ಕನ್ನಡ ವಾರ್ತೆಗಳು

ಮಹಿಳಾ ಕ್ರೀಡಾಪಟು ಜತೆ ಕೋಚ್ ; ಸಿಸಿಟಿವಿಯಲ್ಲಿ ಸೆರೆ

Pinterest LinkedIn Tumblr

cctv_footage

ನವದೆಹಲಿ,ಜ.14 : ಆಂಧ್ರ ಪ್ರದೇಶದಲ್ಲಿ ಟೇಬಲ್ ಟೆನ್ನಿಸ್ ಕೋಚ್ ಮಹಿಳಾ ಕ್ರೀಡಾ ಪಟುವಿನ ಜತೆ ಹೋಟೆಲ್ ರೂಂನ ಹೊರಗೆ ಮೈ ಮುಟ್ಟಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ಕೋಚ್‌ನ ರೂಂನಿಂದ ಇನ್ನು ಕೆಲವು ಹುಡುಗಿಯರು ಹೊರಗೆ ಬರುತ್ತಿರುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ವಿವಾದ ಸೃಷ್ಟಿಸಿವೆ.
ಆಂಧ್ರ ಪ್ರದೇಶದಲ್ಲಿ ನಡೆದ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಗಮಿಸಿದ ಚತ್ತೀಸ್‌ಗಢದ ಜ್ಯೂನಿಯರ್ ಟೀಂನ ಸದಸ್ಯೆ ಮತ್ತು ಕೋಚ್ ಈ ರೀತಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸುದ್ದಿಯಾಗಿದೆ.

ಡಿಸೆಂಬರ್ 26ರಂದು ರೆಕಾರ್ಡ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳಾ ಕ್ರೀಡಾಪಟುವನ್ನು 19ರ ಹರೆಯದ ಕೋಚ್ ಆಕೆಯ ರೂಮಿನಿಂದ ಎಳೆಯುತ್ತಿರುವುದು ಕಾಣಿಸುತ್ತಿದ್ದೆ. ಆ ಮಹಿಳಾ ಕ್ರೀಡಾಪಟು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೂ ಕಾಣಿಸಿಕೊಂಡಿದ್ದು, ಹೋಟೆಲ್ ರೂಂ ಹೊರಗೆ ಏನು ಸಂಭವಿಸಿತು ಎಂಬ ಸತ್ಯಾಸತ್ಯತೆ ಇನ್ನೂ ತಿಳಿದು ಬಂದಿಲ್ಲ.

ಪ್ರಸ್ತುತ ಸಿಸಿಟಿವಿ ದೃಶ್ಯದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರ ಚತ್ತೀಸ್‌ಗಢ್ ರಾಜ್ಯ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಆ ಕೋಚ್ ಮತ್ತು ಕ್ರೀಡಾಪಟುವನ್ನು ವಜಾಗೊಳಿಸಿದೆ. ಆದರೆ ವಜಾಗೊಳಿಸಲು ಕಾರಣ ಏನು ಎಂಬುದನ್ನು ನೀಡಿಲ್ಲ.

ಸಿಸಿಟಿವಿ ದೃಶ್ಯ ವಿವಾದ ಸೃಷ್ಟಿಸಿದ ಕೂಡಲೇ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಶುಕ್ಲಾ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ. ಕೋಚ್ ಮತ್ತು ಕ್ರೀಡಾಪಟು ಮೊಬೈಲ್ ಫೋನ್‌ಗಾಗಿ ಜಗಳವಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಫೋನ್‌ಗಾಗಿ ನಡೆದ ಜಗಳ ಅಷ್ಟೇ ಬೇರೇನೂ ಇಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಶರದ್ ಶುಕ್ಲಾ ಹೇಳಿದ್ದಾರೆ.

ಟೆನಿಸ್ ಟೇಬಲ್ ಹುಡುಗಿಯರ ತಂಡಕ್ಕೆ 19ರ ಹರೆಯದ ವ್ಯಕ್ತಿಯನ್ನು ಕೋಚ್‌ನ್ನಾಗಿ ನೇಮಿಸಿರುವುದರ ಬಗ್ಗೆಯೂ ಈ ಹಿಂದೆ ವಿವಾದಗಳೆದ್ದಿದ್ದವು.

Write A Comment