ಕನ್ನಡ ವಾರ್ತೆಗಳು

ಕಾನೂನಿನ ಅರಿವು ಅಗತ್ಯ: ಇ. ಚಂದ್ರಶೇಖರನ್ ನಾಯರ್

Pinterest LinkedIn Tumblr

Report_Law_Infor_mation

ಕುಂಬಳೆ,ಡಿ.16: ಪ್ರಜಾಪ್ರಭುತ್ವದಲ್ಲಿ ಕಾನೂನು ಮತ್ತು ಅದರ ಸರಿಯಾದ ಆಚರಣೆಗೆ ವಿಶೇಷ ಮಹತ್ವ ಇದೆ. ಸುಸ್ಥಿರ ಜನಜೀವನಕ್ಕೆ ಕಾನೂನಿನ ಸರಿಯಾದ ಅಳವಡಿಕೆ ಅಗತ್ಯ. ತರಾತುರಿಯಲ್ಲಿ ಜ್ಯಾರಿಗೆ ತರುವ ಕಾನೂನುಗಳಿಂದ ಉಪಕಾರದ ಬದಲಾಗಿ ತೊಂದರೆಗಳೇ ಹೆಚ್ಚುತ್ತಿವೆ. ಆದ್ದರಿಂದ ಪೂರ್ಣ ವಿಮರ್ಶೆಯ ನಂತರ ಹೊಸ ಕಾನೂನುಗಳನ್ನು ಅಳವಡಿಸಬೇಕು. ಈ ಬಗ್ಗೆ ಎಲ್ಲರಿಗೂ ತಿಳುವಳಿಕೆ ಅಗತ್ಯ. ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಇ. ಚಂದ್ರಶೇಖರನ್ ನಾಯರ್ ಅಭಿಪ್ರಾಯಪಟ್ಟರು. ಅವರು ಗ್ರಾಮೋತ್ಥಾನ ಕೇಂದ್ರದ ಆಶ್ರಯದಲ್ಲಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಕಾನೂನು ತಿಳುವಳಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಮದನಗುಳಿ, ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕ ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ ಉಮಾಮಹೇಶ್ವರಿ ವಂದಿಸಿದರು.

Write A Comment