ಕನ್ನಡ ವಾರ್ತೆಗಳು

ಪ್ಲಾನೆಟ್ ಎಸ್‌ಕೆ‌ಎಸ್ ಅತ್ಯಾಧುನಿಕ ಲಕ್ಸುರಿ ಸಮುಚ್ಚಯಕ್ಕೆ ಸಿ‌ಎನ್‌ಬಿಸಿ ಆವಾಝ್ ಚಾನಲ್ ರಿಯಲ್ ಎಸ್ಟೇಟ್ ಅವಾರ್ಡ್ಸ್-2014

Pinterest LinkedIn Tumblr

Sks_CNBC_Award_ 1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ಮಂಗಳೂರಿನ ಪ್ರಸಿದ್ದ ಎಸ್‌ಕೆ‌ಎಸ್ ಸಂಸ್ಥೆಯವರ ಪ್ಲಾನೆಟ್ ಎಸ್‌ಕೆ‌ಎಸ್ ಅತ್ಯಾಧುನಿಕ ಲಕ್ಸುರಿ ಸಮುಚ್ಚಯಕ್ಕೆ ಭಾರತದ ಅತೀ ದೊಡ್ಡ ವ್ಯಾವಹಾರಿಕ ದೃಶ್ಯ ಮಾಧ್ಯಮ ಚಾನಲ್ ಸಿ‌ಎನ್‌ಬಿಸಿ ಆವಾಝ್ ತನ್ನ ‘ರಿಯಲ್ ಎಸ್ಟೇಟ್ ಅವಾರ್ಡ್ಸ್ 2014’ ಕಾರ್ಯಕ್ರಮದಲ್ಲಿ ‘ದ ಬೆಸ್ಟ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ಇನ್ ಟಿಯರ್ || ಸಿಟಿ ಅಂಡರ್ ಅಲ್ಟ್ರಾ ಲಕ್ಸುರಿ ಸೆಗ್ಮೆಂಟ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಂಗಳವಾರ ನಗರದ ಪ್ರತಿಷ್ಠಿತ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಪ್ಲಾನೆಟ್ ಎಸ್‌ಕೆ‌ಎಸ್‌ನ ಆರ್ಕಿಟೆಕ್ಟ್/ಪ್ರವರ್ತಕ ಶ್ರೀ ಸನತ್ ಕುಮಾರ್ ಶೆಟ್ಟಿಯವರು ಈ ಬಗ್ಗೆ ಮಾಹಿತಿ ನೀಡಿದರು.

Sks_CNBC_Award_ 2

 

ಪ್ಲಾನೆಟ್ ಎಸ್‌ಕೆ‌ಎಸ್ ಲಕ್ಸುರಿ ವಸತಿ ಸಮುಚ್ಚಯವು ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ಕದ್ರಿ ಹಿಲ್ಸ್‌ನ ಬಳಿ ನಿರ್ಮಾಣಗೊಂಡಿದೆ. ಈ ಗಗನಚುಂಬಿ ಕಟ್ಟಡವು 4.55 ಎಕ್ರೆ ಸವಿಸ್ತಾರವಾದ ಪ್ರದೇಶದಲ್ಲಿ ಶೇಕಡಾ 10 ಗ್ರೌಂಡ್ ಕವರೇಜ್‌ನೊಂದಿಗೆ ನಿರ್ಮಾಣಗೊಂಡಿದ್ದು ಉಳಿದ ಎಲ್ಲಾ ಪ್ರದೇಶವು ನೈಸರ್ಗಿಕ ಪರಿಸರಕ್ಕಾಗಿ ಮತ್ತು ಫಿಟ್‌ನೆಸ್‌ನಂತಹ ಹೊರಾಂಗಣ ಕ್ರೀಡೆಗಳಿಗಾಗಿ ಮೀಸಲಿರಿಸಲಾಗಿದೆ. ಈ ಯೋಜನೆಯಲ್ಲಿ ವಸ್ತುಗಳನ್ನು ಬಳಸಿಕೊಂಡ ರೀತಿ ಅನುಕರಣೀಯ. ಇಲ್ಲಿ ಅಡಿಪಾಯ ನಿರ್ಮಾಣಕ್ಕಾಗಿ ಉತ್ಖನನ ಮಾಡುವಾಗ ದೊರೆತ ಗ್ರಾನೈಟ್ ಕಲ್ಲನ್ನೇ ಕತ್ತರಿಸಿ ಪೋಲಿಶ್ ಮಾಡಿ ಕಟ್ಟಡದ ಎಲ್ಲಾ ಸಾಮಾನ್ಯ ಪ್ರದೇಶ ಹಾಗೂ ಮೆಟ್ಟಿಲುಗಳಿಗೆ ಅಳವಡಿಸಲಾಗಿದೆ.

