ಕನ್ನಡ ವಾರ್ತೆಗಳು

 ಭಾರತೀಯ ಮಹಿಳಾ ಬ್ಯಾಂಕ್ ನ 40ನೇ ಶಾಖೆ ಉದ್ಘಾಟನೆ

Pinterest LinkedIn Tumblr

BMB_women_bank_1

ಮಂಗಳೂರು,ಜ.13 : ಮಹಿಳೆಯರಿಗೆ ಈ ಸಮಾಜದಲ್ಲಿ ಅರ್ಥಿಕವಾಗಿ ವಿಶೇಷವಾದ ಸ್ಥಾನ ಮಾನ ನೀಡುವ ಉದ್ದೇಶವನ್ನಿಟ್ಟುಕೊಂಡು ಭಾರತೀಯ ಮಹಿಳಾ ಬ್ಯಾಂಕ್ ತನ್ನ 40 ನೇ ಶಾಖೆಯನ್ನು ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಳಿ ಉದ್ಘಾಟನೆಗೊಂಡಿದೆ.

BMB_women_bank_3 BMB_women_bank_2

ದ.ಕ ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಬ್ಯಾಂಕ್ ಅನ್ನು ಉದ್ಘಾಟಿಸಿದರು. ಬ್ಯಾಂಕಿನ ಎಟಿಎಂ ಸೆಂಟರ್‌ನ್ನು ಕೂಡ ಈ ಸಂಧರ್ಭದಲ್ಲಿ ಮಹಿಳಾ ಬ್ಯಾಂಕಿನ ಎಕ್ಸಿಕ್ಯುಟಿವ್ ಡೈರೆಕ್ಟರ್ ಎಸ್.ಎಂ. ಸ್ವಾತಿ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಕ್ಸಿಕ್ಯುಟಿವ್ ಡೈರೆಕ್ಟರ್ ಎಸ್.ಎಂ. ಸ್ವಾತಿ, ಮಹಿಳಾ ಸಬಲೀಕರಣದ ಉದ್ದೇಶದಿಂದ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ 39 ಶಾಖೆಯನ್ನು ರಾಜ್ಯದಂತಹ ಎಲ್ಲ ಕಡೆ ಪ್ರಾರಂಭಿಸಿದ್ದು, ಇನ್ನೂ 20 ಶಾಖೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ಆರಂಭಿಸುವ ಯೋಜನೆಯನ್ನು ಈ ಭಾರತೀಯ ಬ್ಯಾಂಕ್ ನಿರ್ಣಾಯಿಸಿದ್ದೆ.

BMB_women_bank_5 BMB_women_bank_4

ಮಹಿಳೆಯರಿಗಾಗಿ ಈ ಬ್ಯಾಂಕಿನಲ್ಲಿ ವಿಶೇಷ ಸೌಲಭ್ಯಗಳಿವೆ. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಲು ಬ್ಯಾಂಕ್ ತನ್ನ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ತುಳಸಿ ಮದ್ದಿನೇನಿ, ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಬ್ಯಾಂಕ್‍ನ ಮೂಲಕ ಜಿಲ್ಲೆಯ ಮಹಿಳೆಯರಿಗೆ ಉತ್ತಮ ಸೇವೆ ದೊರಕುವಂತಾಗಲಿ ಎಂದು ಶುಭಹಾರೈಸಿದರು.

BMB_women_bank_6aBMB_women_bank_6

ಕಾರ್ಯಕ್ರಮದಲ್ಲಿ ಬಿ.ಕೆ ಶ್ರೀವಾಸ್ತವ್, ದೌಲ್ತಾನಿ ಇನ್ನಿತರರು ಉಪಸ್ಥಿತರಿದ್ದರು.

Write A Comment