ಕನ್ನಡ ವಾರ್ತೆಗಳು

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ನೂತನ ಜಿಲ್ಲಾ ಸಮಿತಿ ಆಯ್ಕೆ

Pinterest LinkedIn Tumblr

CFI_Udupi_News

ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಉಡುಪಿಯಲ್ಲಿ ಆಂತರಿಕ ಚುನಾವಣೆಯ ಮೂಲಕ ನೆರವೇರಿತು. ನೂತನ ಜಿಲ್ಲಾಧ್ಯಕ್ಷರಾಗಿ ಮೊಹಮ್ಮದ್ ಶಫೀಕ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಶಾಹಿದ್ ಕಂಡ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ರೆಹಾನ್ ಆದಿವುಡುಪಿ, ಜೊತೆ ಕಾರ್ಯದರ್ಶಿಯಾಗಿ ಪರೇಶ್ ಶೇಖ್ ಹಾಗೂ ಕೋಶಾಧಿಕಾರಿಯಾಗಿ ಸಾಕಿಫ್ ಕಾಪು ಆಯ್ಕೆಯಾದರು ಮತ್ತು ಜಿಲ್ಲಾ ಸಮಿತಿ ಸದಸ್ಯರಾಗಿ ಆಶಿಖ್ ಮೂಳೂರು, ಸಹೀರ್ ಗಂಗೊಳ್ಳಿ, ಆವೇಜ್ ಮಲ್ಪೆ ಮತ್ತು ಸಿದ್ದೀಕ್ ಕಟಪಾಡಿ ಇವರುಗಳನ್ನು ಆಯ್ಕೆಮಾಡಲಾಯಿತು.

ಚುನಾವಣಾ ಪ್ರಕ್ರಿಯೆಯನ್ನು ಕ್ಯಾಂಪಸ್ ಫ್ರಂಟ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯರಾದ ತುಫೇಲ್ ಹಾಗೂ ಸನಾವುಲ್ಲಾ ನೆರವೇರಿಸಿಕೊಟ್ಟರು.

Write A Comment