ಕನ್ನಡ ವಾರ್ತೆಗಳು

ಏಕಕಾಲದಲ್ಲಿ 150 ಬಸ್‌ಗಳ ನಿಲುಗಡೆಗೆ ಅವಕಾಶ – ಜ.26ರಂದು ಹೊಸ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ

Pinterest LinkedIn Tumblr

Comisnr_Visit_Pumpwel_1 (1)

ಮಂಗಳೂರು, ಜ.7 : ಪಂಪ್‌ವೆಲ್ ಬಳಿ ಯಲ್ಲಿ ಈಗಾಗಲೇ ಭೂಸ್ವಾಧೀನ ಮಾಡಿ ಕೊಂಡಿರುವ ಪ್ರದೇಶದಲ್ಲಿ ಮುಂದಿನ ಎರಡೂವರೆ ವರ್ಷದೊಳಗೆ ಕೇರಳ- ಕರ್ನಾಟಕ್ಕೆ ಸಂಬಂಧಿಸಿದ ಅಂತಾರಾಜ್ಯ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

Comisnr_Visit_Pumpwel_1 (2) Comisnr_Visit_Pumpwel_1 (3)

ಪಂಪ್‌ವೆಲ್ ಬಳಿಯಿರುವ ಹೊಸ ನಿಲ್ದಾ ಣದ ಯೋಜಿತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದರು.
ಪ್ರಸಕ್ತ ಯೋಜಿತ ಈ ಬಸ್ ನಿಲ್ದಾಣ ಕ್ಕಾಗಿ 11.4 ಎಕ್ರೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಳ್ಳಬೇಕೆಂಬ ಪ್ರಸ್ತಾಪ ವನ್ನು ಕೈಬಿಡಲಾಗಿದೆ. ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿರುವ 7.28 ಎಕ್ರೆ ಪ್ರದೇಶ ದಲ್ಲಿ ಕೇಂದ್ರ ಬಸ್ ನಿಲ್ದಾಣವನ್ನು ನಿರ್ಮಿ ಸಲಾಗುವುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕ ಲೋಬೊ ವಿವರಿಸಿದರು.

ಯೋಜಿತ ಬಸ್ ನಿಲ್ದಾಣದಲ್ಲಿ ಏಕ ಕಾಲದಲ್ಲಿ 150 ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ದಿನಂಪ್ರತಿ 525(400 ಖಾಸಗಿ, 125 ಸರಕಾರಿ ಬಸ್) ಬಸ್‌ಗಳ ನಿಲುಗಡೆಗೆ ಅವಕಾಶವಿದೆ. 2,500 ಟ್ರಿಪ್ ಬಸ್ ಸಂಚಾರಕ್ಕೆ ಅವಕಾಶವಿರುತ್ತದೆ ಎಂದು ಶಾಸಕರು ಹೇಳಿದರು. ಇಲ್ಲಿ ನಿರ್ಮಾಣವಾಗಲಿರುವ ಮೂರು ಅಂತಸ್ತುಗಳ ಬಸ್ ನಿಲ್ದಾಣ ಕಟ್ಟಡದಲ್ಲಿ ಕೇರಳ-ಪುತ್ತೂರು, ಮೂಡುಬಿದಿರೆಯ ಬಸ್‌ಗಳಿಗೆ ಒಂದು ಅಂತಸ್ತು, ಉಡುಪಿ ಕಡೆಯ ಬಸ್‌ಗಳು ತಂಗಲು ಒಂದು ಅಂತಸ್ತು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಒಂದು ಅಂತಸ್ತು ಮೀಸಲಿಡಲಾಗುವುದು ಎಂದವರು ತಿಳಿಸಿದರು.

Comisnr_Visit_Pumpwel_1 (4) Comisnr_Visit_Pumpwel_1 (5)

ಹಾಲಿ ಇರುವ ಕೆಎಸ್ಸಾರ್ಟಿಸಿ ಮತ್ತು ಸಿಟಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಶಾಸಕ ಜೆ.ಆರ್.ಲೋಬೊ ಪ್ರತಿಕ್ರಿಯಿ ಸಿದರು.

ರಾಷ್ಟ್ರೀಯ ಹೆದ್ದಾರಿಯಿಂದ ಅನುಮತಿ ಅಗತ್ಯ:
ಪ್ರಸ್ತಾವಿತ ಕೇಂದ್ರ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿದೆ. ಅನುದಾನಕ್ಕಾಗಿ ಸರಕಾರಕ್ಕೆ ವಿಶೇಷ ಪ್ರಸ್ತಾಪನೆ ಕಳುಹಿಸಬೇಕಿದೆ ಎಂದು ಶಾಸಕರೊಂದಿಗಿದ್ದ ಮೇಯರ್ ಮಹಾಬಲ ಮಾರ್ಲ ತಿಳಿಸಿದರು. ಬಸ್ ನಿಲ್ದಾಣದ ವಿನ್ಯಾಸಕ್ಕೆ ಟೆಂಡರ್ ಕರೆದು ಎರಡು ಸಂಸ್ಥೆಗಳಿಗೆ ಅವಕಾಶ ಕಲ್ಪಿಸ ಲಾಗಿದೆ ಎಂದು ಮೇಯರ್ ಹೇಳಿದರು.

Comisnr_Visit_Pumpwel_1 (6) Comisnr_Visit_Pumpwel_1 (7)

ಜ.26ರೊಳಗೆ ಹೊಸ ಯೋಜನೆಗೆ ಚಾಲನೆ: ‘‘ಈ ಬಾರಿಯ ಗಣರಾಜ್ಯ ದಿನವಾದ ಜ.26ರಂದು ಬಸ್ ನಿಲ್ದಾಣ ನಿರ್ಮಾಣ ಯೋಜನೆಗೆ ಚಾಲನೆ ನೀಡುವ ಆಲೋಚನೆ ಇದೆ. ಕಳೆದ 5 ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆಯೊಂದಿಗೆ ಇರುವ ಯೋಜನೆಯ ವಸ್ತುಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕ ಮತ್ತು ಕೇರಳ ರಾಜ್ಯಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯದ ಬಸ್ ನಿಲ್ದಾಣವಾಗಿ ಇದನ್ನು ಅಭಿವೃದ್ಧಿಪಡಿಸಬೇಕಾಗಿದೆ’’ ಎಂದು ಮನಪಾ ಆಯುಕ್ತೆ ಹೆಪ್ಸಿಬಾ ರಾಣಿ ಕೋರ್ಲ ಪಟ್ಟಿ ತಿಳಿಸಿದರು.

Write A Comment