ಅಷ್ಟೇ ಅಲ್ಲದೇ ಈ ಸಮುಚ್ಚಯದಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಗಳಾದ ವಿಂಡ್‌ಮಿಲ್ ಹಾಗೂ ಕಟ್ಟಡದ ಎಲ್ಲಾ ಸಾಮಾನ್ಯ ಪ್ರದೇಶಗಳಲ್ಲಿ ಬಳಸುವ ದೀಪಗಳಿಗಾಗಿ ಸೋಲಾರ್ ಶಕ್ತಿ, ನೀರಿನ ಮರುಬಳಕೆ, ಕೊಳಚೆ ನೀರು ಸಂಸ್ಕರಣಾ ಘಟಕ, ನಿರ್ವಹಣಾ ಯೋಗ್ಯ ಹೊರಾಂಗಣ ಇತ್ಯಾದಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.

Sks_CNBC_Award_ 3a

ಭಾರತದಾದ್ಯಂತ ಇರುವ 12,000 ಯೋಜನೆಗಳಲ್ಲಿ ಪ್ರಶಸ್ತಿಗಾಗಿ ಆಯ್ಕೆ ನಡೆದಿದ್ದು, ತೀರ್ಪುಗಾರರಾಗಿ ಹೆಚ್‌ಡಿ‌ಎಫ್‌ಸಿ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಸಿ‌ಇ‌ಒ ಶ್ರೀ ಕೆಕಿ ಮಿಸ್ತ್ರಿ, ಫ್ಯೂಚರ್ ಗ್ರೂಪ್‌ನ ಸಿ‌ಇ‌ಒ ಶ್ರೀ ಕಿಶೋರ್ ಬಿಯಾನಿ, ಐಸಿ‌ಐಸಿ‌ಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಜೀವ್ ಸಬರ್‌ವಾಲ್, ಮಹೀಂದ್ರಾ ಆಂಡ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅರುಣ್ ನಂದಾ, ಎಬಿ‌ಎಮ್ ಆರ್ಕಿಟೆಕ್ಟ್ ಶ್ರೀ ಅಲ್ತಾಫ್ ಮಿಲ್ಲರ್, ಪ್ರನೋನ್ ಕನ್ಸಲ್ಟೆನ್ಸಿಯ ಅಧ್ಯಕ್ಷ ಶ್ರೀ ಪ್ರನೇ ವಾಕಿ, ರಿಜ್ಹ್‌ವಿ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನ ಸ್ಥಾಪಕ ಪ್ರಾಂಶುಪಾಲ ಶ್ರೀ ಅಖ್ತರ್ ಚೌಹಾಣ್, ಡಿ.ಎಂ ಹರೀಶ್ ಆಂಡ್ ಕೋ ಇದರ ಪಾಲುದಾರ ಶ್ರೀ ಅನಿಲ್ ಹರೀಶ್, ಎಝಡ್‌ಬಿನ ಪಾಲುದಾರರಾದ ಝಿಯಾ ಮೋದಿ ಭಾಗವಹಿಸಿದ್ದರು.

22 ಡಿಸೆಂಬರ್ 2014ರಂದು ನವದೆಹಲಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಮ್. ವೆಂಕಯ್ಯ ನಾಯ್ಡು ಅಧ್ಯಕ್ಷತೆ ವಹಿಸಿದ್ದರು. ಪ್ಲಾನೆಟ್ ಎಸ್‌ಕೆ‌ಎಸ್‌ನ ಆರ್ಕಿಟೆಕ್ಟ್/ಪ್ರವರ್ತಕ ಶ್ರೀ ಸನತ್ ಕುಮಾರ್ ಶೆಟ್ಟಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀ ಶಶಿ ಕಿರಣ್ ಶೆಟ್ಟಿ ಪ್ಲಾನೆಟ್ ಎಸ್‌ಕೆ‌ಎಸ್‌ನ ಪ್ರಧಾನ ಪ್ರವರ್ತಕರಾಗಿದ್ದಾರೆ ಎಂದು ಸನತ್ ಶೆಟ್ಟಿಯವರು ವಿವರ ನೀಡಿದರು.

