಜ.16 : ನಗರದ ವೆನ್‌ ಲಾಕ್‌ ಆಸ್ಪತ್ರೆಯ ಸಿಟಿ ಸ್ಕ್ಯಾನ್‌ ರೂಮ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಆತಂಕ ಹುಟ್ಟಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

wenlock_fire_1wenlock_fire_2 wenlock_fire_3 wenlock_fire_4 wenlock_fire_5

ಸಿಟಿ ಸ್ಕ್ಯಾನ್‌ ರೂಮ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು , ಯಾರಿಗೂ ಗಾಯವಾಗಲಿ ಅಥವಾ  ಯಾವುದೇ ಯಂತ್ರಗಳಿಗೆ ಹೆಚ್ಚಿನ ಹಾನಿಯುಂಟಾಗಲಿಲ್ಲ ಎಂದು ವರದಿಯಾಗಿದೆ.

wenlock_fire_6 wenlock_fire_7 wenlock_fire_8 wenlock_fire_9 wenlock_fire_10 wenlock_fire_11 wenlock_fire_12 utkadr_visit_wenlock_20

ಬೆಂಕಿ ನಂದಿಸಲು ಕೂಡಲೇ ಅಗ್ನಿ ಶಾಮಕ ದಳವನ್ನು ಕರೆಸಿಕೊಂಡರು, ಅವರು ಬರುವ ಮುಂಚಿತಾವಾಗಿ ಆಸ್ಪತ್ರೆಯ ಸಿಬ್ಬಂದಿಗಳೆ ಬೆಂಕಿಯನ್ನು ನಂದಿಸುವಲ್ಲಿ ಮುಂಜಾಗತ್ರಾ ಕ್ರಮ ಕೈಗೊಂಡಿದ್ದರು. ಈ ಅವಘಡವು ಸಚಿವರು ಆಸ್ಪತ್ರೆಗೆ ಭೇಟಿ ನೀಡುವ 15 ನಿಮಿಷ ಮುನ್ನ ನಡೆದಿದೆ. ಆರೋಗ್ಯ ಸಚಿವ ಯು.ಟಿ.ಖಾದರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಅವರು ಬೇಟಿ ನೀಡಿ, ಆಸ್ಪತ್ರೆಯ ಸಿಬ್ಬಂದಿಗಳು ,ವೈದ್ಯರು ಮತ್ತು ರೋಗಿಗಳೊಂದಿಗೆ ಮಾತುಕತೆ  ನಡೆಸಿದರು.

Write A Comment