ಕನ್ನಡ ವಾರ್ತೆಗಳು

ಪತ್ನಿ ಕೋರಿದ್ದ ಜೀವನಾಂಶ ಅರ್ಜಿ ವಜಾ; ಮಕ್ಕಳಿಗೆ ಜೀವನಾಂಶ ಕೊಡಲು ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಮಹತ್ತರ ತೀರ್ಪು

Pinterest LinkedIn Tumblr

court

ಕುಂದಾಪುರ: ತಾಲೂಕು ಸಿದ್ಧಾಪುರ ಗ್ರಾಮದ ಮತ್ತಿಬೇರು ಚಂದ್ರ ಪೂಜಾರಿ ಯವರ ಹೆಂಡತಿ ಕಮಲಶಿಲೆಯ ಶ್ರೀಮತಿ ಲಕ್ಷ್ಮೀ ಪೂಜಾರ್ತಿ ಇವರು ತನ್ನ ಗಂಡನ ವಿರುದ್ಧ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ವಜಾ ಗೊಳಿಸಿದೆ.

ಅರ್ಜಿದಾರಿ ಲಕ್ಷ್ಮೀ ಪೂಜಾರ್ತಿ ತನ್ನ ಗಂಡನ್ನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದು, ನನಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿಬ್ಬರು ಇದ್ದು ಜೀವನಕ್ಕಾಗಿ ಜೀವನಾಂಶ ಕೋರಿ ಗಂಡನ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಸದ್ರಿ ದಾವೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯ ಅರ್ಜಿದಾರ್‍ತಿ ಲಕ್ಷ್ಮೀಪೂಜಾರ್‍ತಿಗೆ ದುಡಿಯುವ ಸಾಮರ್ಥ್ಯ ಇದ್ದು ಪತಿ ಇವರನ್ನು ನಿರ್ಲಕ್ಷಿವುದಿಲ್ಲ. ದುರುದ್ದುದ್ದೇಶದಿಂದ ದಾವೆ ದಾಖಲಿಸಿರುವುದಾಗಿ ಮನಗಂಡು ಅರ್ಜಿಯನ್ನು ವಜಾಗೊಳಿಸುತ್ತಾ ಅಪ್ರಾಪ್ತ ಮಕ್ಕಳಿಬ್ಬರು ಮಾತ್ರ ಜೀವನಾಂಶ ಪಡೆಯಲು ಹಕ್ಕುದಾರರೆಂದು ಮಹತ್ತರ ತೀರ್ಪು ನೀಡಿದೆ.
ಎದ್ರುದಾರ ಚಂದ್ರ ಪೂಜಾರಿಯವರ ಪರವಾಗಿ ಕುಂದಾಪುರದ ನ್ಯಾಯವಾದಿ ಯೋಗೇಂದ್ರ ನಾಯ್ಕ ಕೊಡ್ಲಾಡಿ ವಾದಿಸಿದ್ದರು.

Write A Comment