ಇದೇ ಸಂದರ್ಭದಲ್ಲಿ ಬಿಲ್ಡರ್ಸ್ ಅಸೋಸಿಯೇಶನ್ಸ್ ಪರವಾಗಿ ಮಯೂರ ಬಿಲ್ಡರ್ಸ್ ಮಾಲಕ ಸುದೇಶ್ ಕುಮಾರ್ ಅವರು ಸನತ್ ಕುಮಾರ್ ಶೆಟ್ಟಿಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಮಾಜಿ ಅಧ್ಯಕ್ಷ ಕೆ.ಸಿ.ನಾಯಕ್, ಚಾರ್ಟೆಡ್ ಅಕೌಂಟೆಂಟ್ ಡಿ.ಬಿ.ಮೆಹ್ತಾ, ಅರ್ಕಿಟೆಕ್ಟ್ಸ್ ವಿನೋದ್ ಅರನಾ, ಆನಂದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Sks_CNBC_Award_ 3 Sks_CNBC_Award_ 4 Sks_CNBC_Award_ 5 Sks_CNBC_Award_ 6 Sks_CNBC_Award_ 7 Sks_CNBC_Award_ 8 Sks_CNBC_Award_ 9 Sks_CNBC_Award_ 10 Sks_CNBC_Award_ 11 Sks_CNBC_Award_ 12 Sks_CNBC_Award_ 13 Sks_CNBC_Award_ 14 Sks_CNBC_Award_ 15 Sks_CNBC_Award_ 16 Sks_CNBC_Award_ 17 Sks_CNBC_Award_ 18 Sks_CNBC_Award_ 19 Sks_CNBC_Award_ 20 Sks_CNBC_Award_ 21 Sks_CNBC_Award_ 22 Sks_CNBC_Award_ 23 Sks_CNBC_Award_ 24 Sks_CNBC_Award_ 25 Sks_CNBC_Award_ 26 Sks_CNBC_Award_ 27 Sks_CNBC_Award_ 28 Sks_CNBC_Award_ 29 Sks_CNBC_Award_ 30 Sks_CNBC_Award_ 31 Sks_CNBC_Award_ 32 Sks_CNBC_Award_ 33 Sks_CNBC_Award_ 34 Sks_CNBC_Award_ 35 Sks_CNBC_Award_ 36 Sks_CNBC_Award_ 37 Sks_CNBC_Award_ 38 Sks_CNBC_Award_ 39 Sks_CNBC_Award_ 40 Sks_CNBC_Award_ 41

Sks_CNBC_Award_-46

Sks_CNBC_Award_ 42 Sks_CNBC_Award_ 50

ಎಸ್‌ಕೆ‌ಎಸ್ ಯೋಜನೆಯು ಪಡೆದ ಒಟ್ಟು ಪ್ರಶಸ್ತಿಗಳ ವಿವರ :

ಭಾರತದ ಅತೀ ದೊಡ್ಡ ವ್ಯಾವಹಾರಿಕ ದೃಶ್ಯ ಮಾಧ್ಯಮ ಚಾನಲ್ ಸಿ‌ಎನ್‌ಬಿಸಿ ಆವಾಝ್‌ನಿಂದ ದ ಬೆಸ್ಟ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ಇನ್ ಟಿಯರ್ || ಸಿಟಿ ಅಂಡರ್ ಅಲ್ಟ್ರಾ ಲಕ್ಸುರಿ ಸೆಗ್ಮೆಂಟ್’.

ಬ್ರಿಟಿಷ್ ಸೇಫ್ಟಿ ಕೌನ್ಸಿಲ್‌ನಿಂದ – 5 ಮಿಲಿಯನ್ ಸೇಫ್ ಮ್ಯಾನ್ ಹವರ್‍ಸ್‌ಗಾಗಿ – ಇಂಟರ್‌ನ್ಯಾಶನಲ್ ಸೇಫ್ಟಿ ಅವಾರ್ಡ್ 2014.

ಕ್ರೆಡಾ ಸ್ಟೇಟ್‌ಕಾನ್ 2012ನಿಂದ – ಮೋಸ್ಟ್ ಎಮರ್ಜಿಂಗ್ ಡೆವಲಪರ್‍ಸ್ ಇನ್ ಕೋಸ್ಟಲ್ ಕರ್ನಾಟಕ ಪ್ರಶಸ್ತಿ.

ಎ‌ಐಸಿ‌ಎ – ಆರ್ಟಿಸ್ಟ್ಸ್ ಇನ್ ಕಾಂಕ್ರೀಟ್ ಅವಾರ್ಡ್ಸ್ 2011ನಿಂದ ನ್ಯಾಶನಲ್ ಲೆವೆಲ್ ಬೆಸ್ಟ್ ಓವರ್‌ಆಲ್ ಡಿಸೈನ್ ವಿಭಾಗದಲ್ಲಿ – ಎಕ್ಸಲೆನ್ಸ್ ಇನ್ ಸ್ಟ್ರಕ್ಚರಲ್ ಡಿಸೈನ್ ಪ್ರಶಸ್ತಿ.

ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಈ ವಿಳಾಸವನ್ನು ಸಂಪರ್ಕಿಸ ಬಹುದು. ಎಸ್‌ಕೆ‌ಎಸ್ ನೆಟ್‌ಗೇಟ್ ಎಲ್‌ಎಲ್‌ಪಿ ಈ1, ಕಾಸಾ ಗ್ರಾಂಡೆ ಮಾಲ್ ಸ್ಟರಕ್ ರಸ್ತೆ, ಫಳ್ನೀರ್, ಮಂಗಳೂರು- 575001. ದೂರವಾಣಿ: 0824-2424161, 2424167 / ವೆಬ್‌ಸೈಟ್: www.planetsks.com

Write A Comment